ಜಿಂಗಲ್ ಬೆಲ್ ಡೂಡಲ್: ಸರಿಗಮಪ ಹೇಳುತ್ತಿದೆ ಗೂಗಲ್

Posted By:

ಜಿಂಗಲ್ ಬೆಲ್ ಡೂಡಲ್: ಸರಿಗಮಪ ಹೇಳುತ್ತಿದೆ ಗೂಗಲ್

ಕ್ರಿಸ್ಮಸ್ ಸಮಯಕ್ಕೆ ಗೂಗಲ್ ತುಂಬಾ ಆಕರ್ಷಕವಾದ ಡೂಡಲ್ ತಂದಿದೆ. ಡೂಡಲ್ ಕೆಳಗಡೆ ಬಟನ್ ಗಳಿದ್ದು ಇದನ್ನು ಕ್ಲಿಕ್ ಮಾಡಿ ಜಿಂಗಲ್ ಬೆಲ್ ಕೇಳಬಹುದು. ಇದರಿಂದ ಕ್ರಿಸ್ ಮಸ್ ಹಬ್ಬಕ್ಕೆ ಮತ್ತಷ್ಟು ಕಳೆ ಬಂದಂತೆ ಆಗಿದೆ. ಇದನ್ನು ಮುಖಪುಟದಲ್ಲಿ ಇದನ್ನು ನೆನ್ನೆಯಷ್ಟೆ ಹಾಕಿದ ಡೂಡಲ್ ತುಂಬಾ ಸರಳವಾಗಿದ್ದು LED ಡೂಡಲ್ ಪ್ರೆಸ್ ಮಾಡಿದ ತಕ್ಷಣ ಆಕರ್ಷಕವಾದ ರೇಖಾ ಚಿತ್ರದ ಜೊತೆ ಮ್ಯೂಸಿಕ್ ಕೂಡ ಕೇಳಿ ಆನಂದಿಸಬಹುದು.

ಈ ಡೂಡಲ್ ನಲ್ಲಿ 6 ಬಟನ್ ಇದ್ದು ಅವುಗಳು ಹೊಳೆಯುತ್ತಿರುತ್ತವೆ. ಅವುಗಳನ್ನು ಕ್ಲಿಕ್ ಮಾಡಿದ ತಕ್ಷಣ ಒಂದೊಂದು ಬಟನ್ ನಲ್ಲಿ ಒಂದೊಂದು ರೀತಿಯ ರೀತಿಯ ಮ್ಯೂಸಿಕ್ ಕೇಳಿ ಬರುತ್ತದೆ.ಈ ರೇಖಾ ಚಿತ್ರಗಳು ಕೂಡ ಕ್ರಿಸ್ ಮಸ್ ಗೆ ಹಬ್ಬಕ್ಕೆ ಹೊಂದುವ ರೇಖಾ ಚಿತ್ರಗಳು ಅಂದರೆ ಚಳಿಗಾಲಕ್ಕೆ ಹೊಂದುವಂತೆ ಮಂಜುಗೆಡ್ಡೆ, ಸಾಂಟಕ್ಲಾಸ್, ಜಿಂಗಲ್ ಬೆಲ್, ಸ್ನೋಮ್ಯಾನ್, ಮೇಣದ ಬತ್ತಿ ಕೊನೆಗೆ ಗಿಫ್ಟ್ ಬಾಕ್ಸ್ ಇದೆ. ಅವುಗಳ ಕೆಳಗಿನ ಬಟನ್ ಒತ್ತಿದರೆ ಈ ರೇಖಾ ಚಿತ್ರಗಳ ಜೊತೆ ಮ್ಯೂಸಿಕ್ ಕೂಡ ಕೇಳಬಹುದು.

2011ರಲ್ಲಿ ಗೂಗಲ್ ಸುಮಾರು 259 ಡೂಡಲ್ ಹಾಕಿದ್ದು ಅದರಲ್ಲಿ ಕೆಲವೊಂದು ಕೆಲವು ದೇಶಕಷ್ಟೆ ಸೀಮಿತವಾಗಿದ್ದು ಕೆಲವು ಡೂಡಲ್ ಅನ್ನು ಪ್ರಪಂಚದಯೆಲ್ಲಡೆ ಗೂಗಲ್ ನಲ್ಲಿ ಹಾಕಲಾಗಿತ್ತು. ಗೂಗಲ್ ಈ ರೀತಿ ಕ್ರಿಸ್ಮಸ್ಡೂಡಲ್ ಅನ್ನು 1998ರಿಂದಲೂ ಬೇರೆ ಬೇರೆ ರೀತಿಯ ಡೂಡಲ್ ನೀಡುತ್ತಾ ಬಂದಿದೆ. ಅವುಗಳನ್ನು ನೋಡಲು ಬಯಸುವವರು ಡೂಡಲ್ ಸೈಟ್ ನೋಡಬಹುದು.

ಈ ಕ್ರಿಸ್ಮಸ್ ಡೂಡಲ್ ಜಿಂಗಲ್ ಬೆಲ್ ಕೇಳುತ್ತಾ ಎಂಜಾಯ್ ಮಾಡಿ, ಹ್ಯಾಪಿ ಕ್ರಿಸ್ಮಸ್.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot