ಗೂಗಲ್ ಟ್ಯಾಬ್ಲೆಟ್ ಬಂತು.ಆಪಲ್,ಅಮೆಜಾನ್ಗೆ ಕುತ್ತು

ನೆನ್ನೆ ನಾವು ಅಂದುಕೊಂಡ ಹಾಗೆಯೇ ಗೂಗಲ್ ತನ್ನ ಅತಿ ನಿರೀಕ್ಷಿತ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ 7 ಇಂಚ್ ಟ್ಯಾಬ್ಲೆಟ್ ಅನ್ನು ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ಬಿಡುಗಡೆ ಮಾಡಿತು.
ನೆಕ್ಸಸ್ 7 ಎಂದು ಹೆಸರಿಡಲಾಗಿರುವ ಈ ಟ್ಯಾಬ್ಲೆಟ್ನಲ್ಲಿ ಆಂಡ್ರಾಯ್ಡ್ ನ ಹೊಸ ಆವೃತ್ತಿ ಜೆಲ್ಲಿ ಬೀನ್ ಇರಲಿದ್ದು, 199 ಡಾಲರ್ ಗೆ ಬಿಡುಗಡೆಯಾಯಿತು (ಅಂದಾಜು 11 ಸಾವಿರ ರೂಪಾಯಿ). ಈ ರೇಟು ಹೆಚ್ಚೂ ಕಡಿಮೆ, ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ನಂ 2 ಸ್ಥಾನದಲ್ಲಿರುವ ಅಮೆಜಾನ್ ನ ಕಿಂಡಲ್ ಫೈರ್ ನಷ್ಟೇ ಆಗಿದ್ದು, ನೇರವಾಗಿ ಅಮೆಜಾನ್ ಅನ್ನುಗುರಿಯಾಗಿಟ್ಟುಕೊಂಡು ಬೆಲೆ ನಿಗದಿಪದಿಸಿದಂತಿದೆ.
ಅಮೇರಿಕಾ, ಕೆನಡಾ ಹಾಗು ಆಸ್ಟ್ರೇಲಿಯಾ ದೇಶಗಳಲ್ಲಿ ನೆನ್ನೆಯಿಂದಲೇ ಆನ್ಲೈನ್ ಬಕಿಂಗ್ ಶುರುವಾಗಿದ್ದು ಜುಲೈ ಮಧ್ಯಭಾಗದ ವೇಳೆಗೆ ಭಾರತದ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.
ಒಂದು ಕಡೆ ಆಪಲ್ ನ ಟ್ಯಾಬ್ಲೆಟ್, ಐಪ್ಯಾಡ್ ಬೆಲೆ ಶುರುವಾಗುವುದೇ 499 ಡಾಲರ್ ನಿಂದ. ಐಪ್ಯಾಡ್ 2 ಕೂಡ 25 ಸಾವಿರಕ್ಕೆ ಕಡಿಮೆ ಇಲ್ಲದ ಕಾರಣ ಗೂಗಲ್ ನ ನೆಕ್ಸಸ್ ಟ್ಯಾಬ್ಲೆಟ್ ಖಂಡಿತವಾಗಿಯೂ ಆಪಲ್ ಹಾಗು ಅಮೆಜಾನ್ ಕಿಂಡಲ್ ಟ್ಯಾಬ್ಲೆಟ್ ಬುಡಕ್ಕೆ ಸೈಲೆಂಟ್ ಆಗಿ ಬಿಸಿ ಮಾಡುವುದಂತೂ ಗ್ಯಾರಂಟಿ.
ನೆಕ್ಸಸ್ 7 ನ ವಿಶೇಷತೆಗಳು ಗೊತ್ತಾ:
- ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ತಂತ್ರಾಂಶ
- 7 ಇಂಚ್ ನ HD ಸ್ಕ್ರೀನ್
- 1280x800 ಪಿಕ್ಸೆಲ್ ರೆಸಲ್ಯೂಶನ್ IPS ಡಿಸ್ಪ್ಲೇ
- 1.3 GHz ಕ್ವಾಡ್ ಕೋರ್ ಟೆಗ್ರಾ 3 ಪ್ರೋಸೆಸರ್
- GeForce 12 ಕೋರ್ ಗ್ರಾಫಿಕ್ಸ್
- 1 GB ರಾಮ್
- ವಾಯ್ಸ್ ಸರ್ಚ್
- 1.2 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ
- ವೈಫೈ, ಬ್ಲೂಟೂತ್ ಹಾಗು NFC (ನಿಯರ್ ಫೀಲ್ಡ್ ಕನೆಕ್ಟಿವಿಟಿ)
- 9 ಗಂಟೆ ಬ್ಯಾಟರಿ ಬ್ಯಾಕಪ್
- 300 ಗಂಟೆ ಸ್ಟಾಂಡ್ ಬೈ
- 340 ಗ್ರಾಂ ತೂಕ
- ಗೂಗಲ್ ಪ್ಲೇ ಸಂಪರ್ಕ (ಆಂಡ್ರಾಯ್ಡ್ ಆಪ್ ಗಳಿಗೆ)
11 ಸಾವಿರಕ್ಕೆ ಬರುವ ಈ ಟ್ಯಾಬ್ಲೆಟ್ ಅನ್ನು ತೈವಾನ್ ನ ಅಸೂಸ್ ಉತ್ಪಾದನೆ ಮಾಡಿದ್ದು, ಸರಕಾರದ ಆಕಾಶ್ 2 ಅಗ್ಗದ ಟ್ಯಾಬ್ಲೆಟ್ ಬರುವುದಕ್ಕೆ ಕಾದು, ಕೊಳ್ಳುವ ಬದಲು ಭಾರತೀಯ ಗ್ರಾಹಕರು ಇನ್ನೆರಡು ವಾರ ಇದಕ್ಕೆ ಕಾದು ಉತ್ತಮವಾದ ನೆಕ್ಸಸ್ 7 ಕೊಳ್ಳುವುದು ಒಳಿತು.


Click it and Unblock the Notifications




