ಈ ಫನ್ ಟ್ಯಾಬ್ಲೆಟ್ ಡಾಕ್ಟರ್ ಹುಡುಕಿಕೊಡುತ್ತೆ

By Varun
|
ಈ ಫನ್ ಟ್ಯಾಬ್ಲೆಟ್ ಡಾಕ್ಟರ್ ಹುಡುಕಿಕೊಡುತ್ತೆ

ಭಾರತದ ಗೋ ಟೆಕ್ ಡಿಜಿಟಲ್ ಕಂಪನಿ ಈಗ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಸಂಚಲನ ಉಂಟುಮಾಡಬಹುದಾದ ಆರೋಗ್ಯದ ವಿಷಯಗಳಿಗೆ ಸಂಬಂಧ ಪಟ್ಟ ಆಪ್ ಗಳು ಇರುವ ಆಂಡ್ರಾಯ್ಡ್ ಸ್ಮಾರ್ಟ್ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದೆ.

Guide My Treatment ಎನ್ನುವ ಪ್ರೀ-ಲೋಡೆಡ್ ಆಪ್ ಇದರಲ್ಲಿದ್ದು, ಇದರ ಮೂಲಕ, ಆರೋಗ್ಯದ ತುರ್ತು ಪರಿಸ್ಥಿತಿಯಲ್ಲೂ ನೀವಿರುವ ಜಾಗದ ಹತ್ತಿರದಿಂದ ಡಾಕ್ಟರ್ ಹಾಗು ಆಸ್ಪತ್ರೆಗಳನ್ನು ಹುಡುಕುವ ಹಾಗು ಡಾಕ್ಟರ್ ಜೊತೆ ಆಗಲೇ ಅಪಾಯಿಂಟ್ಮೆಂಟ್ ಕೂಡ ಕೊಡಿಸುವ ಸೌಲಭ್ಯ ಹೊಂದಿದೆ.

ಈ ರೀತಿಯ ಸೌಲಭ್ಯವಿರುವ ಮೊದಲ ಆಪ್ ಇದಾಗಿದ್ದು, ಉಚಿತ ವೈಫೈ ಸೌಲಭ್ಯ ಒದಗಿಸುವ ಓಜೋನ್ ಹಾಟ್ ಸ್ಪಾಟ್ ಸೇವೆಯನ್ನೂ ಒದಗಿಸಲಿದೆ.

ಹಂಗಾಮಾ ಆಪ್, ಫನ್ ಬಜಾರ್ ಹಾಗು Attano EduTV ಮೂಲಕ ಸುಮಾರು 1500 ಶಿಕ್ಷಣಕ್ಕೆ ಸಂಬಂಧಿಸಿದ ಇ-ಬುಕ್ ಹಾಗು ವೀಡಿಯೋಗಳನ್ನೂ ಒದಗಿಸಲಿದ್ದು, ಇದರ ಫೀಚರುಗಳು ಈ ರೀತಿ ಇವೆ:

 • 7 ಇಂಚು ಕೆಪಾಸಿಟಿವ್ ಟಚ್ ಸ್ಕ್ರೀನ್

 • 800 X 480 ರೆಸೊಲ್ಯೂಶನ್

 • ವಿಜಿಎ ​​ಕ್ಯಾಮೆರಾ

 • ಆಂಡ್ರಾಯ್ಡ್ 4.0 (ಐಸ್ಕ್ರೀಮ್ ಸ್ಯಾಂಡ್ವಿಚ್) ಆಪರೇಟಿಂಗ್ ಸಿಸ್ಟಮ್

 • 3G (ಕೇವಲ ಡಾಂಗಲ್ ಮೂಲಕ)

 • DR3 512 MB ​​RAM ನ

 • 1.0 GHz ಪ್ರೊಸೆಸರ್

 • HDMI ಪೋರ್ಟ್, USB, ವೈಫೈ ಸಂಪರ್ಕ

 • 4 GB ಆಂತರಿಕ ಮೆಮೊರಿ

 • 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ

 • 3600 mAh ಬ್ಯಾಟರಿ

 • 8 ಗಂಟೆಗಳ ಬ್ಯಾಕ್ ಆಪ್ (ಮ್ಯೂಸಿಕ್ ಪ್ಲೇಬ್ಯಾಕ್)

ಈ ಟ್ಯಾಬ್ಲೆಟ್ ಜೊತೆ ಬಾಹ್ಯವಾಗಿ ಮೌಸ್, ಕೀಲಿಮಣೆ ಮತ್ತು ಇತರೆ ಮಾಹಿತಿ ಹಂಚಿಕೆಯ ಸಾಧನಗಳನ್ನು ಕನೆಕ್ಟ್ ಮಾಡಬಹುದಾಗಿದೆ. ಒಂದು ವರ್ಷ ವಾರಂಟಿ ಇರುವ ಈ ಟ್ಯಾಬ್ಲೆಟ್ ನ ಬೆಲೆ 5,999 ರೂಪಾಯಿ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X