ಬಗ್ ನಿವಾರಣೆಗೆ ಗೂಗಲ್ ಹೆಣೆದ ಹೊಸ ತಂತ್ರ

Written By:

ಗೂಗಲ್ ತನ್ನ ಹೊಸ ಪ್ರಾಜೆಕ್ಟ್ ಆದ "ಪ್ರೊಜೆಕ್ಟ್ ಜೀರೋ" ಗೆ ತಂಡವನ್ನು ನಿಯೋಜಿಸಿದೆ. ಅಂತರ್ಜಾಲದಲ್ಲಿ ಕಾಣಿಸಿಕೊಳ್ಳುವ ಬಗ್‌ಗಳ ನಿವಾರಣೆ ಈ ಪ್ರಾಜೆಕ್ಟ್‌ನ ಮುಖ್ಯ ಗುರಿಯಾಗಿದ್ದು ಬಗ್‌ಗಳಿಂದ ಅಂತರ್ಜಾಲ ಬಳಕೆದಾರರನ್ನು ರಕ್ಷಿಸುವ ಗುರಿಯನ್ನು ಗೂಗಲ್ ಹೊಂದಿದೆ.

ಹಾರ್ಟ್‌ಬ್ಲೀಡ್‌ನಂತಹ ಬಗ್‌ಗಳನ್ನು ನಿವಾರಣೆ ಮಾಡುವ ಗುರಿಯನ್ನು ಈ ತಂಡ ಹೊಂದಿದ್ದು ನಿಯೋಜಿತ ತಂಡವು ಅಂತರ್ಜಾಲದ ಸುರಕ್ಷತೆ ಮತ್ತು ಭದ್ರತೆಗಾಗಿ ತಮ್ಮ ನೂರು ಶೇಕಡದಷ್ಟು ಸಮಯನ್ನು ವಿನಿಯೋಗಿಸಲಿದ್ದಾರೆ.

ಕ್ರಿಮಿನಲ್ ಅಥವಾ ಸಾಮಾಜಿಕ ದುಷ್ಕರ್ಮಿಗಳು ಸಾಫ್ಟ್‌ವೇರ್ ಬಗ್‌ಗಳನ್ನು ನಿಮ್ಮ ಕಂಪ್ಯೂಟರ್‌ಗೆ ಹಾನಿ ಮಾಡಲು ಕೆಟ್ಟ ರೀತಿಯಲ್ಲಿ ಬಳಸುತ್ತಿದ್ದು ಈ ದುಷ್ಕರ್ಮಿಗಳ ಉದ್ದೇಶ ನಿಮ್ಮ ರಹಸ್ಯ ವಿಷಯ ಮತ್ತು ಸಂವಹನಗಳನ್ನು ಕದಿಯುವುದಾಗಿದೆ. ಅಂತರ್ಜಾಲವನ್ನು ಬಳಸುವವರು ಇಂತಹ ಕೆಟ್ಟ ಜನರಿಂದ ತಮ್ಮನ್ನು ರಕ್ಷಿಸಿಕೊಂಡು ಸುರಕ್ಷಿತವಾಗಿ ಅಂತರ್ಜಾಲವನ್ನು ಬಳಸುವಂತಾಗಬೇಕು ಎಂದು ಗೂಗಲ್‌ನ ಭದ್ರತಾ ಸಂಶೋಧಕ ತಂಡದ ಸದಸ್ಯರಾದ ಕ್ರಿಸ್ ಇವಾನ್ಸ್ ಅಧಿಕೃತ ಬ್ಲಾಗ್ ಪೋಸ್ಟ್‌ ಇಲ್ಲಿ ತಿಳಿಸಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸಲು ನಾವು ಸಾಧ್ಯವಾದಷ್ಟು ಪ್ರಯತ್ನಿಸಿ ಅಂತರ್ಜಾಲ ಬಳಕೆಯನ್ನು ಸುರಕ್ಷಿತ ಮತ್ತು ಜನರಿಗೆ ಇದು ಭದ್ರವಾಗಿದೆ ಎಂಬ ಭಾವನೆಯನ್ನು ಉಂಟುಮಾಡುತ್ತೇವೆ ಎಂದವರು ತಿಳಿಸಿದ್ದಾರೆ.

ಬಗ್ ಅನ್ನು ಕಂಡ ಒಡನೆಯೆ ತಂಡದವರು ಇದನ್ನು ಸಾಫ್ಟ್‌ವೇರ್ ವೆಂಡೋರ್‌ಗಳ ಗಮನಕ್ಕೆ ತರುತ್ತಾರೆ. ಇದು ಮೂರನೆಯ ವ್ಯಕ್ತಿಗಳಿಗೆ ತಿಳಿಯುವುದಿಲ್ಲ ಮತ್ತು ಅದನ್ನು ಪಬ್ಲಿಕ್ ಡೇಟಾಬೇಸ್‌ ನಲ್ಲಿ ಫೈಲ್ ಮಾಡಲಾಗುತ್ತದೆ. ಇದು ದುಷ್ಕರ್ಮಿಗಳ ಪಟ್ಟಿಯನ್ನು ನೀಡುತ್ತದೆ. ಬಗ್ ಅನ್ನು ಕಂಡೊಡನೆ ಸಾಫ್ಟ್‌ವೇರ್ ವೆಂಡೋರ್‌ಗಳು ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ ಮತ್ತು ಅದು ಬಳಕೆದಾರರಿಗೆ ತೊಂದರೆ ಉಂಟುಮಾಡದಂತೆ ಅದನ್ನು ನಿವಾರಿಸುತ್ತಾರೆ. ಈ ನಿಟ್ಟಿನಲ್ಲಿ ಸಾಫ್ಟ್‌ವೇರ್ ವೆಂಡೋರ್‌ಗಳನ್ನು ಆದಷ್ಟು ಪ್ರವೃತ್ತರಾಗುವಂತೆ ಮಾಡಿ ಈ ಸಮಸ್ಯೆಯನ್ನು ಬಳಕೆದಾರರಿಗೆ ಸಾಧ್ಯವಾದಷ್ಟು ಬೇಗನೇ ನಿವಾರಿಸಿ ಕೊಡಲಾಗುತ್ತದೆ ಎಂದು ಇವಾನ್ಸ್ ತಿಳಿಸಿದ್ದಾರೆ.

Read more about:
English summary
This article tells that Google hires project zero hackers to debug the internet.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot