ಗೂಗಲ್‌ ನೆಕ್ಸಸ್‌ 10 ಟ್ಯಾಬ್ಲೆಟ್‌: 5 ವದಂತಿಗಳು

Posted By:

ಆಪಲ್‌ನ ಐಪ್ಯಾಡ್‌ ಪ್ರತಿಯಾಗಿ ಗೂಗಲ್‌ ಬಿಡುಗಡೆ ಮಾಡಲಿರುವ ನೆಕ್ಸಸ್‌ 10 ಟ್ಯಾಬ್ಲೆಟ್‌ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ. ಗೂಗಲ್‌ ಈ ಹಿಂದೆ ಆಂಡ್ರಾಯ್ಡ್‌ ಜೆಲ್ಲಿ ಬೀನ್‌ 4.3 ಅಪ್‌ಡೇಟ್‌ ಆವೃತ್ತಿ ಬಿಡುಗಡೆ ಮಾಡಿದಾಗ ನೆಕ್ಸಸ್‌7(2013) ಟ್ಯಾಬ್ಲೆಟ್‌ ಬಿಡುಗಡೆ ಮಾಡಿತ್ತು.ನಂತರ ತಮ್ಮ ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆ ಸಂದರ್ಭದಲ್ಲಿ ಹೊಸ ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿತ್ತು. ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆ ಮಾಡುತ್ತಿರುವ ಪ್ರಥಮ ಟ್ಯಾಬ್ಲೆಟ್‌ ಇದಾಗಿರುವುದಿಂದ ನಿರೀಕ್ಷೆ ಹೆಚ್ಚಿದೆ.


ಅಷ್ಟೇ ಅಲ್ಲದೇ ಗೂಗಲ್‌ನದ್ದೇ ಟ್ಯಾಬ್ಲೆಟ್‌ ಇದಾಗಿರುವಿದರಿಂದ ಹೊಸ ಆಂಡ್ರಾಯ್ಡ್‌ ಓಎಸ್‌ ಬಿಡುಗಡೆಯಾದ ಕೆಲ ದಿನಗಳಲ್ಲೇ ಅಪ್‌ಡೇಟ್‌ ಅವಕಾಶವನ್ನು ನೆಕ್ಸಸ್‌ ಟ್ಯಾಬ್ಲೆಟ್‌/ಸ್ಮಾರ್ಟ್‌ಫೋನ್‌ಗಳಿಗೆ ಕಲ್ಪಿಸುತ್ತದೆ.ಈ ಕಾರಣಕ್ಕಾಗಿ ಆಂಡ್ರಾಯ್ಡ್‌ ಈ ಟ್ಯಾಬ್ಲೆಟ್‌‌ನ್ನು ಖರೀದಿಸುವವರು ಇದ್ದಾರೆ.ಹೀಗಾಗಿ ಗೂಗಲ್‌ ದೊಡ್ಡ ಗಾತ್ರದ ಟ್ಯಾಬ್ಲೆಟ್‌ನ ವಿಶೇಷತೆಗೆ ಸಂಬಂಧಿಸಿದಂತೆ ಕೆಲವೊಂದು ವದಂತಿಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿದ್ದು ಆ ಸುದ್ದಿಗಳನ್ನು ಇಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪರೇಟಿಂಗ್‌ ಸಿಸ್ಟಂ ಮತ್ತು ಡಿಸ್ಪ್ಲೇ:
  


ಗೂಗಲ್‌,ಸ್ಯಾಮ್‌ಸಂಗ್‌ ಸಹಭಾಗಿತ್ವದಲ್ಲಿ ಬಿಡುಗಡೆಯಾಗಲಿರುವ ನೆಕ್ಸಸ್‌ 10 ಟ್ಯಾಬ್ಲೆಟ್‌‌ ಆಂಡ್ರಾಯ್ಡ್‌ನ ಹೊಸ ಕಿಟ್‌ಕ್ಯಾಟ್‌ ಓಎಸ್‌ನಲ್ಲಿ ಬಿಡುಗಡೆಯಾಗಲಿದೆ. 299 ಪಿಪಿಐ, 2560 x 1600 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 10.1 ಇಂಚಿನ ಸ್ಕ್ರೀನ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

 

 ಕ್ಯಾಮೆರಾ:
  


ಸದ್ಯದ ಮಾರುಕಟ್ಟೆಯಲ್ಲಿ 13 ಎಂಪಿ ಹೊಂದಿರುವ ಕ್ಯಾಮೆರಾಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಟ್ಯಾಬ್ಲೆಟ್‌ ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಕ್ಯಾಮೆರಾ ಮತ್ತು ಮುಂದುಗಡೆ 2.1 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

 

 

  ಮೆಮೊರಿ:
  


ಗೂಗಲ್‌ ನೆಕ್ಸಸ್‌ 10 ಟ್ಯಾಬ್ಲೆಟ್‌ 32ಜಿಬಿ ಆಂತರಿಕ ಮೆಮೊರಿ ಮತ್ತು 3GB RAMನೊಂದಿಗೆ ಬಿಡುಗಡೆಯಾಗಲಿದೆ ಎನ್ನುವುದನ್ನು ಕೆಲವು ಸುದ್ದಿ ಮಾಧ್ಯಮಗಳು ಪ್ರಕಟಿಸಿದೆ.ಆದರೆ ಮೆಮೊರಿ ವಿಸ್ತರಿಸಲು ಎಸ್‌ಡಿ ಕಾರ್ಡ್‌‌ ಸೌಲಭ್ಯವನ್ನು ನೀಡದಿರಲು ಗೂಗಲ್‌ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

 ಪ್ರೊಸೆಸರ್‌:
  


ಗೂಗಲ್‌ ತನ್ನ ಆಂಡ್ರಾಯ್ಡ್ ಸಾಧಗಳಿಗೆ ಶಕ್ತಿಶಾಲಿ ಪ್ರೊಸೆಸರ್‌ಗಳನ್ನು ನೀಡಿಕೊಂಡು ಬಂದಿದೆ.ಹೀಗಾಗಿ ನೆಕ್ಸಸ್‌ 10 ಟ್ಯಾಬ್ಲೆಟ್‌ Qualcomm Snapdragon 800 ಚಿಪ್‌ ಸೆಟ್‌‌, ಕ್ವಾಡ್‌ಕೋರ್‌ 2.3 ಕ್ರೈಟ್‌ 400 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ

 

 

  ಕನೆಕ್ಟಿವಿಟಿ
  


ಕನೆಕ್ಟಿವಿಟಿ ವಿಚಾರದಲ್ಲಿ ಸಂಬಂಧಿಸಿದಂತೆ ವೈಫೈ 802.11 a/b/g/n,ಡ್ಯುಯಲ್‌ ಬ್ಯಾಂಡ್‌‌,ವೈಫೈ ಡೈರೆಕ್ಟ್‌‌‌ ಮತ್ತು ಡಿಎಲ್‌ಎನ್‌ಎ ,ಜೊತೆಗೆ ಬ್ಲೂಟೂತ್‌‌ 4.0, ಎರಡು ಕಡೆ ಎನ್‌ಎಫ್‌ಸಿ ಚಿಪ್‌ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot