ತ್ರಿಇನ್ ಒನ್: ಗಿಗಾಬೈಟ್ ಸಣ್ಣ ಬುಕ್ ಟಾಪ್

Posted By: Staff

ಕೆಲವು ಗ್ಯಾಡ್ಜೆಟ್ ಗಳು ತನ್ನದೇ ಆದ ಅನುಕೂಲತೆಗಳನ್ನು ಹೊಂದಿವೆ. ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್ ಗಳು ಹಲವು ಅನುಕೂಲತೆಗಳನ್ನು ಹೊಂದಿವೆ. ಡೆಸ್ಕ್ ಟಾಪ್ ಗಳ ಅನುಕೂಲತೆಯೆಂದರೆ ಸಾಕಷ್ಟು ಕನೆಕ್ಟಿವಿಟಿ ಆಯ್ಕೆ ಮತ್ತು ಅತ್ಯಧಿಕ ಪ್ರೊಸೆಸಿಂಗ್ ಶಕ್ತಿ.

ಲ್ಯಾಪ್ ಟಾಪ್ ಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಅನುಕೂಲ. ಒಂದು ಲೆಕ್ಕದಲ್ಲಿ ಇದು ಸಂಚಾರಿ ಲ್ಯಾಪ್ ಟಾಪ್. ಟ್ಯಾಬ್ಲೆಟ್ ಕಂಪ್ಯೂಟರ್ ಗಳು ಕಾರ್ಯಕ್ಷಮತೆ ಸ್ಮಾರ್ಟ್ ಫೋನಿನಷ್ಟಿದ್ದು, ಇದು ಸಣ್ಣದಾದ ಕಂಪ್ಯೂಟರ್.

ಗಿಗಾಬೈಟ್ ಕಂಪ್ಯೂಟರ್ ನೂತನ ಸಾಧನವೊಂದನ್ನು ಹೊರತಂದಿದೆ. ಇದು ಲ್ಯಾಪ್ ಟಾಪ್, ಡೆಸ್ಕ್ ಟಾಪ್ ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್ ಗಳ ಮಿಶ್ರಣ. ನೂತನ ಬುಕ್ ಟಾಪ್ ಹೆಸರು Booktop T1132N. ಇದು ಡೆಸ್ಕ್ ಟಾಪ್, ಪಿಸಿ ಮತ್ತು ನೋಟ್ ಬುಕ್ ಗಳ ಹೈಬ್ರಿಡ್ ಆವೃತ್ತಿ.

ಗಿಗಾಬೈಟ್ ಇಂತಹ ಉತ್ಪನ್ನಗಳನ್ನು ಹಲವು ವರ್ಷಗಳ ಹಿಂದೆಯೇ ಏಷ್ಯಾ ಮಾರುಕಟ್ಟೆಗೆ ಪರಿಚಯಿಸಿತ್ತು. ಇಂತಹ ಉತ್ಪನ್ನಗಳ ಮಾರಾಟವೂ ಅತ್ಯುತ್ತಮವಾಗಿದೆ. ಕಂಪನಿಯು ಬುಕ್ ಟಾಪ್ ನ ನಾಲ್ಕು ವಿಭಿನ್ನ ಆವೃತ್ತಿಗಳನ್ನು ಪರಿಚಯಿಸಿವೆ.

ಗಿಗಾಬೈಟ್ ಟಿ1132 ಎನ್ ನೋಡಲು ಸದೃಢ ಮತ್ತು ಆಕರ್ಷಕವಾಗಿ ಕಾಣುತ್ತದೆ. ಇದು ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರಕುತ್ತಿದೆ. ಈ ಗ್ಯಾಡ್ಜೆಟ್ ತೂಕ 1.76 ಕೆ.ಜಿ.

ನೂತನ Gigabyte T1132N Booktop ಎರಡನೇ ತಲೆಮಾರಿನ ಇಂಟೆಲ್ ಐ5-2467ಎಂ ಪ್ರೊಸೆಸರ್ ಹೊಂದಿದೆ. ಇದರಲ್ಲಿ 1.66 ಗಿಗಾಹರ್ಟ್ಸ್ ವೇಗದಲ್ಲಿ ಆಕ್ಸೆಸ್ ಮಾಡಬಹುದಾಗಿದೆ. ಇದರ ಸ್ಕ್ರೀನ್ ಗಾತ್ರ 11.6 ಇಂಚು. ಇದು ಎಲ್ ಇಡಿ ಬ್ಯಾಕ್ ಲಿಟ್ ಹೊಂದಿದ್ದು, ಮಲ್ಟಿ ಟಚ್ ಸಂದೇಶಗಳಿಗೆ ಬೆಂಬಲ ನೀಡುತ್ತದೆ.

ಇದು ಎರಡು RAM ಆಯ್ಕೆಯಲ್ಲಿ ದೊರಕುತ್ತಿದೆ. ಅಂದರೆ 2ಜಿಬಿ RAM ಮತ್ತು 8ಜಿಬಿ RAM ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇದು ಮೊಬೈಲ್ ಇಂಟೆಲ್ ಎಚ್ ಎಂ65 ಎಕ್ಸ್ ಪ್ರೆಸ್ ಚಿಪ್ ಸೆಟ್ ಹೊಂದಿದೆ.

ಈ ಬುಕ್ ಟಾಪ್ ಮೂರು ಹಾರ್ಡ್ ಡಿಸ್ಕ್ ಆಯ್ಕೆಗಳಲ್ಲಿ ದೊರಕುತ್ತಿದೆ. ಅಂದರೆ 320 ಅಥವಾ, 500 ಅಥವಾ 750 ಜಿಬಿಯ ಸಾಟಾ ಹಾರ್ಡ್ ಡಿಸ್ಕ್ ನಲ್ಲಿ ಖರೀದಿಸಬಹುದಾಗಿದೆ. ಇದು ಇಂಟೆಲ್ ಎಚ್ ಡಿ ಗ್ರಾಫಿಕ್ಸ್ 3000 ಗ್ರಾಫಿಕ್ಸ್ ಕಾರ್ಡ್ ಹೊಂದಿದೆ. ಇದು NVIDIA GeForce GT 520M  ಮತ್ತು ಎನ್ವಿಡಿಯಾ ಆಫ್ಟಿಮಸ್ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡುತ್ತದೆ. ಗ್ರಾಫಿಕ್ಸ್ ಮೆಮೊರಿ 1 ಜಿಬಿಯಾಗಿದೆ.

ಎರಡು ವೂಫರ್ ಸ್ಪೀಕರ್ ಸೇರಿದಂತೆ ಈ ಬುಕ್ ಟಾಪ್ ಆಕರ್ಷಕ ಸ್ಪೀಕರ್ ಹೊಂದಿದೆ. ಇದು 1.3 ಮೆಗಾ ಫಿಕ್ಸೆಲ್ ವೆಬ್ ಕ್ಯಾಮರಾ ಹೊಂದಿದ್ದು, ವಿಡಿಯೊ ಕರೆಗಳನ್ನು ಮಾಡಬಹುದು. 2.0 ಮತ್ತು 3,0 ಆವೃತ್ತಿಯ ಯುಎಸ್ ಬಿ ಪೋರ್ಟ್, ಕಾರ್ಡ್ ರೀಡರ್ ಮತ್ತು ಎಚ್ ಡಿಎಂಐ ಔಟ್ ಪೋರ್ಟ್ ಇದರಲ್ಲಿದೆ. ಇದು 6 ಸೆಲ್ ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ನೂತನ ಸಾಧನದ ದರದ ಕುರಿತು ಮಾಹಿತಿ ಲಭ್ಯವಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot