ಇಕೆನ್‌(EKEN) ನಿಂದ ಬಜೆಟ್‌ ಟ್ಯಾಬ್ಲೆಟ್‌ ಬಿಡುಗಡೆ

Posted By: Vijeth

ಇಕೆನ್‌(EKEN) ನಿಂದ ಬಜೆಟ್‌ ಟ್ಯಾಬ್ಲೆಟ್‌ ಬಿಡುಗಡೆ
ಹಾಂಕಾಂಗ್‌ ಮೂಲದ ಟ್ಯಾಬ್ಲೆಟ್‌ ಪಿಸಿ ತಯಾರಿಕಾ ಸಂಸ್ಥೆಯಾದಂತಹ ಇಕೆನ್‌ ಎಲೆಕ್ಟ್ರಾನಿಕ್ಸ್‌ ಗುರುವಾರ ತನ್ನಯ ನೂತನ ಆಂಡ್ರಾಯ್ಡ್‌ ಚಾಲಿತ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ. ಇಕೆನ್‌ ಲೆಪರ್ಡ್‌ ಹೆನರಿನಲ್ಲಿ ಸಂಸ್ಥೆಯು ನೂತನ ಟ್ಯಾಬ್ಲೆಟ್‌ಗಳನ್ನು 6,900 ರಿಂದ 11,999 ರೂ. ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಟ್ಯಾಬ್ಲೆಟ್‌ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಇಕೆನ್‌ ಸಂಸ್ಥೆಯ ಸಿಎಒ ಎಡಿಸ್ಸನ್‌ ಚಾಂಗ್‌ "ಭಾರತದಲ್ಲಿ ಕಡಿಮೆ ಬೆಲೆಯ ಟ್ಯಾಬ್ಲೆಟ್‌ಗಳಿಗೆ ಬಹು ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಇದರಿಂದ ಪ್ರೇರಣೆ ಪಡೆದು ಭಾರತದಲ್ಲಿ ಉತ್ತಮ ಗುಣಮಟ್ಟದ ಟ್ಯಾಬ್ಲೆಟ್‌ಗಳನ್ನು ಪರಿಚಯಿಸಲು ಮುಂದಾಗಿದ್ದೇವೆ" ಎಂದು ಹೇಳಿದರು.

ಎಟಿಜಿಇ ಸಂಸ್ಥೆಯ ಸಿಎಒ ಜಾರ್ಜ್‌ ಥಾಮಸ್‌ ಮಾತನಾಡಿ ಇಕೆನ್‌ ಸಂಸ್ಥೆಯು ಕೇರಳಾ ಮೂಲದ ಆಲ್ಡೋಸ್‌ ಗ್ಲೇರ್‌ ಟ್ರೇಡ್‌ ಎಕ್ಸಪೋರ್ಟ್ಸ ನೊಂದಿಗೆ ಉತ್ಪನ್ನಗಳ ಅಂತರರಾಷ್ಟ್ರೀಯ ವಿಲೇವಾರಿಗಾಗಿ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದರು. ಅವರಪ್ರಕಾರ ಭಾರತದಲ್ಲಿ ಡಿಸೆಂಬರ್‌ ತಿಂಗಳಿನ ವೇಳೆಗೆ ಕೇವಲ ಕೇರಳಾದಲ್ಲಿಯೇ 10,000 ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

ಅಂದಹಾಗೆ ಸಂಸ್ಥೆಯ ಪ್ರಕಾರ ಈ ನೂತನ ಟ್ಯಾಬ್ಲೆಟ್‌ 7, 8 ಹಾಗೂ 9.7 ಇಂಚಿನ ಮಾದರಿಗಳಲ್ಲಿ ಲಭ್ಯವಾಗುವುದಾಗಿ ತಿಳಿಸಿದೆ. ಅಲ್ಲದೆ ನೂತನ ಟ್ಯಾಬ್ಲೆಟ್‌ನಲ್ಲಿ ವಿಡಿಯೋ ಕರೆಗಾಗಿ 1.3MP ಮುಂಬದಿಯ ಕ್ಯಾಮೆರಾ, Wi-Fi ಹಾಗೂ 3G , 8GB iಆಂತರಿಕ ಮೆಮೊರಿ, 32GB ವರೆಗಿನ ಮೆಮೊರಿ ವಿಸ್ತರಣೆ ಹಾಗೂ HD 1080p ಪ್ಲೇಬ್ಯಾಕ್‌ ಹೊಂದಿದೆ.

ಇದಲ್ಲದೆ ಇಕನ್‌ನಲ್ಲಿ ಗೂಗಲ್‌ ಪ್ಲೇನ ಸಂಪೂರ್ಣ ಆಕ್ಸೆಸ್‌ ಹೊಂದಿದೆ.

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಇನ್ಫಿನಿಟಿ (P275) ಬಿಡುಗಡೆ

Read In English...

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot