ಗೂಗಲ್ ಅಸುಸ್ ನೆಕ್ಸಸ್ ಟ್ಯಾಬ್ಲೆಟ್ ಜೂನ್ ಗೆ

By Varun
|

ಗೂಗಲ್ ಅಸುಸ್ ನೆಕ್ಸಸ್ ಟ್ಯಾಬ್ಲೆಟ್ ಜೂನ್ ಗೆ

ಗೂಗಲ್, ಹೆಸರಾಂತ ಲ್ಯಾಪ್ಟಾಪ್ ಉತ್ಪಾದಕ ಅಸುಸ್ ಜೊತೆಗೂಡಿ ತಯಾರಿಸುತ್ತಿರುವ ಬಹುನಿರೀಕ್ಷಿತ  ಆಂಡ್ರಾಯ್ಡ್ ಟ್ಯಾಬ್ಲೆಟ್- ಗೂಗಲ್ ಅಸುಸ್ ನೆಕ್ಸಸ್ ಜೂನ್ ತಿಂಗಳಲ್ಲಿ ಬರಲಿದೆ ಎಂಬ ಸುದ್ದಿ ಬಂದಿದೆ. ಜುಲೈ ವೇಳೆಗೆ ಬರಬೇಕಿದ್ದ ಈ ಟ್ಯಾಬ್ಲೆಟ್ ಅನ್ನು ಅವಧಿಗೆ ಮುನ್ನವೆ ಹೊರತರುತ್ತಿರುವ ಗೂಗಲ್ ಈಗಾಗಲೇ  6 ಲಕ್ಷ ಟ್ಯಾಬ್ಲೆಟ್ ಗಳನ್ನ ಸಿದ್ಧಪಡಿಸಿದೆ ಎಂದು ಡಿಜಿಟೈಮ್ಸ್ ವರದಿ ಮಾಡಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಗೂಗಲ್ ನ ಎರಿಕ್ ಸ್ಕ್ಮಿಟ್, ತಮ್ಮ ಕಂಪನಿ  ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಲಿರುವ ಸುದ್ದಿಯನ್ನು ಖಾತ್ರಿಗೊಳಿಸಿದ್ದರು. ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ, 7 ಇಂಚ್ ಸ್ಕ್ರೀನ್, ಡ್ಯುಯಲ್-ಕೋರ್ ಕ್ವಾಲ್ಕಾಂ ಪ್ರೋಸೆಸರ್ ಹೊಂದಿದೆ ಎನ್ನಲಾದ ಈ ಟ್ಯಾಬ್ಲೆಟ್, ಅಮೆಜಾನ್ ನ ಕಿಂಡಲ್ ಟ್ಯಾಬ್ಲೆಟ್ ಗೆ ನೇರ ಸ್ಪರ್ಧೆ ಒಡ್ಡಲಿದೆ ಎಂದು ಹೇಳಲಾಗುತ್ತಿದೆ.

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X