ಮನೆ/ಕಛೇರಿಯಲ್ಲಿರುವ ಕಂಫ್ಯೂಟರ್ ಅನ್ನು ಎಲ್ಲೇ ಇದ್ದರೂ ಸ್ಮಾರ್ಟ್‌ಫೋನ್‌ನಿಂದ ಶಟ್‌ಡೌನ್‌ ಹೇಗೆ?

Written By:

ಮನೆಯಿಂದ ಅಥವಾ ಕಛೇರಿಯಿಂದ ಹಲವರು ಹಲವು ವೇಳೆ ತರಾತುರಿಯಲ್ಲಿ ಹೊರಡುವುದುಂಟು. ಇಂತಹ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ಮರೆತು ಹೋಗುವುದು, ವಾಹನಗಳ ಕೀ ಮರೆತು ಹೋಗುವುದು, ಇತರೆ ಮುಖ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯುವುದು ಸಾಮಾನ್ಯ. ಜೊತೆಗೆ ಇನ್ನೂ ಹಲವರು ಕಂಪ್ಯೂಟರ್ ಅನ್ನು ಶಟ್‌ಡೌನ್‌ ಮಾಡುವುದನ್ನೇ ಮರೆತು ಹೋಗುತ್ತಾರೆ. ಒಂದು ಪಿಸಿ ಶಟ್‌ಡೌನ್‌ ಮಾಡದೇ ತುಂಬಾ ದೂರ ಹೋದ ನಂತರ ಪುನಃ ವಾಪಸ್ಸು ಬರಲು ಸಾಧ್ಯವೆ. ಕೆಲವರಿಗೆ ಕಷ್ಟ ಸಾಧ್ಯ.

ಅನಿವಾರ್ಯವಾಗಿ ಕಂಟ್ಯೂಟರ್‌ನಲ್ಲಿ ಮುಖ್ಯ ಮಾಹಿತಿಗಳನ್ನು ಶೇಖರಿಸುವ ಕಾರಣದಿಂದ ಮರಳಿ ಬಂದು ಶಟ್‌ಡೌನ್‌ ಮಾಡಲೇಬೇಕು. ಅಥವಾ ವಾಪಸ್ಸು ಬರದೇ ಸ್ಮಾರ್ಟ್‌ಫೋನ್‌'ನಿಂದಲೇ ರಿಮೋಟ್ಲಿ ಕಂಪ್ಯೂಟರ್‌ ಅನ್ನು ಶಟ್‌ಡೌನ್‌ ಮಾಡಬಹುದು. ಹೌದು, ಟೆಕ್ನಾಲಜಿ ಬೆಳವಣಿಗೆಯಿಂದ ಇದು ಸಾಧ್ಯ.

'CDM' ಮಷಿನ್ ಬಳಸಿ ಹಣ ಡೆಪಾಸಿಟ್ ಮಾಡುವುದು ಹೇಗೆ? ಸೂಚನೆಗಳು..!

ನೀವು ಎಲ್ಲಿದ್ದರೂ ಪರವಾಗಿಲ್ಲಾ, ನಿಮ್ಮ ಆಫೀಸ್‌ನಲ್ಲಿ ಅಥವಾ ಮನೆಯಲ್ಲಿರುವ ಕಂಪ್ಯೂಟರ್‌ ಅನ್ನು ನೀವು ಇರುವಲ್ಲಿಂದಲೇ ಸ್ಮಾರ್ಟ್‌ಫೋನ್‌ ಬಳಸಿ ಶಟ್‌ಡೌನ್‌ (Shutdown) ಮಾಡಬಹುದು. ನೀವು ಇರುವಲ್ಲಿಂದಲೇ ಸ್ಮಾರ್ಟ್‌ಫೋನ್‌ ಬಳಸಿ ಕಂಪ್ಯೂಟರ್ ಆಫ್‌ ಮಾಡುವುದು ಹೇಗೆ ಎಂದು ಇಂದಿನ ಲೇಖನ ಓದಿ ತಿಳಿದುಕೊಳ್ಳಿ. ಹಾಗೆಯೇ ದಿನನಿತ್ಯ ಕಂಪ್ಯೂಟರ್‌ ಬಳಸುವ ನಿಮ್ಮ ಸ್ನೇಹಿತರಿಗೂ ಈ ಮಾಹಿತಿ ತಿಳಿಸಿ. ನಾವು ತಿಳಿಸುವ ಈ ತಂತ್ರಾಶವನ್ನು "Remote Shutdown Program" ಎಂದು ಕರೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Airytec switch off ತಂತ್ರಾಂಶ ಡೌನ್‌ಲೋಡ್‌ ಮಾಡಿ

Airytec switch off ತಂತ್ರಾಂಶ ಡೌನ್‌ಲೋಡ್‌ ಮಾಡಿ

ಮೊದಲಿಗೆ ನಿಮ್ಮ ವಿಂಡೋಸ್‌ ಕಂಪ್ಯೂಟರ್‌ಗೆ "Airytec switch off" ಪ್ರೋಗ್ರಾಮ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

 ಶಟ್‌ಡೌನ್‌ ಐಕಾನ್

ಶಟ್‌ಡೌನ್‌ ಐಕಾನ್

ಆಪ್‌ ಇನ್‌ಸ್ಟಾಲ್‌ ಮಾಡಿದ ನಂತರ "ಸಿಸ್ಟಮ್‌ ಟ್ರೇ"ನಲ್ಲಿ ಶಟ್‌ಡೌನ್‌ ಐಕಾನ್‌ ಕಾಣುತ್ತದೆ. ಚಿತ್ರ ಗಮನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಟಾಸ್ಕ್‌ ಎನೇಬಲ್‌ ಮಾಡಿ

ಟಾಸ್ಕ್‌ ಎನೇಬಲ್‌ ಮಾಡಿ

ಹಂತ 2'ರಲ್ಲಿ ಹೇಳಿದಂತೆ ಶಟ್‌ಡೌನ್‌ ಐಕಾನ್‌ ಮೇಲೆ ಕ್ಲಿಕ್ ಮಾಡಿ ಚಿತ್ರದಲ್ಲಿ ಇರುವಂತೆ "Shutdown" ಆಯ್ಕೆ ಟಿಕ್ ಮಾಡಿ "Enable Task" ಅನ್ನು ಖಡ್ಡಾಯವಾಗಿ ಕ್ಲಿಕ್ ಮಾಡಿ.

"Shutdown" ಐಕಾನ್

ಈ ಹಂತದಲ್ಲಿ "Shutdown" ಐಕಾನ್‌ ಮೇಲೆ ಬಲಭಾಗದ ಮೌಸ್‌ ಬಟನ್‌ ಕ್ಲಿಕ್ ಮಾಡಿ. ನಂತರ ಓಪನ್‌ ಆದ ವಿಂಡೊದಲ್ಲಿ Setting>>remote section>>Edit Web Interface Settings ಎಂಬುದನ್ನು ಕ್ಲಿಕ್ ಮಾಡಿ.

 ಅಪ್ಲೇ ಬಟನ್‌ ಕ್ಲಿಕ್ ಮಾಡಿ

ಅಪ್ಲೇ ಬಟನ್‌ ಕ್ಲಿಕ್ ಮಾಡಿ

ಹಿಂದಿನ ಹಂತದಲ್ಲಿ ತಿಳಿಸಿದ Web Interface ಎನೇಬಲ್‌ ಮಾಡಲು "Enable authentication" ಎಂಬ ಬಟನ್‌ ಅನ್ನು ಅನ್‌ಚೆಕ್‌ ಮಾಡಿ. ನಂತರ "Apply" ಬಟನ್‌ ಕ್ಲಿಕ್‌ ಮಾಡಿ.

ಟಾಸ್ಕ್‌ ಏನೇಬಲ್‌ ಮಾಡಿ

ಟಾಸ್ಕ್‌ ಏನೇಬಲ್‌ ಮಾಡಿ

ಈ ಹಂತದಲ್ಲಿ "view / update static addresses" ಕ್ಲಿಕ್‌ ಮಾಡಿ ಅಲ್ಲಿನ ಯುಆರ್‌ಎಲ್‌ ಅನ್ನು ನೋಟ್‌ ಮಾಡಿಕೊಳ್ಳಿ ಅಥವಾ ಮೊಬೈಲ್‌ನಲ್ಲಿ ಬುಕ್‌ಮಾರ್ಕ್‌ ಮಾಡಿಕೊಳ್ಳಿ. ನಂತರ ಸಿಸ್ಟಮ್‌ ಟ್ರೇ'ನಲ್ಲಿ "ಶಟ್‌ಡೌನ್‌ ಐಕಾನ್" ಮೇಲೆ ಕ್ಲಿಕ್ ಮಾಡಿ. ಟಾಸ್ಕ್‌ ಏನೇಬಲ್‌ ಮಾಡಿ.

ಮೊಬೈಲ್‌ನಲ್ಲಿ ಯುಆರ್‌ಎಲ್‌ ಓಪನ್ ಮಾಡಿ

ಮೊಬೈಲ್‌ನಲ್ಲಿ ಯುಆರ್‌ಎಲ್‌ ಓಪನ್ ಮಾಡಿ

ಹಿಂದಿನ ಹಂತದಲ್ಲಿ ಹೇಳಿದ ಯುಆರ್‌ಎಲ್‌ ಅನ್ನು ನಿಮ್ಮ ಮೊಬೈಲ್‌ನಲ್ಲಿ ಓಪನ್‌ ಮಾಡಿ. ಚಿತ್ರದಲ್ಲಿರುವಂತೆ ವಿಂಡೊ ಓಪನ್‌ ಆಗುತ್ತದೆ.

ಕೊನೆಯ ಹಂತ

ಕೊನೆಯ ಹಂತ

ಈ ಹಂತದಲ್ಲಿ ನಿಮ್ಮ ಕಂಪ್ಯೂಟರ್‌ ಅನ್ನು ಶಟ್‌ಡೌನ್‌ ಮಾಡಲು(ಆಫ್‌ ಮಾಡಲು) "Shutdown" ಬಟನ್‌ ಮೇಲೆ ಕ್ಲಿಕ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Follow these simple steps to Remotely Shutdown PC From Anywhere With Smartphone. To know this tips visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot