ತೆರೆಕಾಣುವ ಹಾದಿಯಲ್ಲಿದೆ ನೊವೊ7 ನೂತನ ಟ್ಯಾಬ್ಲೆಟ್

ನೊವೊ 7 MIPS SoC ತಂತ್ರಜ್ಞಾನವನ್ನು ಒಳಗೊಂಡಿದ್ದು, 7 ಇಂಚಿನ ಅತಯಾಕರ್ಷಕ ಡಿಸ್ಪ್ಲೇ ಪಡೆದುಕೊಂಡಿದೆ. ಇದು ICS ಸ್ಲೇಟ್ ಹೊಂದಿರುವ ಮೊದಲ ಟ್ಯಾಬ್ಲೆಟ್ ಆಗಿದೆ. ಈ ನೊವೊ 7 ಕಾರ್ಯಕ್ಷಮತೆ ಪರಿಣಾಮಕಾರಿಯಾಗಿದ್ದು, ಚೈನಾ ಮೂಲದ JZ4770 MIPS ತಂತ್ರಜ್ಞಾನ ಬೆಂಬಲಿತ XBurst ಪ್ರೊಸೆಸರ್ ಪಡೆದುಕೊಂಡಿರುವುದು ಆಕರ್ಷಕ ವಿಷಯ. ಇದರ ಜೊತೆಗೆ 1 GHz ಇದ್ದು, VIVANTE GC860 ಜಿಪಿಯು ಹೊಂದಿದೆ.
ಈ GC860 ಜಿಪಿಯುನಿಂದ ಬಳಕೆದಾರರು ಪೂರ್ಣ ಹೈಡೆಫನಿಶನ್ 1080p ವಿಡಿಯೋ ಮತ್ತು ಹೈಡೆಫನಿಶನ್ ಗೇಮ್ ವೀಕ್ಷಿಸಬಹುದಾಗಿದೆ. ಈ ಟ್ಯಾಬ್ಲೆಟ್ 3ಡಿ ವಿಡಿಯೋ ಗೇಮಿಂಗ್ ಕೂಡ ಬೆಂಬಲಿಸಲಿದೆ. ಇದರಲ್ಲಿರುವ MIPS ತಂತ್ರಜ್ಞಾನ ಹೆಚ್ಚು ಕಾರ್ಯ ಕ್ಷಮತೆ ನೀಡುತ್ತದೆ. 2 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಕೂಡ ಇದೆ. ಟಚ್ ಸ್ಕ್ರೀನ್ ಜೊತೆ ನೊವೊ7 ಟ್ಯಾಬ್ಲೆಟ್ USB v2.0 ಪೋರ್ಟ್ ಮತ್ತು ಮೈಕ್ರೊ HDMI ಪೋರ್ಟ್ ಒಳಗೊಂಡಿದೆ. ಈ ನೊವೊ7 ಮೈಕ್ರೊSD ಕಾರ್ಡ್ ಗಳನ್ನು ಬೆಂಬಲಿಸಲಿದೆ.
ನೊವೊ7 ಟ್ಯಾಬ್ಲೆಟ್ ವಿಶೇಷತೆ:
* 7 ಇಂಚಿನ ಡಿಸ್ಪ್ಲೇ, ಟಚ್ ಸ್ಕ್ರೀನ್
* ಜಿಪಿಯು ಮತ್ತು ಹೈ ಡೆಫನಿಶನ್ ಬೆಂಬಲಿತ ಮತ್ತು 3ಡಿ ಗೇಮಿಂಗ್ ಬೆಂಬಲಿತ
* MIPS ತಂತ್ರಜ್ಞಾನ
* ICS ಸ್ಲೇಟ್
* ಆಂಡ್ರಾಯ್ಡ್ ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್
* 2 ಮೆಗಾ ಪಿಕ್ಸಲ್ ಕ್ಯಾಮೆರಾ
ಈ ಟ್ಯಾಬ್ಲೆಟ್ ನ ಮೆಮೊರಿ ಸಾಮರ್ಥ್ಯ ಮತ್ತು ಇನ್ನಿತರ ಲಕ್ಷಣಗಳ ಕುರಿತು ಪೂರ್ಣ ಮಾಹಿತಿಯನ್ನು ಘೋಷಿಸಿಲ್ಲ. ಈ ಟ್ಯಾಬ್ಲೆಟ್ ಭಾರತದಲ್ಲಿ ಕಡಿಮೆ ದರದಲ್ಲಿ ದೊರೆಯುವ ಅಂದಾಜಿದ್ದು, ನಿಖರ ಬೆಲೆಯನ್ನು ಇನ್ನೂ ಘೋಷಿಸಿಲ್ಲ.


Click it and Unblock the Notifications








