Subscribe to Gizbot

ಕಿಶೋರ್ ಕುಮಾರ್ ಹಟ್ಟುಹಬ್ಬ ಗೂಗಲ್ ವಿಶೇಷ ಆಚರಣೆ

Posted By:

ಸಂಗೀತದ ದಂತಕಥೆ ಎಂದೇ ಹೆಸರಾದ ಕಿಶೋರ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಗೂಗಲ್ ಕಿಶೋರ್ ಕುಮಾರ್ ಫೋಟೋ ಇರುವ ಡೂಡಲ್ ಅನ್ನು ಹೊರತಂದಿದೆ. ಅಂತರ್ಜಾಲದ ಮುಖ್ಯ ಪರದೆಯಲ್ಲಿ ಮೆರೆಯುತ್ತಿರುವ ಕಿಶೋರ್ ಕುಮಾರ್ ಫೋಟೋ ನಿಜಕ್ಕೂ ಅಮೋಘವಾಗಿದೆ.

ತಮ್ಮ ಅಮೋಘ ಹಾಡುಗಾರಿಕೆ ಮತ್ತು ಸುಂದರ ಸಿರಿಕಂಠದಿಂದ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ಕಿಶೋರ್ ಕುಮಾರ್ ಇಂದು ತಮ್ಮ 85 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಗೂಗಲ್ ತನ್ನ ಹುಟುಕಾಟ ಪುಟದಲ್ಲಿ ಈ ಅಮೋಘ ಪ್ರತಿಭೆಯನ್ನು ಇರಿಸುವ ಮೂಲಕ ಕಿಶೋರ್ ಕುಮಾರ್ ಅಭಿಮಾನಿಗಳಿಗೆ ಅವರ ಕುರಿತ ಸಮಗ್ರ ಮಾಹಿತಿಯನ್ನು ನೀಡುತ್ತಿದೆ.

ಕಿಶೋರ್ ಹುಟ್ಟುಹಬ್ಬಕ್ಕೆ ಗೂಗಲ್ ಡೂಡಲ್ ಕೊಡುಗೆ

ಕಿಶೋರ್ ಕುಮಾರ್ ಹಿನ್ನಲೆಗಾಯಕರಲ್ಲದೆ, ನಟರು, ಹಾಡು ಸಂಯೋಜಕರು, ನಿರ್ಮಾಪಕರು, ನಿರ್ದೇಶಕರು ಹೀಗೆ ಹಲವಾರು ರಂಗಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮತ್ತು ಇಂದು ಗೂಗಲ್ ಅವರ ಹುಟ್ಟುಹಬ್ಬದ ದಿನದಂದು ಕಿಶೋರ್ ಕುಮಾರ್ ಜಾಣ್ಮೆಯನ್ನು ಇಡಿಯ ಲೋಕಕ್ಕೆ ಪ್ರದರ್ಶಿಸಲಿದೆ.

ಹಿನ್ನಲೆ ಗಾಯನದಲ್ಲಿ ಅತ್ಯದ್ಭುತ ಹೆಸರು ಮಾಡಿರುವ ಕಿಶೋರ್ ಕುಮಾರ್ ಆಗಸ್ಟ್ 4, 1929 ರಂದು ಕಾಂಡ್ವಾದಲ್ಲಿ ಜನಿಸಿರದರು. ಮೊತ್ತ ಮೊದಲಿಗೆ ತಮ್ಮ ವೃತ್ತಿಯನ್ನು ಬಾಂಬೇ ಟಾಕೀಸ್ ಎಂಬ ಚಿತ್ರದ ಹಿನ್ನಲೆ ಗಾಯಕರಾಗಿ ಆರಂಭಿಸಿದ ಕಿಶೋರ್ ಕುಮಾರ್ ಕೆ. ಎಲ್ ಸೈಗಲ್ ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಿದ್ದರು.

ನಂತರ ಹಂತ ಹಂತವಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕಿಶೋರ್ ಕುಮಾರ್ 1946 ರಲ್ಲಿ ಶಿಕಾರಿ ಸಿನಿಮಾದಲ್ಲಿ ಅಭಿನಯಿಸಿದರು. ಅವರು ಅಭಿನಯಿಸಿರುವ ಇತರ ಚಿತ್ರಗಳೆಂದರೆ ನ್ಯೂ ಡೆಲ್ಲಿ (1957), ಆಶಾ ((1957), ಚಲ್ತಿ ಕೀ ನಾಮ್ ಗಾಡಿ (1958), ಹಾಫ್ ಟಿಕೆಟ್ (1962), ಮತ್ತು ಪಡೋಸನ್ (1968) ಆಗಿದೆ.

ಇನ್ನು ಅವರ ಖಾಸಗಿ ಬದುಕಿನತ್ತ ಮುಖ ಮಾಡುವುದಾದರೆ ಕಿಶೋರ್ ಕುಮಾರ್ ನಾಲ್ಕು ಬಾರಿ ಮದುವೆಯಾಗಿದ್ದಾರೆ. ರೂಮಾ ಗುಹಾ, ಮಧುಬಾಲಾ, ಯೋಗಿತಾ ಬಾಲಿ, ಲೀನಾ ಚಂದಾವರ್ಕರ್ ಹೀಗೆ ನಾಲ್ಕು ಅಭಿನೇತ್ರಿಗಳನ್ನು ಕಿಶೋರ್ ಕುಮಾರ್ ಮದುವೆಯಾಗಿದ್ದಾರೆ ನಂತರ ಅಕ್ಟೋಬರ್ 13, 1987 ರಂದು ಇಹಲೋಕವನ್ನು ತ್ಯಜಿಸಿದರು.

Read more about:
English summary
This article tells about Google celebrate kishore kumars 85th birth anniversary via doodle.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot