Subscribe to Gizbot

ಗಿಗಾಬೈಟ್ ಟಿ1006 ನೆಟ್ ಬುಕ್ ಅನಾವರಣ

Posted By: Super
ಗಿಗಾಬೈಟ್ ಟಿ1006 ನೆಟ್ ಬುಕ್ ಅನಾವರಣ
ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಲ್ಯಾಪ್ ಟಾಪ್, ನೆಟ್ ಬುಕ್ ಮತ್ತು ಟ್ಯಾಬ್ಲೆಟ್ ಗಳು ಹೊಸ ಹೊಸ ಅನ್ವೇಷಣೆಗೆ ಸಾಕ್ಷಿ. ಪರ್ಸನಲ್ ಕಂಪ್ಯೂಟರ್ ಖರೀದಿಸಲು ಹೆಚ್ಚು ಜನರು ಮನಸ್ಸು ಮಾಡುತ್ತಿಲ್ಲ. ಆದರೆ ಸಣ್ಣ ಕಂಪ್ಯೂಟರ್ ಅಥವಾ ನೆಟ್ ಬುಕ್ ಹೆಚ್ಚು ಜನರು ಖರೀದಿಸುತ್ತಿದ್ದಾರೆ.

ಇದೀಗ ಗಿಗಾಬೈಟ್ ಟಿ1006 ಎಂಬ ಹಗುರ ಮತ್ತು ಸಣ್ಣದಾದ ನೆಟ್ ಬುಕ್ ನ್ನು ಗಿಗಾಬೈಟ್ ಅನಾವರಣ ಮಾಡಿದೆ. ನೂತನ ನೆಟ್ ಬುಕ್ ಇಂಟೆಲ್ ಟ್ರಯಲ್ ಚಿಪ್ ಹೊಂದಿದೆ. ಇದರಲ್ಲಿ ರೊಟೆಟ್ ಮಾಡಬಹುದಾದ ಸ್ಕ್ರೀನ್ ಇದ್ದು, ಆಕರ್ಷಕವಾಗಿ ಕಾಣುತ್ತದೆ(ಚಿತ್ರ ನೋಡಿ). ಇದು ಟ್ಯಾಬ್ಲೆಟ್ ಮತ್ತು ನೆಟ್ ಬುಕ್ ಗಳ ಕನ್ವರ್ಟೆಬಲ್ ಮಾದರಿಯಂತೆ ಕಾಣುತ್ತದೆ.

Gigabyte T1006 ನೆಟ್ ಬುಕ್ ಮಲ್ಟಿ ಟಚ್ ಪ್ಯಾನೆಲ್ ಹೊಂದಿದ್ದು, 10.1 ಇಂಚಿನ ಡಿಸ್ ಪ್ಲೇ ಹೊಂದಿದೆ. ಈ ನೆಟ್ ಬುಕ್ ಎರಡು ಸ್ಕ್ರೀನ್ ರೆಸಲ್ಯೂಷನ್ ಆಯ್ಕೆಯಲ್ಲಿ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಅಂದರೆ ಈ ನೆಟ್ ಬುಕನ್ನು 024 x 600 ಪಿಕ್ಸೆಲ್ ಮತ್ತು 1366 x 768 ಆಯ್ಕೆಯಲ್ಲಿ ಖರೀದಿಸಬಹುದು.

ಇದರಲ್ಲಿ ಡಿಡಿಆರ್3 ಮೆಮೊರಿ ಸ್ಲಾಟ್ ಮತ್ತು 2.5 ಇಂಚಿನ ಹಾರ್ಡ್ ಡ್ರೈವ್ ಬೇ ಹೊಂದಿದೆ. ಇದರಲ್ಲಿ  2.0/eಸಾಟಾ ಕಾಂಬೊ ಯುಎಸ್ ಬಿ ಮತ್ತು 2.1 ಬ್ಲೂಟೂಥ್, ಯುಎಸ್ ಬಿ 3.0, ಎಥರ್ನೆಟ್ ಮತ್ತು ಎಚ್ ಡಿಎಂಎಐ & ಡಿ-ಸಬ್ ಕನೆಕ್ಟಿವಿಟಿ ಆಯ್ಕೆಗಳಿವೆ.

ಇದರಲ್ಲಿ 1.3 ಮೆಗಾಫಿಕ್ಸೆಲ್ ಕ್ಯಾಮರಾ ಮತ್ತು ಫ್ಲಾಷ್ ಕಾರ್ಡ್ ರೀಡರ್ ಕೂಡ ಇದೆ. 1.5 ವೋಲ್ಟೆಜ್ ಸ್ಟೀರಿಯೊ ಸ್ಪೀಕರ್ ಮತ್ತು ಬುಲ್ಟ್ ಇನ್ ಮೈಕ್ರೊಫೋನ್ ಮುಂತಾದ ಮನರಂಜನೆ ಫೀಚರುಗಳಿವೆ. ಈ ನೆಟ್ ಬುಕ್ ನಲ್ಲಿ 3ಜಿ ಕೂಡ ಇದೆ. ಕಂಪನಿಯು ಇನ್ನೂ ಖಚಿತವಾಗಿ ದರ ಪ್ರಕಟಿಸಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot