Subscribe to Gizbot

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

Posted By: ಮಾಲತಿ ಎ

ಯುಗಾದಿಗೆ ಅಂತ ಚಿಕ್ಕಬಳ್ಳಾಪುರಕ್ಕೆ ಹೋಗಿದ್ದೆ. ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶರಯ್ಯ ಹುಟ್ಟಿದ ಊರೇ ನನ್ನೂರು. ನಾನೂ ಅವ್ರ ಹಾಗೇ ಒಬ್ಬ ಅಭಿಯಂತರಳು, ಅಂದ್ರೆ engineer ಕಣ್ರೀ. ಮನೆಗೆ ಹೋದ ಮೇಲೆ ಅಮ್ಮನ ಹಬ್ಬದ ಅಡಿಗೆಯಿಂದ ಹೊಟ್ಟೆಯೇನೋ ತುಂಬಿತು, ಆದ್ರೆ ಕಣ್ತುಂಬ ನಿದ್ದೆ ಮಾಡೋಣ ಅಂದ್ರೆ ಬೇಸಿಗೆ ಬಿಸಿಗೆ ಮೈಯೆಲ್ಲಾ ಬೇಯ್ತಾ ಇತ್ತು. ಫ್ಯಾನ್ ಹಾಕ್ಕೊಳ್ಳೋದಲ್ವಾ ಅಂದ್ರಾ? ಕರೆಂಟ್ ಇದ್ರೆ ತಾನೇ ಫ್ಯಾನು? ಸೊಳ್ಳೆಗಳು ಬೇರೆ ಹಾಡ್ತಾ ಇದ್ವು. ಹೋದ ಒಂದೇ ದಿನಕ್ಕೆ ನನ್ನ ಪಾಡು ಹೀಗಾದ್ರೆ, ಯಾವಾಗ್ಲೂ ಕರೆಂಟ್‌ ಇಲ್ಲದೇ ನನ್ನಮ್ಮನ ಕಥೆ ಏನಪ್ಪಾ ಅಂತ ಮರುಗುತ್ತಲೇ ನಮ್ಮ ಬೆಂದಕಾಳೂರಿಗೆ ಬಸ್ಸುನ್ನು ಏರಿದೆ.

ಕಿಟಕಿ ಪಕ್ಕ ಕುಳಿತು ಬರಬೇಕಾದ್ರೆ ರಾಷ್ಟ್ರೀಯ ಹೆದ್ದಾರಿ ಮೇಲೆ ಕಟ್ತಾ ಇರೋ ಫ್ಲೈಓವರ್‌ ನೋಡಿದೆ. ಆಗ ಮತ್ತೆ ನೆನಪಾದರು ನಮ್ಮ ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು(ಅವರ ಪೂರ್ತಿ ಹೆಸರು ಹೇಳಿದರೇನೇ ಸಮಾಧಾನ, ಜೊತೆಗೆ ಉಕ್ಕೇರೋ ಹೆಮ್ಮೆ). ಯಾಕಂದ್ರೆ ಜೋಗ ಜಲಪಾತ ನೋಡಿ ಉದ್ಗಾರ ತೆಗೆದ್ರಲ್ಲ- "ಎಷ್ಟೊಂದು ವ್ಯರ್ಥ ಆಗ್ತಾ ಇದೆ" ಅಂತ, ಅದು ನೆನಪಾಯ್ತು ನಂಗೆ. ಹಾಗೇ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯವರೂ ನೆನಪಾದರು. ನೀರ್ಗಾಲುವೆಗಳ ಮೇಲೆ ಸೌರ ವಿದ್ಯುತ್ ಫಲಕ ಹಾಕಿ ಕರೆಂಟ್ ಉತ್ಪಾದಿಸ್ತಿದ್ದಾರಲ್ಲ ಅಂತ.

ನನಗೂ ಆ ಮೇಲ್ಸೇತುವೆಗಳ ಮೇಲೆ ಮತ್ತೆ ಮೆಟ್ರೋ ಸೇತುವೆಗಳ ಮೇಲೆ ಬೀಳ್ತಾ ಇರೋ ಬಿಸಿಲು ಪೋಲಾಗ್ತಿದೆ ಅಂತ ಅನ್ನಿಸ್ತು. ಅಲ್ಲಾ ಗುಜರಾತ್ನಲ್ಲಿ ನೀರಿನ ಕಾಲುವೆಗಳ ಮೇಲೆ ಬೀಳೋ ಬಿಸಿಲಿನಿಂದ ವಿದ್ಯುತ್ ಉತ್ಪಾದಿಸ್ಬೇಕಾದ್ರೆ, ನಾವ್ ಯಾಕೆ ಈ ಫ್ಲೈ ಓವರ್‌ಗಳ ಮೇಲೆ ಸೋಲಾರ್‌ ಪ್ಯಾನಲ್‌ ಹಾಕಿ ವಿದ್ಯುತ್ ಉತ್ಪಾದಿಸಬಾರದು ಎನ್ನುವ ಐಡಿಯಾ ಹೊಳೆಯಿತು. ಸಾಮಾನ್ಯವಾಗಿ ಸೋಲಾರ್‌ ಪ್ಯಾನೆಲ್‌ಗಳು ಒಮ್ಮೆ ಫಿಕ್ಸ್ ಆಗಿದ್ರೆ ಅದು ಬದಲಾಗುವುದಿಲ್ಲ. ಆದರೆ ನನ್ನ ಐಡಿಯಾದಲ್ಲಿರುವ ಸೋಲಾರ್‌ ಪ್ಯಾನೆಲ್‌ಗಳು ಸ್ವಲ್ಪ ಭಿನ್ನ. ಸೂರ್ಯ ಹೇಗೆ ಪೂರ್ವದಿಂದ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೋ, ಅದೇ ರೀತಿಯಾಗಿ ಇಲ್ಲಿ ನಾನು ನನ್ನ ಯೋಚನೆಗಳನ್ನು ಮಾರ್ಪಾಡು ಮಾಡಿದ್ದೇನೆ. ಅದು ಹೇಗೆ ಎಂಬುದನ್ನು ಮುಂದಿನ ಪುಟದಲ್ಲಿ ವಿವರಿಸಿದ್ದೇನೆ.

ಉತ್ತರ ದಕ್ಷಿಣಕ್ಕೆ ಕಟ್ಟಿರೋ ಫ್ಲೈ ಓವರ್/ಮೆಟ್ರೋ ಬ್ರಿಡ್ಜ್ ಮೇಲೆ ಆ ಸೋಲಾರ್ ಪ್ಯಾನೆಲ್ಗಳನ್ನು ಹಾಕೋಕೆ ಕಟ್ಟಿದ ಮಾಳಿಗೆಯಿಂದ ಇನ್ನೊಂದಿಷ್ಟು ಸೋಲಾರ್ ಪ್ಯಾನೆಲ್ಗಳನ್ನು ತೂಗಿ ಬಿಟ್ರೆ ಇನ್ನೂ ಹೆಚ್ಚಿನ ವಿದ್ಯುತ್ ಪಡೀಬಹುದು :

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಚಿತ್ರ-1

ಬೆಳಗಿನ ಜಾವ ಸೂರ್ಯ ಪೂರ್ವದಿಂದ ಉದಯಿಸುವುದರಿಂದ ಆ ತೂಗಿ ಬಿಟ್ಟಿರೋ ಸೋಲಾರ್ ಪ್ಯಾನೆಲ್‌ಗಳು ಬೆಳಿಗ್ಗೆ ಪೂರ್ವದ ಕಡೆ ಮುಖಮಾಡುವಂತೆ ಇಡಬೇಕು.

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಚಿತ್ರ-2
ಮಧ್ಯಾಹ್ನದ ನಂತರ ಸೂರ್ಯ ಪಶ್ಚಿಮದಲ್ಲಿ ಮುಳುಗುವುದರಿಂದ ಸೋಲರ್‌ ಪ್ಯಾನಲ್‌ಗಳನ್ನು ಪಶ್ಚಿಮದ ಕಡೆ ಮುಖಮಾಡುವಂತೆ ಇಡಬೇಕು.

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಚಿತ್ರ-3
ಪೂರ್ವ -ಪಶ್ಚಿಮಕ್ಕೆ ಕಟ್ಟಿರೋ ಫ್ಲೈ ಓವರ್/ಮೆಟ್ರೋ ಬ್ರಿಡ್ಜ್ ಗಳ ಮೇಲೆ ಸೋಲಾರ್ ಪ್ಯಾನೆಲ್ಗಳನ್ನ ತೂಗಿ ಬಿಡೋ ಬದಲು ಈ ರೀತಿ ರೆಕ್ಕೆಗಳ ಹಾಗೆ ಬಿಡಿಸಿಟ್ಟರೆ ಆಯಿತು.

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಫ್ಲೈಓವರ್‌ ಮೇಲೆ ಸೋಲಾರ್‌ ಪ್ಯಾನಲ್‌

ಬೆಂಗಳೂರಿನಲ್ಲಿ ಇತ್ತೀಚಿನ ದಿನದಲ್ಲಿ ಬಿಸಿ ಹೆಚ್ಚಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಇಂದು ಸೂರ್ಯನ ಶಕ್ತಿ ಉಚಿತವಾಗಿ ಸಿಗುತ್ತಿದೆ. ಆದ್ರೆ ಈ ಶಕ್ತಿಯನ್ನು ಒಂದು ಜಾಗದಲ್ಲಿ ಸೋಲಾರ್‌ ಪ್ಯಾನಲ್‌ಗಳನ್ನು ಹಾಕಿ ಸಂಗ್ರಹಿಸುವುದು ಜಾಗದ ಸಮಸ್ಯೆಯಿಂದ ಕಷ್ಟವಾಗಬಹುದು. ಹೇಗೂ ಈಗ ಫ್ಲೈ ಓವರ್‌ಗಳಿಂದಾಗಿ ವಾಹನ ದಟ್ಟನೆ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಈ ಫ್ಲೈ ಓವರ್‌ಗಳ ಮೇಲೇ ಸೋಲಾರ್‌ ಪ್ಯಾನಲ್‌ ನಿರ್ಮಿಸಿದರೆ ಮುಂದಿನ ದಿನಗಳಲ್ಲಿ ಬೆಂದಕಾಳೂರಿನ ಸ್ವಲ್ಪವಾದ್ರೂ ವಿದ್ಯುತ್‌ ಸಮಸ್ಯೆಯನ್ನು ನಿಭಾಯಿಸಬಹುದು. ಏನಂತೀರಿ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot