ವಿಶ್ವದ ಅರ್ಧಪಾಲು ಇನ್ನು ಅಂತರ್ಜಾಲಕ್ಕೆ ಶರಣು!!!

By Shwetha
|

ಅಂತರ್ಜಾಲ ಇನ್ನಷ್ಟು ಪ್ರಾಬಲ್ಯವನ್ನು, ಜನ ಬಲವನ್ನು ಪಡೆದುಕೊಳ್ಳಲಿದೆ! ಇ ಮಾರ್ಕೆಟರ್ ಸಂಸ್ಥೆಯ ಹೊಸ ಅಂಕಿ ಅಂಶಗಳ ಪ್ರಕಾರ, 2015 ರಲ್ಲಿ ವೆಬ್ ಜಗತ್ತು 2.89 ಬಿಲಿಯನ್ ಬಳಕೆದಾರರನ್ನು ತಲುಪಲಿದೆ. ಅಂದರೆ ಪ್ರಪಂಚದ ಒಟ್ಟು ಜನಸಂಖ್ಯೆಯ 42.4% ವನ್ನು ಅಂತರ್ಜಾಲ ಮಾಯಾ ಜಗತ್ತು ಆವರಿಸಿಕೊಳ್ಳಲಿದೆ .

ಅಂತರ್ಜಾಲದ ಬಳಕೆಯು ಅಧಿಕವಾಗುತ್ತಿದ್ದು 2015 ರಲ್ಲಿ ಈ ಏರಿಕೆ ಗಮನಾರ್ಹ ಪ್ರಗತಿಯನ್ನು ಕಂಡುಕೊಳ್ಳುವುದು ನಿಚ್ಚಳವಾಗಿದೆ. ಅಂದರೆ 2018 ರ ವೇಳೆಗೆ ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಅಂತರ್ಜಾಲದಲ್ಲಿ ವ್ಯಸ್ಥರಾಗುವುದರಲ್ಲಿ ಸಂದೇಹವೇ ಇಲ್ಲ. ಭಾರತ ಮತ್ತು ಇಂಡೋನೇಷ್ಯಾದಲ್ಲಿ ಹೆಚ್ಚಿನ ಜನರು ಬಳಸುತ್ತಿರುವ ಕಡಿಮೆ ಕ್ರಯದ ಮೊಬೈಲ್ ಫೋನ್‌ಗಳು ಹಾಗೂ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸುತ್ತಿರುವ ಅಂತರ್ಜಾಲ ವ್ಯವಸ್ಥೆಯಾಗಿದೆ.

ಅಂತರ್ಜಾಲಕ್ಕೆ ಶರಣಾಗಲಿರುವ ವಿಶ್ವ!!!

ಇದನ್ನೂ ಓದಿ: ಆಂಡ್ರಾಯ್ಡ್ ಅಪ್ಲಿಕೇಶನ್ ಐಫೋನ್‌ಗಿಂತಲೂ ಹಿತಕಾರಿ

ಹೆಚ್ಚಿನ ಜನರು ಕಡಿಮೆ ದರದಲ್ಲಿ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಅಂತರ್ಜಾಲ ವ್ಯವಸ್ಥೆಯನ್ನು ಬಳಸಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಕೊಳ್ಳುತ್ತಿದ್ದಾರೆ. ಫೋನ್‌ಗಳು ಈ ದಿನಗಳಲ್ಲಿ ಅಗ್ಗವಾಗಿದ್ದು ಹೆಚ್ಚಿನ ಜನರು ಇದರ ಬಳಕೆಯನ್ನು ಅತ್ಯಧಿಕ ಪ್ರಮಾಣದಲ್ಲಿ ಮಾಡುತ್ತಿದ್ದಾರೆ.

ಇನ್ನು ಟೆಕ್ ಕಂಪೆನಿಗಳು ಕೂಡ ಜನರಿಗೆ ಅಂತರ್ಜಾಲಕ್ಕೆ ಸನಿಹವಾಗುವ ಕೆಲಸವನ್ನು ಮಾಡುತ್ತಿವೆ. ಫೇಸ್‌ಬುಕ್ ಸ್ಥಾಪಕರಾದ ಮಾರ್ಕ್ ಜೂಕರ್‌ಬರ್ಗ್ ಇತರ ಟೆಕ್ ಕಂಪೆನಿಗಳ ಸಹಾಯವನ್ನು ಪಡೆದುಕೊಂಡು ಜನರಿಗೆ ಅಂತರ್ಜಾಲದ ಮಹತ್ವವನ್ನು ತಿಳಿಯಪಡಿಸುವ ಸಂಸ್ಥೆಯನ್ನು ನಿರ್ಮಿಸಿದ್ದಾರೆ.

Best Mobiles in India

English summary
This article tells about According to new data from market research firm eMarketer, the web will reach 2.89 billion users in 2015, or what equates to 42.4% of the world's population.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X