ಥಿಂಕ್ ಮಾಡಿ, 3ಜಿ ಲೆನೊವೊ ಥಿಂಕ್ ಪ್ಯಾಡ್

Posted By: Staff
ಥಿಂಕ್ ಮಾಡಿ, 3ಜಿ ಲೆನೊವೊ ಥಿಂಕ್ ಪ್ಯಾಡ್
ಲೆನೊವೊ ಕಂಪನಿಯ ಜನಪ್ರಿಯ ಥಿಂಕ್ ಪ್ಯಾಡ್ ಲ್ಯಾಪ್ ಟಾಪ್ 3ಜಿ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ. ನೂತನ ಥಿಂಕ್ ಪ್ಯಾಡ್ ಆವೃತ್ತಿಯು 3ಜಿ ಮನರಂಜನೆ ಮತ್ತು ಇನ್ನಿತರ ಹಲವು ಸೌಲಭ್ಯಗಳನ್ನು ಹೊಂದಿರಲಿದೆ. ಈ ಹಿಂದಿನ ಥಿಂಕ್ ಪ್ಯಾಡ್ ನಲ್ಲಿ ವೈಫೈ ಇನ್ನಿತರ ಸೌಲಭ್ಯಗಳಿದ್ದವು.

ಆದರೆ ಇದೀಗ ಕಂಪನಿಯು ತುಂಬಾ ಥಿಂಕ್ ಮಾಡಿ ಥಿಂಕ್ ಪ್ಯಾಡ್ ಗೆ 3ಡಿ ಸೌಲಭ್ಯ ನೀಡುತ್ತಿದೆ. ಯಾಕೆಂದರೆ ಪ್ರಸಕ್ತ ಟ್ರೆಂಡ್ ನಲ್ಲಿ 3ಜಿ ಇಲ್ಲದಿದ್ದರೆ ವೈಫೈ ಹೆಚ್ಚು ಪ್ರಯೋಜನಕಾರಿಯಾಗಿಲ್ಲ. ಇದೇ ಕಾರಣಕ್ಕೆ ಕಂಪನಿಯು 3ಜಿ ಅವತಾರದ ಲ್ಯಾಪ್ ಟಾಪ್ ಹೊರತರಲಿದೆ.

ಮೂಲಗಳ ಪ್ರಕಾರ ನೂತನ 3ಜಿ ಥಿಂಕ್ ಪ್ಯಾಡಿಗೆ ಕಂಪನಿಯು ಕ್ವಾಲ್ ಕಮ್ ಗೊಬಿ 300 ಪ್ಲಾಟ್ ಫಾರ್ಮ್ ಬಳಸಲಿದೆ. ಇಲ್ಲಿವರೆಗೆ ಈ ಗ್ಯಾಡ್ಜೆಟ್ ಜಿಎಸ್ಎಂ ಮತ್ತು ಸಿಡಿಎಂಎ ನೆಟ್ ವರ್ಕ್ ಗಳಿಗೆ ಸಪೋರ್ಟ್ ಮಾಡುತ್ತಿತ್ತು. ರೋಮಿಂಗ್ ಸೌಲಭ್ಯ ಕೂಡ ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಹಳೆಯ ಥಿಂಕ್ ಪ್ಯಾಡ್ ಎಲ್ಲಾ ನಿಟ್ಟಿನಲ್ಲಿ ಗ್ರಾಹಕರಿಗೆ ಸಂಪೂರ್ಣ ಅನುಕೂಲವಾಗಿರಲಿಲ್ಲ.

ಇದೀಗ ನೂತನ ಗ್ಯಾಡ್ಜೆಟ್ ಗೊಬಿ 3000 ತಂತ್ರಜ್ಞಾನ ಹೊಂದಿರುವುದರಿಂದ ಸುಲಭವಾಗಿ ಕನೆಕ್ಟ್ ಮಾಡಬಹುದಾಗಿದೆ. ಬೇರೆ ನೆಟ್ ವರ್ಕಿಗ್ ಕನೆಕ್ಟ್ ಮಾಡಲು ಸಾಫ್ಟ್ ವೇರ್ ಬದಲಾಯಿಸುವ ಅಗತ್ಯವೂ ಇಲ್ಲ.

ಒಟ್ಟಾರೆಯಾಗಿ ಹಳೆಯ ಥಿಂಕ್ ಪ್ಯಾಡಿಗಿಂತ ನೂತನ ಥಿಂಕ್ ಪ್ಯಾಡ್ ಹೆಚ್ಚು ಜನರಿಗೆ ಇಷ್ಟವಾಗಲಿದೆ. ಇದಕ್ಕೆ ಪ್ರಮುಖವಾಗಿ 3ಜಿ ಸಂಪರ್ಕ ಕಾರಣವಾಗಲಿದೆ. ನೂತನ ಪರಿಷ್ಕೃತ ಥಿಂಕ್ ಪ್ಯಾಡ್ ದರ ಮತ್ತು ಇತರ ವಿಶೇಷತೆಗಳ ಕುರಿತು ಹೆಚ್ಚಿನ ಮಾಹಿತಿಗಳು ಸದ್ಯಕ್ಕೆ ಲಭ್ಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot