ಭಾರತದ ಮಾರುಕಟ್ಟೆಗೆ ಗೂಗಲ್‌ ಟ್ಯಾಬ್ಲೆಟ್‌ ಬಿಡುಗಡೆ

Posted By:

ಅಮೆರಿಕದಲ್ಲಿ ವರ್ಷದ ಹಿಂದೆಯೇ ಬಿಡುಗಡೆಗೊಂಡಿದ್ದ ಗೂಗಲ್‌ ನೆಕ್ಸಸ್ 7 ಹೊಸ ಟ್ಯಾಬ್ಲೆಟ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದು ಲಭ್ಯವಿದ್ದು ಗ್ರಾಹಕರು ಮುಂಗಡ ಬುಕ್ಕಿಂಗ್‌ ಮಾಡಿ ಟ್ಯಾಬ್ಲೆಟ್‌ನ್ನು ಕಾಯ್ದಿರಿಸಬಹುದು.

ವಿದೇಶಗಳಲ್ಲಿ ಭಾರೀ ಜನಪ್ರಿಯತೆಯನ್ನು ಗಳಿಸಿರುವ ನೆಕ್ಸಾಸ್‌ ಬೆಲೆ 15,999 ರೂ ಆಗಿದ್ದು, ಏಪ್ರಿಲ್‌ 5ರಿಂದ ವಿತರಣೆ ಮಾಡುವುದಾಗಿ  ಗೂಗಲ್‌  ಪ್ಲೇ ಸ್ಟೋರ್‌ನಲ್ಲಿ ಹೇಳಿಕೊಂಡಿದೆ. ಸದ್ಯಕ್ಕೆ ಭಾರತದಲ್ಲಿ 16 ಜಿಬಿ ಮಾಡೆಲ್ ಮಾತ್ರವೇ ಬಿಡುಗಡೆಯಾಗುತ್ತಿದ್ದು. ಬುಕಿಂಗ್ ಮಾಡಿದ ಮೂರರಿಂದ ಏಳು ದಿನಗಳೊಳಗೆ ಸಾಧನವನ್ನು ತಲುಪಿಸಲಾಗುತ್ತದೆ ಎಂದು ಗೂಗಲ್‌ ತಿಳಿಸಿದೆ.

ಭಾರತದ ಮಾರುಕಟ್ಟೆಗೆ ಗೂಗಲ್‌ ಟ್ಯಾಬ್ಲೆಟ್‌ ಬಿಡುಗಡೆ

ನೆಕ್ಸಸ್ 7 ಟ್ಯಾಬ್ಲೆಟ್‌
ವಿಶೇಷತೆ:

ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
NVIDIA ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್
7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ ( 1280x800 ಪಿಕ್ಸೆಲ್ಸ್ ರೆಸೊಲ್ಯುಶನ್)
1 GB RAM
1.2 ಎಂಪಿ ವೀಡಿಯೋ ಚಾಟಿಂಗ್‌ಗಾಗಿ ಮುಂದುಗಡೆ ಕ್ಯಾಮೆರಾ
16 ಜಿಬಿ ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌ ಇದೆ, ಆದರೆ 3ಜಿ ಇಲ್ಲ
4325mAh ಬ್ಯಾಟರಿ

Please Wait while comments are loading...
Opinion Poll

Social Counting