ನಿಮ್ಮ ಇಮೇಲ್ ಸುರಕ್ಷತೆಗಾಗಿ ಪಂಚ ತಂತ್ರಗಳು

By Varun
|
ನಿಮ್ಮ ಇಮೇಲ್ ಸುರಕ್ಷತೆಗಾಗಿ ಪಂಚ ತಂತ್ರಗಳು

ಸೋಮವಾರವಾದ ಇಂದು ಆಫೀಸಿಗೆ ಬಂದೊಡನೆ ನಾವು ಮಾಡುವ ಮೊದಲ ಕೆಲಸ ಇಮೇಲ್ ಚೆಕ್ ಮಾಡುವುದು. ಸ್ನೇಹಿತರು, ನ್ಯೂಸ್ ಲೇಟರ್, ಜೋಕ್ಸ್, ಫೇಸ್ ಬುಕ್ ಅಪ್ಡೇಟ್ ಗಳು,ಹೀಗೆ ರಾಶಿ ರಾಶಿ ಮೇಲ್ ಗಳು ನಮ್ಮ ಇನ್ ಬಾಕ್ಸ್ ಗೆ ಬಂದು ಬೀಳುತ್ತದೆ. ಇದೆಲ್ಲದರ ನಡುವೆ spam ಮೇಲುಗಳು ಕೂಡಾ ಹಾವಳಿ ಕೊಡುತ್ತವೆ. ಇದನ್ನೆಲ್ಲಾ ಚೆಕ್ ಮಾಡಿ ಡಿಲೀಟ್ ಮಾಡಿ ಸರಿಯಾದ ಮೇಲ್ ಗಳಿಗೆ ಉತ್ತರ ಕಳುಹಿಸುವ ಹೊತ್ತಿಗೆ ಸಾಕಷ್ಟು ಸಮಯ ಹಿಡಿಯುತ್ತದೆ.

ಹಾಗಿದ್ದರೆ ನಿಮ್ಮ ಖಾಸಗೀ ಮಾಹಿತಿಗೆ ಯಾವ ಅಪಾಯವೂ ಬರದಂತೆ ಇಮೇಲ್ ಅನ್ನು ಸುರಕ್ಷಿತವಾಗಿ ಅಂತರ್ಜಾಲದಲ್ಲಿ ಹೇಗೆ ಉಪಯೋಗಿಸಬಹುದು ಎಂದು ತಿಳಿದುಕೊಳ್ಳಲುಇಲ್ಲಿದೆ 5 ಟಿಪ್ಸ್:

1. ಶಕ್ತಿಯುತವಾದ ಪಾಸ್ವರ್ಡ್- ನಿಮ್ಮ ಇಮೇಲ್ ಖಾತೆಯ ಪಾಸ್ವರ್ಡ್ ಶಕ್ತಿಯುತವಾಗಿರಬೇಕು. ಯಾಕೆಂದರೆ ನಿಮ್ಮ ಮೇಲ್ ಖಾತೆಗೆ ನಿಶ್ಯಕ್ತ ಪಾಸ್ವರ್ಡ್ ಇದ್ದರೆ ಹ್ಯಾಕರುಗಳಿಗೆ ನಿಮ್ಮ ಖಾತೆ ಸುಲಭದ ತುತ್ತಾಗಬಹುದು. ಅದರಲ್ಲೂ ನಿಮ್ಮದು ಜಿಮೇಲ್ ಇಲ್ಲವೆ ಯಾಹೂ ಖಾತೆಯಾಗಿದ್ದರೆ ಇನ್ನೂ ಹುಷಾರಾಗಿರಬೇಕು. ಅಕ್ಷರಗಳ ಹಾಗು ಸಂಖ್ಯೆಗಳ ಸಂಯೋಜನೆ ಇರುವ ಪಾಸ್ವರ್ಡ್ ಹೆಚ್ಚು ಪ್ರಯೋಜನಕಾರಿ.

2. ಸೈಬರ್ ಕೇಂದ್ರಗಳಲ್ಲಿ ಹುಷಾರಾಗಿರಿ- ನೀವು ಇಮೇಲ್ ಅನ್ನು ಯಾವುದೇ ಸೈಬರ್ ಕೇಂದ್ರಗಳಲ್ಲಿ ಚೆಕ್ ಮಾಡಿದ ಮೇಲೆ ಲಾಗ್ ಔಟ್ ಮಾಡಿದ್ದೀರಾ ಎಂದು ಪರೀಕ್ಷಿಸಿ. ಇಲ್ಲದಿದ್ದರೆ ನಿಮ್ಮ ಖಾತೆಯನ್ನು, ನಿಮ್ಮ ನಂತರ ಬರುವ ಗ್ರಾಹಕ ದುರುಪಯೋಗಪಡಿಸಿಕೊಳ್ಳಬಹುದು.

3. ಇಮೇಲ್ ಅನ್ನು ಕಾಪಾಡಿಕೊಳ್ಳಿ- ಇ ಮೇಲ್ ಅಂದರೆ ಅದು ನಮ್ಮ ಇಂಟರ್ನೆಟ್ ವಿಳಾಸ ಇದ್ದಹಾಗೆ. ನಮ್ಮನ್ನು ನಾವು represent ಮಾಡಿಕೊಳ್ಳುವುದು ಮೇಲ್ ಐಡಿ ಮೂಲಕವೆ. ಸಾಮಾಜಿಕ ಜಾಲ ತಾಣಗಳಲ್ಲಿ ನಿಮ್ಮ ಮೇಲ್ ವಿಳಾಸವನ್ನು ಕೊಡುವುದು, ಹಾಗು ಬ್ಲಾಗುಗಳಲ್ಲಿ ನಿಮ್ಮ ಪ್ರತಿಕ್ರಿಯೆ ನೀಡುವಾಗ ಇಮೇಲ್ ಕೊಡುವುದು ಮಾಡಬೇಡಿ. ಇಲ್ಲದಿದ್ದರೆ ನೀವು spammerಗಳಿಗೆ ಸುಲಭ ಗುರಿಯಾಗುತ್ತೀರಿ.

4. ನಿಮ್ಮ ಕಂಪ್ಯೂಟರ್ ಲಾಕ್ ಮಾಡಿ - ಕೆಲಸ ಮಾಡುವ ಜಾಗದಲ್ಲಿ ಹುಷಾರಾಗಿರಬೇಕು. ನೀವು ನಿಮ್ಮ ಆಫೀಸಿನ ಕಂಪ್ಯೂಟರ್ ಮುಂದೆ ಇಲ್ಲದಿದ್ದರೆ ಲಾಕ್ ಮಾಡಿ. ಇಲ್ಲದಿದ್ದರೆ ನಿಮ್ಮ ಸಹ ಕೆಲಸಗಾರರು ನಿಮ್ಮ ಇಮೇಲ್ ಓದಬಹುದು ಇಲ್ಲವೆ ಪಾಸ್ವರ್ಡ್ reset ಮಾಡಿಬಿಡಬಹುದು.

5. ನಕಲಿ ಮೇಲ್ ಬಗ್ಗೆ ಹುಷಾರಾಗಿರಿ - "security ಕಾರಣಗಳಿಗಾಗಿ ಪಾಸ್ವರ್ಡ್ reset ಮಾಡಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ" ಅನ್ನೋ ಮೇಲ್ ಗಳನ್ನು, ನೀವು ಎಲ್ಲಿ ಇಮೇಲ್ ಖಾತೆ ಹೊಂದಿದ್ದೀರೋ ಆ ಕಂಪನಿಯ ಹೆಸರಿನಿಂದ ಯಾವುವುದಾದರೂ ಎಚ್ಚರಿಕೆ ಮೇಲ್ ಬಂದಿದ್ದರೆ ಹುಷಾರಾಗಿರಿ. ಅದನ್ನು ಕ್ಲಿಕ್ ಮಾಡಲೇಬೇಡಿ.

ಈ ಮೇಲಿನ ಟಿಪ್ಸ್ ಅನ್ನು ಅನುಸರಿಸಿದರೆ ನಿಮ್ಮ ಇಮೇಲ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು ಹಾಗು ಸ್ಪಾಮ್ ಮೇಲ್ ಗಳನ್ನೂ ತಪ್ಪಿಸಬಹುದು. ನಿಮ್ಮ ಹತ್ತಿರವೂ ಈ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಟಿಪ್ಸ್ ಇದ್ದರೆ ದಯವಿಟ್ಟು ನಮಗೂ ತಿಳಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X