ಭಾವನೆಯನ್ನು ಅಮೂರ್ತಗೊಳಿಸುವ ಗ್ಯಾಜೆಟ್ (ವೀಡಿಯೋ)

Written By:

ನಿಮ್ಮ ನಿವಾಸ ಮತ್ತು ಮಕ್ಕಳಿಂದ ದೂರವಿದ್ದು ಕೆಲಸದಲ್ಲಿ ನಿರತರಾಗಿರುವ ತಾಯಿ ನೀವಾಗಿದ್ದಲ್ಲಿ, ಬಹುದೂರವಿರುವ ಆದರೆ ಆನ್‌ಲೈನ್‌ಲ್ಲಿ ನಿಮ್ಮ ಭಾವನೆಯನ್ನು ಹಂಚಿಕೊಳ್ಳಬೇಕೆಂಬ ತುಡಿತವನ್ನು ಹೊಂದಿರುವ ವಿರಾಗಿ ಪ್ರೇಮಿಗಳು ನೀವಾಗಿದ್ದಲ್ಲಿ ನಿಮಗೊಂದು ಸಂತಸಕರ ಸುದ್ದಿ ನಮ್ಮ ಬಳಿ ಇದೆ.

ಐಎಎನ್‌ಎಸ್ ವರದಿಯ ಪ್ರಕಾರ, ವೈರ್‌ಲೆಸ್ ಪ್ರವೇಶವಾದ ಫ್ರೆಬ್ಬಲ್ ಅನ್ನು ವಿಜ್ಞಾನಿಗಳು ಇದೀಗ ಕಂಡುಹಿಡಿದಿದ್ದು ಜಗತ್ತಿನ ಯಾವ ಮೂಲೆಯಲ್ಲಿರುವ ನಿಮ್ಮ ಸಂಗಾತಿಯ ಕೈಯನ್ನು ಭದ್ರವಾಗಿ ಹಿಡಿಯಲು ಇನ್ನು ನಿಮಗೆ ಸಾಧ್ಯ ಎಂದು ಸೋಮವಾರದ ವರದಿಯೊಂದು ಪ್ರಕಟಪಡಿಸಿದೆ. ಸ್ಕೈಪ್, ಫೇಸ್‌ಟೈಮ್ ಮತ್ತು ಹ್ಯಾಂಗ್‌ಔಟ್‌ನಂತೆ ಫ್ರೆಬ್ಬಲ್ ಕೂಡ ವೀಡಿಯೋ ಚಾಟ್ ಸೇವೆಯನ್ನು ನಿಮಗೆ ಒದಗಿಸಲಿದ್ದು ಇದರಿಂದ ಒಬ್ಬರನ್ನೊಬ್ಬರಿಗೆ ದೂರವಿದ್ದು ಕೂಡ ಹತ್ತಿರದಲ್ಲಿರುವಂತಹ ಭಾವನೆಯನ್ನು ಅರಿತುಕೊಳ್ಳಬಹುದಾಗಿದೆ.

ವಿರಾಗಿ ಪ್ರೇಮಿಗಳ ಸಂಜೀವಿನಿಯಾಗಿ ಫ್ರೆಬ್ಬಲ್

ನಿಮ್ಮ ಕೈಯ ಸ್ಪರ್ಶವನ್ನು ಪರಸ್ಪರರಿಗೆ ವಿನಿಮಯಿಸಿಕೊಳ್ಳುವ ಅಭೂತಪೂರ್ವ ಅನುಭವವನ್ನು ಫ್ರೆಬ್ಬಲ್‌ನಲ್ಲಿರುವ ಮಿಮಿಕ್ ತಂತ್ರಜ್ಞಾನ ಉಂಟುಮಾಡುತ್ತದೆ. ಇದು ಎರಡು ಸಣ್ಣ ಡಿವೈಸ್‌ಗಳನ್ನು ಹೊಂದಿದೆ. ಫ್ರೆಬ್ಬಲ್ ಅನ್ನು ಒಬ್ಬ ವ್ಯಕ್ತಿ ಹಿಂಡಿದಾಗ ಇದರಲ್ಲಿ ಸಂಯೋಜನೆಗೊಂಡಿರುವ ಗ್ಯಾಜೆಟ್ ಸಹಭಾಗಿಯ ಕೈಯ ಹಿಂಭಾಗಕ್ಕೆ ಒತ್ತಡವನ್ನು ಪೂರೈಸುತ್ತದೆ ಇದರಿಂದ ನಿಮ್ಮ ಕೈಯನ್ನು ನಿಮ್ಮ ಸಂಗಾತಿ ಹಿಡಿದ ಅನುಭವ ಉಂಟಾಗುತ್ತದೆ.

ಈ ಡಿವೈಸ್ ವೀಡಿಯೋ ಚಾಟ್ ಸೌಲಭ್ಯವನ್ನು ಕೂಡ ಹೊಂದಿದೆ. ಇದರಲ್ಲಿರುವ ಬಹು ಬಣ್ಣದ ಎಲ್‌ಇಡಿಯು ಸಂಪರ್ಕ ಸ್ಥಿತಿ ಮತ್ತು ಹಿಂಡಿಯುವಿಕೆಯ ಕಾಯುವಿಕೆಯನ್ನು ಸೂಚಿಸುತ್ತದೆ. ಇದನ್ನು ಮೈಕ್ರೋ ಯುಎಸ್‌ಬಿ ಕೇಬಲ್ ಮೂಲಕ ಚಾರ್ಜ್ ಮಾಡಬಹುದಾಗಿದೆ ಮತ್ತು ಈ ಗ್ಯಾಜೆಟ್ ಗೂಗಲ್ ಕ್ರೋಮ್ ಆವೃತ್ತಿಯಲ್ಲಿ ಫೈರ್‌ಫಾಕ್ಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ.

ಫ್ರೆಬ್ಬಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕೆಳಗಿನ ವೀಡಿಯೋ ನಿಮಗೆ ತೋರಿಸಲಿದೆ.

<center><iframe width="100%" height="360" src="//www.youtube.com/embed/57Bz9ta-zAM?feature=player_embedded" frameborder="0" allowfullscreen></iframe></center>

Read more about:
English summary
This article tells that Frebble brigs long distance lovers together.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot