ಆಂಡ್ರಾಯ್ಡ್‌ನಲ್ಲಿ 100 ಕೋಟಿ ದಾಟಿದ ಜಿಮೇಲ್ ಇನ್‌ಸ್ಟಾಲ್

Written By:

ಮಾನವನ ಬದುಕಿನಲ್ಲಿ ಎಲ್ಲಾ ರಂಗವೂ ಪ್ರಮುಖವಾಗಿರುವಂತೆ ತಾಂತ್ರಕ ರಂಗವೂ ಅತಿ ಮುಖ್ಯವಾದುದು. ಸಾಮಾಜಿಕವಾಗಿ ಮುಂದುವರಿಯಲು ಈ ತಾಂತ್ರಿಕ ರಂಗ ಅತ್ಯವಶ್ಯಕ.

ಸಾಮಾಜಿಕ ಜಾಲತಾಣಗಳ ಸಹಾಯವನ್ನು ಪಡೆದುಕೊಂಡು ನಾವು ಉತ್ತಮವಾಗಿ ಅಭಿವೃದ್ಧಿಯನ್ನು ಪಡೆಯುತ್ತಿದ್ದೇವೆ. ಈ ತಾಣಗಳು ನಮ್ಮ ಜೀವನದಲ್ಲಿ ಅಸಾಮಾನ್ಯತೆಯನ್ನು ಹುಟ್ಟುಹಾಕಿದೆ. ಇಂದು ನಾವು ಇಂತಹದೇ ಒಂದು ತಾಣದ ಬಗ್ಗೆ ಮಾತನಾಡಲಿದ್ದು ನಿಮಗೆ ಇದು ಹೆಚ್ಚಿನ ಆಸಕ್ತಿಯನ್ನು ಉಂಟು ಮಾಡಲಿದೆ.

ಜಿಮೇಲ್ ಎಂಬ ಇಮೇಲ್ ತಾಣ ಪ್ರತಿಯೊಬ್ಬರಿಗೂ ಇಂದು ಅತೀ ಅಗತ್ಯವಾದುದು. ರೆಸಿಪಿ, ವ್ಯವಹಾರ, ಕ್ರೀಡೆ, ಕೆಲಸ ಹೀಗೆ ಪ್ರತಿಯೊಂದು ರಂಗದಲ್ಲೂ ಜಿಮೇಲ್ ಅಸಾಧಾರಣವಾಗಿ ತನ್ನ ಕ್ಷೇತ್ರವನ್ನು ಸ್ಥಾಪಿಸುತ್ತಿದೆ. ಜಿಮೇಲ್ ಅನ್ನು ಬಳಸುತ್ತಿರುವವರು ವಿಶ್ವದಲ್ಲಿಯೇ 100 ಕೋಟಿ ಇದ್ದು ಜಿಮೇಲ್ ಎಷ್ಟು ಪ್ರಖ್ಯಾತಿಯನ್ನು ಪಡೆದಿದೆ ಎಂಬುದನ್ನು ಮನಗಾಣಬಹುದಾಗಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ಜಿಮೇಲ್‌ನ ಹುಟ್ಟು ಹಾಗೂ ಅದರ ಬೆಳವಣಿಗೆಯ ಬಗ್ಗೆ ಅತೀ ಮುಖ್ಯವಾದ ಅಂಶಗಳನ್ನು ಕಲಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2004: ಸ್ಥಾಪನೆ

2004: ಸ್ಥಾಪನೆ

#1

2004 ರಲ್ಲಿ ಜಿಮೇಲ್ ಸ್ಥಾಪನೆಗೆ ಎಲ್ಲಾ ರೀತಿಯ ಆರಂಭವನ್ನು ಮಾಡಿದ್ದ ಕಂಪೆನಿ 2009 ರಲ್ಲಿ ಸ್ಥಾಪನೆಯಾಯಿತು. 5 ವರ್ಷಗಳ ಕಠಿಣವಾದ ಪರಿಶ್ರಮದ ಮೂಲಕವೇ ಈ ಸಾಧನೆ ಸಾಧ್ಯವಾಗಿದೆ.

2006 ಚಾಟ್ ಹಾಗೂ ಕ್ಯಾಲೆಂಡರ್

2006 ಚಾಟ್ ಹಾಗೂ ಕ್ಯಾಲೆಂಡರ್

#2

ಜಿಮೇಲ್‌ ಈ ವರ್ಷ ಹೆಚ್ಚುವರಿ ಅಭಿವೃದ್ಧಿಗೆ ಕಾರಣವಾಯಿತು. ಫೆಬ್ರವರಿಯಲ್ಲಿ ಗೂಗಲ್ ಚಾಟ್ ಅನ್ನು ಸ್ಥಾಪನೆಗೊಳಿಸಿದ್ದು, ಹಾಗೂ ಗೂಗಲ್ ಕ್ಯಾಲೆಂಡರ್ ಅನ್ನು ಏಪ್ರಿಲ್‌ನಲ್ಲಿ ಸ್ಥಾಪಿಸಿತು.

2010 : ಪ್ರಿಯೋರೊಟಿ ಇನ್‌ಬಾಕ್ಸ್‍

2010 : ಪ್ರಿಯೋರೊಟಿ ಇನ್‌ಬಾಕ್ಸ್‍

#3

2010 ರಲ್ಲಿ ಪ್ರಿಯೋರಿಟಿ ಇನ್‌ಬಾಕ್ಸ್ ಅನ್ನು ಸ್ಥಾಪನೆ ಮಾಡಿದ ಜಿಮೇಲ್ ಮೂರು ಫೋಲ್ಡರ್‌ಗಳನ್ನು ಆರಂಬಿಸಿತು "ಇಂಪೋರ್ಟೆಂಟ್ ಹಾಗೂ ಅನ್‌ರೀಡ್", "ಸ್ಟಾರ್‌ಡ್", ಮತ್ತು "ಎವ್ರಿಥಿಂಗ್ ಎಲ್ಸ್" ಎಂದಾಗಿದೆ.

2011 : ವಿಶುವಲ್ ಬೆಳವಣಿಗೆ

2011 : ವಿಶುವಲ್ ಬೆಳವಣಿಗೆ

#4

ವಿಶುವಲ್ ಡಿಸ್‌ಪ್ಲೇಯನ್ನು ಜಿಮೇಲ್‌ಗೆ ಕಂಪೆನಿ 2011 ರಲ್ಲಿ ಸ್ಥಾಪಿಸಿತು. ಸಂವಾದಗಳಿಗೆ ಪ್ರೊಫೈಲ್ ಚಿತ್ರವನ್ನು ಹಾಕುವುದು, ಎಚ್‌ಡಿ ಥೀಮ್‌ಗಳು ಹೀಗೆ ಹಂತ ಹಂತದ ಬೆಳವಣಿಗೆಯನ್ನು ಜಿಮೇಲ್‌ಗೆ ಗೂಗಲ್ ಆರಂಭಿಸಿತು.

2013: ಕ್ಯಾಟಗರೀಸ್

2013: ಕ್ಯಾಟಗರೀಸ್

#5

ಪ್ರತ್ಯೇಕ ಟ್ಯಾಬ್‌ಗಳಿಗೆ ಒಳಬರುವ ಇಮೇಲ್‌ಗಳನ್ನು ಅತ್ಯಾಧುನಿಕ ವಿಶುವಲ್ ಅಪ್‌ಡೇಟ್ ಬೇರ್ಪಡಿಸಿತು.

ಆಂಡ್ರಾಯ್ಡ್‌ಗಾಗಿ ಜಿಮೇಲ್ (2008 ಇಲ್ಲಿಯವರೆಗೆ)

ಆಂಡ್ರಾಯ್ಡ್‌ಗಾಗಿ ಜಿಮೇಲ್ (2008 ಇಲ್ಲಿಯವರೆಗೆ)

#6

ತನ್ನ ಮೊದಲ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು 2008 ರಲ್ಲಿ ಜಿಮೇಲ್ ಪಡೆದುಕೊಂಡಿತು. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇಯಿಂದ ಬಿಲಿಯಗಟ್ಟಲೆ ಬಾರಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಐಒಎಸ್‌ಗಾಗಿ ಜಿಮೇಲ್ (2011 ಇದುವರೆಗೆ)

ಐಒಎಸ್‌ಗಾಗಿ ಜಿಮೇಲ್ (2011 ಇದುವರೆಗೆ)

#7

ನವೆಂಬರ್ 2011 ರಲ್ಲಿ ಐಒಎಸ್‌ಗಾಗಿ ಜಿಮೇಲ್ ಅಪ್ಲಿಕೇಶನ್ ಆಗಮಿಸಿತು. ಇತ್ತೀಚೆಗೂ ಈ ಅಪ್ಲಿಕೇಶನ್ ನವೀಕರಣವಾಗುತ್ತಿದ್ದು ಐದು ಪ್ರತ್ಯೇಕ ಖಾತೆಗಳಿಗೆ ಬಳಕೆದಾರರನ್ನು ಬದಲಾಯಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot