ಪೆಟ್ರೋಲ್ ಉಳಿಸಲು ಉಚಿತ ಆಂಡ್ರಾಯ್ಡ್ App

By Varun
|
ಪೆಟ್ರೋಲ್ ಉಳಿಸಲು ಉಚಿತ ಆಂಡ್ರಾಯ್ಡ್ App

ನೆನ್ನೆ ಸಾಯಂಕಾಲ, ಪೆಟ್ರೋಲ್ಬೆಲೆ 7-8 ರೂಪಾಯಿ ಜಾಸ್ತಿ ಆಗುತ್ತೆ ಅಂತ ಗೊತಾಗಿದ್ದೇ ತಡ ಜನ ಓಡಿಹೋಗಿ (ಕ್ಷಮಿಸಿಗಾಡಿ ಓಡಿಸಿಕೊಂಡು ಹೋಗಿ) ಎಷ್ಟು ಆಗುತ್ತೋ ಅಷ್ಟು ಇಂಧನ ತುಂಬಿಸಿಕೊಂಡರು. ಈ ರೀತಿ ಫುಲ್ ಟ್ಯಾಂಕ್ ಹಾಕಿಸಿಕೊಂಡರೂ ಎಷ್ಟು ಅಂತ ಉಳಿಸಕ್ಕೆ ಆಗುತ್ತೆ ಅಲ್ವ. ಆದರೆ ಇಂಧನದ ಖರ್ಚನ್ನು ಉಳಿಸಲು ನೀವು ಸರಕಾರೀ ಬಸ್ಸುಗಳಲ್ಲಿ ಓಡಾಡಬೇಕು, ಇಲ್ಲ ಅಂದ್ರೆ ಸೈಕಲ್ ಉಪಯೋಗಿಸಬೇಕು. ಇಂಥದ್ದೆಲ್ಲಾ ಹೇಳೋದು ಸುಲಭ, ಆದರೆ ಮಾಡೋದಕ್ಕೆ ಕಷ್ಟ ಇರೋ ಐಡಿಯಾ.

ಆದರೆ ನೀವು ಪ್ರತಿನಿತ್ಯ ಇಂಧನಕ್ಕೆ, ನಿಮ್ಮ ಗಾಡಿಯ ಸರ್ವೀಸ್ ಗೆ ಖರ್ಚು ಮಾಡೋ ಹಣವನ್ನು ಲೆಕ್ಕ ಹಾಕಿ ಹೇಗೆ ಇಂಧನದ ಮಿತವ್ಯಯ ಮಾಡಬಹುದು ಆಂಡ್ರಾಯ್ಡ್ App ಮೂಲಕ. ಈಗ ನೀವು ಇಂಧನಕ್ಕೆ ತಗಲುವ ಹಣ, ಸರ್ವೀಸ್ ಚಾರ್ಜ್, ಪ್ರತಿ ಲೀಟರಿಗೆ ಎಷ್ಟು ಕೊಡುತ್ತೆ, ಎಷ್ಟು ಸ್ಪೀಡ್ ನಲ್ಲಿ ಸಾಮಾನ್ಯವಾಗಿ ಗಾಡಿ ಓಡಿಸುತ್ತೀರ ಎಂಬ ಇಷ್ಟೂ ಮಾಹಿತಿಯನ್ನು ಫ್ಯುಯೆಲ್ ಲಾಗ್ ಎಂಬ ಉಚಿತ ಆಂಡ್ರಾಯ್ಡ್ App ಡೌನ್ಲೋಡ್ ಮಾಡಿಕೊಂಡು ಒಂದು ಬಾರಿ ಫೀಡ್ ಮಾಡಿದರೆ ಸಾಕು, ನೀವು ಕೊಟ್ಟಿರುವ ಮಾಹಿತಿಯನ್ನು ಆಧರಿಸಿ, ಯಾವ ಸ್ಪೀಡ್ ನಲ್ಲಿ ನೀವು ಗಾಡಿ ಚಲಾಯಿಸಿದರೆ ಇಂಧನ ಉಳಿಸಬಹುದು, ಪ್ರತಿ ಕಿಲೋಮೀಟರ್ ನ ಸರಾಸರಿ ವೆಚ್ಚ ಎಷ್ಟು, ಪ್ರತಿ ತಿಂಗಳ ಸರಾಸರಿ ವೆಚ್ಚ, ಒಟ್ಟಾರೆ ವರ್ಷದಲ್ಲಿ ಖರ್ಚಾದ ಮೊತ್ತವೆಷ್ಟು, ಈ ರೀತಿಯ ಇನ್ನೂ ಹಲವಾರು ಮಾಹಿತಿ ನಿಮಗೆ ಕೊಡುತ್ತದೆ.

ಮತ್ತೊಂದು ವಿಶೇಷವೇನೆಂದರೆ ಕೇವಲ ದ್ವಿಚಕ್ರ ವಾಹನ, ಪೆಟ್ರೋಲ್/ಡೀಸಲ್ ಕಾರ್ ಅಲ್ಲದೆ ಎಲೆಕ್ಟ್ರಿಕ್ ಹಾಗು ಗ್ಯಾಸ್ ಚಾಲಿತ ಕಾರುಗಳ ಮಾಹಿತಿಯನ್ನೂ ಪಡೆಯಬಹುದಾಗಿದೆ. ಈ ಎಲ್ಲ ಮಾಹಿತಿಯನ್ನು ನೀವು 6 ವಿವಿಧ ಗ್ರಾಫ್ ಮೂಲಕ ಕೂಡ ತಿಳಿದುಕೊಳ್ಳಬಹುದು.

ಹಾಗಿದ್ದರೆ ಈ App ಡೌನ್ಲೋಡ್ ಮಾಡಿಕೊಳ್ಳಲು ಫ್ಯುಯೆಲ್ ಲಾಗ್ ಕ್ಲಿಕ್ ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X