ಈ 3ಡಿ ಟ್ಯಾಬ್ಲೆಟ್ ನೋಡಲು ಕನ್ನಡಕ ಬೇಕಿಲ್ಲ!!

By Super
|

ಈ 3ಡಿ ಟ್ಯಾಬ್ಲೆಟ್ ನೋಡಲು ಕನ್ನಡಕ ಬೇಕಿಲ್ಲ!!
3ಡಿ ವಿಡಿಯೋ ಅಥವಾ 3ಡಿ ಚಿತ್ರ ಅಂದಾಕ್ಷಣ ನೆನಪಿಗೆ ಬರುವುದು 3ಡಿ ಕನ್ನಡಕಗಳು. ಥಿಯೇಟರುಗಳನ್ನು 3ಡಿ ಕನ್ನಡಕಗಳನ್ನು ಧರಿಸುವುದು ಕಷ್ಟವಲ್ಲ. ಆದರೆ 3ಡಿ ಕಂಪ್ಯೂಟರುಗಳನ್ನು ಬಳಸುವ ಸಂದರ್ಭದಲ್ಲಿ ಇಂತಹ 3ಡಿ ಗ್ಲಾಸ್ ಗಳು ಕಿರಿಕಿರಿ ಉಂಟು ಮಾಡುತ್ತವೆ.

ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸುವಾಗ 3ಡಿ ಕನ್ನಡಕ ಬಳಸುವುದು ಕಷ್ಟ. ಟ್ಯಾಬ್ಲೆಟ್ ಜೊತೆ ಯಾವಾಗಲೂ 3ಡಿ ಕನ್ನಡಕ ಕೊಂಡೊಯ್ಯುವುದು ಒಂಥರಾ ಕಿರಿಕಿರಿ. ಯಾವಾಗಲೂ ಕನ್ನಡಕ ಬಳಸಿ 3ಡಿ ಟ್ಯಾಬ್ಲೆಟ್ ನೋಡುವುದು ಅಷ್ಟೇನೂ ಚೆನ್ನಾಗಿಯೂ ಕಾಣುವುದಿಲ್ಲ.

ಇಷ್ಟೇಲ್ಲ ಪೀಠಿಕೆ ಯಾಕೆಂದರೆ ಗ್ಲಾಸ್ ಹಂಗಿಲ್ಲದ 3ಡಿ ಟ್ಯಾಬ್ಲೆಟ್ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ. ಅದರ ಹೆಸರು Gadmei T863 tablet. ಈಗಾಗಲೇ ಬೇರೆ ಕಂಪನಿಗಳ ಎರಡು ಟ್ಯಾಬ್ಲೆಟ್ ಗಳು ಇಂತಹ ಫೀಚರು ಹೊಂದಿವೆ. LG Thrill 4G ಮತ್ತು HTC Evo ಟ್ಯಾಬ್ಲೆಟ್ ನೋಡಲು 3ಡಿ ಗ್ಲಾಸ್ ಬೇಕಿಲ್ಲ.

ನೂತನ ಗಾಡ್ಮಿ ಟಿ863 ಟ್ಯಾಬ್ಲೆಟ್ 8 ಇಂಚಿನ ವಿಶಾಲ ಡಿಸ್ ಪ್ಲೇ ಹೊಂದಿದೆ. ಇದರಲ್ಲಿರುವ ಹತ್ತು ಹಲವು ಫೀಚರುಗಳು, ವಿಶೇಷತೆಗಳು ಮತ್ತು ಟೆಕ್ ಮಾಹಿತಿ ವಿವರಣೆ ಇಲ್ಲಿವೆ.

ಡಿಸ್ ಪ್ಲೇ

* ಡಿಸ್ ಪ್ಲೇ ಮಾದರಿ: 3ಡಿ

* ಸ್ಕ್ರೀನ್ ಗಾತ್ರ: 8 ಇಂಚು

* ರೆಸಲ್ಯೂಷನ್: 1280 x 768 ಪಿಕ್ಸೆಲ್

ಪ್ರಮುಖ ಫೀಚರುಗಳು

* ಪ್ರೊಸೆಸರ್ ಮಾದರಿ: ಸಿಂಗಲ್ ಕೋರ್

* ಮಾಡೆಲ್: ಎಆರ್ಎಂ ಕೊರ್ಟೆಕ್ಸ್ ಎ9

* ಆಕ್ಸೆಸ್ ವೇಗ: ಒಂದು ಗಿಗಾಹರ್ಟ್ಸ್

* ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್: ಮಲಿ 400

ಸಂಗ್ರಹ ಸಾಮರ್ಥ್ಯ

* ಸ್ಟೋರೆಜ್ ಮೆಮೊರಿ: 8 ಜಿಬಿ

* RAM: 512 ಎಂಬಿ

* ಮೈಕ್ರೊಎಸ್ ಡಿ ಮೂಲಕ ಮೆಮೊರಿ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಅವಕಾಶ

* ಕ್ಯಾಮರಾ ಮಾದರಿ: ಒಂದು ಕ್ಯಾಮರಾ, ಮುಂಭಾಗದಲ್ಲಿದೆ

* ಕ್ಯಾಮರಾ ರೆಸಲ್ಯೂಷನ್: ವಿಜಿಎ

* ಅಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 2.3

ಗಾಡ್ಮಿ ಟ್ಯಾಬ್ಲೆಟ್ ಹೀಗೆ ಹತ್ತು ಹಲವು ಆಕರ್ಷಕ ಫೀಚರುಗಳನ್ನು ಹೊಂದಿದೆ. ಇದರ ದರ ಕೂಡ ಹೆಚ್ಚೇನಿಲ್ಲ. ಇದರ ದರ ಸುಮಾರು 10 ಸಾವಿರ ರುಪಾಯಿ ಆಸುಪಾಸಿನಲ್ಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X