ಡೌನ್ಲೋಡ್ ಮಾಡಿಕೊಳ್ಳಿ, ಗೂಗಲ್ ಕ್ರೋಮ್ 19

Posted By: Varun
ಡೌನ್ಲೋಡ್ ಮಾಡಿಕೊಳ್ಳಿ, ಗೂಗಲ್ ಕ್ರೋಮ್ 19

ವಿಶ್ವದ ಅತ್ಯಂತ ಫೇಮಸ್ ಇಂಟರ್ನೆಟ್ ಬ್ರೌಸರ್ ಆದ ಗೂಗಲ್ ಕ್ರೋಮ್ ನ 19 ನೆ ಆವೃತ್ತಿಯನ್ನು ಗೂಗಲ್ ಬಿಡುಗಡೆ ಮಾಡಿದೆ.

ಪ್ರತಿಯೊಂದು ಹೊಸ ಆವೃತ್ತಿಯ ಜೊತೆ ಹೊಸ ಹೊಸ ಫೀಚರುಗಳನ್ನು ಸೇರಿಸುತ್ತಾ ಹೋಗುವ ಗೂಗಲ್ ಕ್ರೋಮ್, ಈ ಬಾರಿ Tab Syncing ಎಂಬ ಹೊಸ ಫೀಚರ್ ಅನ್ನು ಸೇರಿಸಿ ಕ್ರೋಮ್ 19 ಅನ್ನು ಬಿಡುಗಡೆ ಮಾಡಿದೆ.

ಈ Tab Syncing ವಿಶೇಷತೆ ಏನೆಂದರೆ, ಉದಾಹರಣೆಗೆ ನೀವು ಆಫೀಸಿನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುತ್ತಿದ್ದಾಗ ಅಥವಾ ಯಾವುದೋ ಒಂದು ವಿಷಯದ ಬಗ್ಗೆ ಹುಡುಕುತ್ತಿದ್ದಾಗ ನಿಮಗೆ ಒಳ್ಳೆಯ ವೆಬ್ಸೈಟ್ ಸಿಕ್ಕಿತೆಂದು ಇಟ್ಟುಕೊಳ್ಳಿ. ಆದರೆ ಆಫೀಸಿನಲ್ಲಿ ನಿಮಗೆ ಓದಲು ಆಗುವುದಿಲ್ಲವಾದರಿಂದ ಆ ವೆಬ್ಸೈಟ್ ಅನ್ನು Bookmark ಮಾಡಿಕೊಂಡರೂ ಮನೆಯಲ್ಲಿ ಅದೇ ವೆಬ್ಸೈಟ್ ಅನ್ನು ಓದಲು ಆಗುವುದಿಲ್ಲ.

ಆದರೆ ಈ ಹೊಸ Tab Syncing ಮೂಲಕ ನೀವು ಒಂದು ಗೂಗಲ್ ಕ್ರೋಮ್ ಬ್ರೌಸರ್ ಅಲ್ಲಿ ಯಾವುದೇ ವೆಬ್ಸೈಟ್ ಅನ್ನು tab ಮಾಡಿಕೊಂಡು ಬ್ರೌಸ್ ಮಾಡಿದರೂ, ಆ ವೆಬ್ಸೈಟ್ ಅನ್ನು ನೀವು ಮನೆಯ ಕಂಪ್ಯೂಟರ್, ಇಲ್ಲವೆ ನಿಮ್ಮ ಸ್ಮಾರ್ಟ್ ಫೋನ್, ಹಾಗು ಟ್ಯಾಬ್ಲೆಟ್ ಮೂಲಕವೂ ಎಲ್ಲಿ ಬೇಕಾದರೂ ಅದನ್ನು Access ಮಾಡಬಹುದಾಗಿದೆ.

ಕೇವಲ Tab ಆದ ವೆಬ್ಸೈಟ್ ಅಷ್ಟೇ apps, history, themes, extensions, bookmarks ಹಾಗು settings ಕೂಡಾ synchornize ಮಾಡಿಕೊಳ್ಳಬಹುದು, ಈ ಫೀಚರ್ ನ ಮೂಲಕ.

ಹಾಗಿದ್ದರೆ ಗೂಗಲ್ ಕ್ರೋಮ್ 19 ಅನ್ನು ಈಗಲೇ ಡೌನ್ಲೋಡ್ ಮಾಡಿಕೊಳ್ಳಿ. ಹ್ಯಾಪಿ ಬ್ರೌಸಿಂಗ್ :)

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot