ದೇಶದ ಮಾರುಕಟ್ಟೆಗೆ ಜೀನಿಯಸ್ ಪೆನ್ ಟ್ಯಾಬ್ಲೆಟ್

ಜೀನಿಯಸ್ ಪೆನ್ ಟ್ಯಾಬ್ಲೆಟ್ ಜೊತೆಗೆ ದೇಶದ ಮಾರುಕಟ್ಟೆಗೆ ಇನ್ನಷ್ಟು ಉತ್ಪನ್ನಗಳನ್ನು ಪರಿಚಯಿಸಲು ಕಂಪನಿ ನಿರ್ಧರಿಸಿದೆ. ಅಂದ್ರೆ ಮೌಸ್ ಪೆನ್, ವೈರ್ ಲೆಸ್ ಉತ್ಪನ್ನಗಳು, ಕಿಡ್ಸ್ ಡಿಸೈನರ್ ಪೆನ್ ಟ್ಯಾಬ್ಲೆಟ್ ಕೂಡ ಪರಿಚಯಿಸಲಿದೆಯಂತೆ.
ಕಂಪನಿಯು ಜಿ-ಪೆನ್ ಎಫ್ 350, ಈಸಿಪೆನ್ ಎಂ506 ಮತ್ತು ಜಿ-ಪೆನ್ ಎಂ712ಎಕ್ಸ್ ಇತ್ಯಾದಿಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಮೂಲಗಳು ಹೇಳಿವೆ. ಇಷ್ಟು ಮಾತ್ರವಲ್ಲದೇ ಕಂಪನಿಯು ಈಸಿಪೆನ್ ಎಂ610ಎಕ್ಸ್ ಮತ್ತು ಮೌಸ್ ಪೆನ್ ಐ608ಎಕ್ಸ್ ಮಾಡೆಲ್ ಗಳನ್ನು ಸಹ ಪರಿಚಯಿಸಲಿದೆಯಂತೆ.
ಜೀನಿಯಸ್ ಜಿ ಪೆನ್ ಎಫ್ 350 ಟ್ಯಾಬ್ಲೆಟ್ 3 x 5 ಇಂಚು ವಿಸ್ತಾರವಾಗಿದೆ. ಇದು ಉಬುಂಟು ಅಥವಾ ವಿಂಡೋಸ್ ಸಿಸ್ಟಮ್ ಹೊಂದಿರುವ ನಿರೀಕ್ಷೆಯಿದೆ. ಜೀನಿಯಸ್ ಜಿ-ಪೆನ್ ದರ ಸುಮಾರು 3,200 ರು. ಆಸುಪಾಸಿನಲ್ಲಿರಲಿದೆ ಎಂದು ಮೂಲಗಳು ಹೇಳಿವೆ. ಈಸಿಪೆನ್ ಎಂ506 ಟ್ಯಾಬ್ಲೆಟ್ 5 x 6 ಡಿಸ್ ಪ್ಲೇ ಹೊಂದಿರಲಿದೆ.
ಇದರೊಂದಿಗೆ ಬ್ಯಾಟರಿ ಅಗತ್ಯವಿಲ್ಲದ ಕೊರ್ಡೊಲೆಸ್ ಪೆನ್ ಕೂಡ ಇದೆ. ಒಟ್ಟಾರೆ ಈ ಟ್ಯಾಬ್ಲೆಟ್ ತೂಕ 420 ಗ್ರಾಂ ಇದೆ. ಈಸಿಪೆನ್ ಎಂ506 ದರ ಸುಮಾರು 6,260 ರುಪಾಯಿ ಇರಲಿದೆ.
ಜಿ-ಪೆನ್ ಎಂ712ಎಕ್ಸ್ ಮತ್ತೊಂದು ಟ್ಯಾಬ್ಲೆಟ್. ಇದು ಮಲ್ಟಿಮೀಡಿಯಾ ಟ್ಯಾಬ್ಲೆಟ್ ಆಗಿದ್ದು, 12 x 7 ಇಂಚಿನ ಡಿಸ್ ಪ್ಲೇ ಹೊಂದಿದೆ. ಈಸಿಪೆನ್ ಎಂ610ಎಕ್ಸ್ ಟ್ಯಾಬ್ಲೆಟ್ 6 x 10 ಇಂಚಿನ ಡಿಸ್ ಪ್ಲೇ ಹೊಂದಿದೆ. ಈಸಿಪೆನ್ ಐ608ಎಕ್ಸ್ ಮತ್ತು ಮೌಸ್ ಪೆನ್ ಐ608ಎಕ್ಸ್ ದರ ಕ್ರಮವಾಗಿ 6,600 ರು. ಮತ್ತು 3,699 ರು ಇರಲಿದೆ.


Click it and Unblock the Notifications








