ಗೂಗಲ್ ನೆಕ್ಸಸ್ 8 ಆಗಮನ ಮಾರುಕಟ್ಟೆಯಲ್ಲಿ ಸಂಚಲನ

Written By:

ಗೂಗಲ್‌ನ ಐಒ 2014 ರ ಈ ವರ್ಷದಲ್ಲಿ ಯಾವುದೇ ನೆಕ್ಸಸ್ ಸಂಬಂಧಿತ ಘೋಷಣೆಗಳಿಲ್ಲ, ಆದರೂ ಈ ಸಾಫ್ಟ್‌ವೇರ್ ದಿಗ್ಗಜ ಮುಂಬರುವ ದಿನಗಳಲ್ಲಿ ಏನಾದರೂ ವಿಶೇಷವಾದುದನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿದೆ.

ಎಂದಿನಂತೆ ಗೂಗಲ್ ಈ ಬಾರಿಯೂ ನೆಕ್ಸಸ್ ಶ್ರೇಣಿಯ ಡಿವೈಸ್‌ಗಳನ್ನು ಬಿಡುಗಡೆಗೊಳಿಸುವ ಸುದ್ದಿಗಳು ಅತ್ತಿತ್ತ ಸುಳಿಯುತ್ತಿವೆ. ಆದರೆ ಇದು ನೆಕ್ಸಸ್ 6 ಆಗಿರಬಹುದೇ ಅಥವಾ ಮುಂಬರಲಿರುವ 8 ಇಂಚಿನ ಟ್ಯಾಬ್ಲೆಟ್ಟೇ ಎಂಬುದನ್ನು ಕಾದು ನೋಡಬೇಕಾಗಿದೆ.

ಗೂಗಲ್ ನೆಕ್ಸಸ್ 8 ಆಗಮನಕ್ಕೆ ಇನ್ನು ಕ್ಷಣಗಣನೆ

ಇನ್ನೊಂದು ಸುದ್ದಿಯ ಪ್ರಕಾರ ಎಚ್‌ಟಿಸಿ ತಯಾರಿತ ನೆಕ್ಸಸ್ 8 ಟ್ಯಾಬ್ಲೆಟ್ ಅನ್ನು ಕೂಡ ಗೂಗಲ್ ಹೊರತರಬಹುದೆಂಬ ಕಾತರತೆ ಕೂಡ ಇದೆ. ಆದರೆ ಸುದ್ದಿಯ ಮೂಲಗಳು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ನೆಕ್ಸಸ್ ಕಾರ್ಯಕ್ರಮವು ಮುಂದುವರಿಯಲಿದ್ದು ಆಂಡ್ರಾಯ್ಡ್ ಬಳಕೆದಾರರು ಹೊಸ ನೆಕ್ಸಸ್ ಡಿವೈಸ್ ಅನ್ನು ನೋಡಬಹುದಾಗಿದ್ದು ಈ ವರ್ಷದ ನಂತರ ಗೂಗಲ್ ಆಂಡ್ರಾಯ್ಡ್ ಎಲ್ ಅನ್ನು ಬಿಡುಗಡೆಗೊಳಿಸಿದ ಮೇಲೆ ಬಳಕೆದಾರರು ಈ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದೆಂದು ರೀಡ್‌ವ್ರೈಟ್ ತಿಳಿಸಿದೆ.

ಗೂಗಲ್ ಎಚ್‌ಟಿಸಿಯೊಂದಿಗೆ ಸಂಯೋಜನೆಗೊಂಡು 8.9 ಇಂಚಿನ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ನಿರ್ಮಿಸಲಿದ್ದು ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್‌ ಮತ್ತು ಆಪಲ್‌ನ ಐಪ್ಯಾಡ್ ಮಿನಿ ರೆಟೀನಾದಂತಿದೆ. ಈ ಟ್ಯಾಬ್ಲೆಟ್ ರೆಸಲ್ಯೂಶನ್ 2048 x 1440 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದರಲ್ಲಿ Nvidia Tegra K1 64-ಬಿಟ್ ಪ್ರೊಸೆಸರ್ ಚಾಲನೆಗೊಳ್ಳಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot