ನಿಮ್ಮ ವಿಂಡೋಸ್ ಪಿಸಿಯಿಂದ ಫೈಲ್ ಹೈಡ್ ಮಾಡಬೇಕೇ? ಹೀಗೆ ಮಾಡಿ

By Tejaswini P G
|

ನಾವು ನಮ್ಮ ಪರಿವಾರದವರೊಂದಿಗೂ ಹಂಚಿಕೊಳ್ಳದ ಕೆಲವು ರಹಸ್ಯಗಳಿರುತ್ತದೆ. ಕುಟುಂಬದ ಮಧ್ಯೆಯೂ ಪ್ರೈವೆಸಿ ಬೇಕಾಗುತ್ತದೆ. ನಾವು ಒಂದು ಕಂಪ್ಯೂಟರ್ ಅನ್ನು ನಮ್ಮ ಪರಿವಾರದವರೊಂದಿಗೆ ಹಂಚಿಕೊಳ್ಳುತ್ತಿದ್ದರೆ ಕೆಲವು ವೈಯುಕ್ತಿಕ ಫೈಲ್ಗಳನ್ನು ಇತರರಿಂದ ಬಚ್ಚಿಡಲು ಬಯಸುತ್ತೇವೆ.

ನಿಮ್ಮ ವಿಂಡೋಸ್ ಪಿಸಿಯಿಂದ ಫೈಲ್ ಹೈಡ್ ಮಾಡಬೇಕೇ? ಹೀಗೆ ಮಾಡಿ

ಕೆಲವು ರಹಸ್ಯ ಫೈಲ್ಗಳು ಅಥವಾ ವೀಡಿಯೋಗಳಿರಬಹುದು ಅಥವ ಇತರರು ಯಾವುದೋ ಮುಖ್ಯ ಫೈಲ್ಗಳನ್ನು ಅಕಸ್ಮಾತ್ ಆಗಿ ಡಿಲೀಟ್ ಮಾಡುವುದನ್ನು ತಪ್ಪಿಸುವದಕ್ಕಾಗಿ ಈ ರೀತಿ ಮಾಡಬಹುದು. ಈ ಲೇಖನದಲ್ಲಿ ಕಂಪ್ಯೂಟರ್ನಲ್ಲಿ ಫೈಲ್ಗಳನ್ನು ಹೈಡ್ ಮಾಡುವ ವಿವಿಧ ರೀತಿಗಳನ್ನು ನಿಮಗಾಗಿ ಸಂಪಾದಿಸಿದ್ದೇವೆ.

ಫೈಲ್ ಎಕ್ಸ್ಪ್ಲೋರರ್ ಬಳಸಿ ಫೈಲ್ಸ್ ಮತ್ತು ಫೋಲ್ಡರ್ ಹೈಡ್ ಮಾಡುವುದು

ಫೈಲ್ ಎಕ್ಸ್ಪ್ಲೋರರ್ ಬಳಸಿ ಫೈಲ್ಸ್ ಮತ್ತು ಫೋಲ್ಡರ್ ಹೈಡ್ ಮಾಡುವುದು

ಹಂತ 1: ಫೈಲ್ ಎಕ್ಸ್ಪ್ಲೋರರ್ ತೆರೆಯಿರಿ

ಹಂತ 2: ನೀವು ಅಡಗಿಸಲು ಬಯಸುವ ಫೈಲ್ ಅಥವಾ ಫೋಲ್ಡರ್ ಗೆ ಹೋಗಿ

ಹಂತ 3: ಈಗ ಅದರ ಮೇಲೆ ರೈಟ್ ಕ್ಲಿಕ್ ಮಾಡಿ "ಪ್ರಾಪರ್ಟೀಸ್" ಮೇಲೆ ಕ್ಲಿಕ್ ಮಾಡಿ

ಹಂತ 4: ನಂತರ ಜನರಲ್ ಟ್ಯಾಬ್ ನಲ್ಲಿ , ಆಟ್ರಿಬ್ಯೂಟ್ಸ್ ನಲ್ಲಿ "ಹಿಡನ್" ಆಪ್ಶನ್ ಆಯ್ಕೆ ಮಾಡಿ

ಹಂತ 5: "ಅಪ್ಲೈ" ಕ್ಲಿಕ್ ಮಾಡಿ

 ಕಮಾಂಡ್ ಪ್ರಾಂಪ್ಟ್ ಬಳಸಿ ಫೈಲ್ಸ್ ಹೈಡ್ ಮಾಡಿ

ಕಮಾಂಡ್ ಪ್ರಾಂಪ್ಟ್ ಬಳಸಿ ಫೈಲ್ಸ್ ಹೈಡ್ ಮಾಡಿ

ಹಂತ 1: "ಸ್ಟಾರ್ಟ್" ಕ್ಲಿಕ್ ಮಾಡಿ ಕಮಾಂಡ್ ಪ್ರಾಂಪ್ಟ್ ತೆರೆಯಿರಿ

ಹಂತ 2: ನೀವು ಅಡಗಿಸಲು ಬಯಸುವು ಫೈಲ್ ಅಥವಾ ಫೋಲ್ಡರ್ ಗೆ ನ್ಯಾವಿಗೇಟ್ ಮಾಡಲು ಅಗತ್ಯವಾದ ಕಮಾಂಡ್ ಟೈಪ್ ಮಾಡಿ ಎಂಟರ್ ಒತ್ತರಿ

ಉದಾಹರಣಗೆ, "cd C:UsersadminDesktopFiles"

ಇಲ್ಲಿ cd ನಂತರ ಇರುವ ಪಾತ್ ಬದಲಿಗೆ ನಿಮ್ಮ ಫೈಲ್ ಅಥವಾ ಫೋಲ್ಡರ್ ನ ಪಾತ್ ಬಳಸಿ

ಹಂತ 3: ಈಗ ಫೈಲ್ ಅಥವಾ ಫೋಲ್ಡರ್ ಹೈಡ್ ಮಾಡಲು ಈ ಕೆಳಗಿನ ಕಮಾಂಡ್ ಟೈಪ್ ಮಾಡಿ ಎಂಟರ್ ಒತ್ತಿರಿ

Attrib +h 'abc'

ಈ ಮೇಲಿನ ಕಮಾಂಡ್ ನಲ್ಲಿ abc ಬದಲಿಗೆ ನಿಮ್ಮ ಫೈಲ್ ಅಥವಾ ಫೋಲ್ಡರ್ ನ ಹೆಸರು ಬಳಸಿ

ಶಿಯೋಮಿಯ ಮತ್ತೊಂದು ಬಜೆಟ್ ಸೂಪರ್ ಫೋನ್ ಲಾಂಚ್: ಬಿಡುಗಡೆಯಾದ ಟೀಸರ್...!ಶಿಯೋಮಿಯ ಮತ್ತೊಂದು ಬಜೆಟ್ ಸೂಪರ್ ಫೋನ್ ಲಾಂಚ್: ಬಿಡುಗಡೆಯಾದ ಟೀಸರ್...!

ಡಿಸ್ಕ್ ಮ್ಯಾನೇಜ್ಮೆಂಟ್ ಯುಟಿಲಿಟಿ ಬಳಸಿ ಫೈಲ್ ಹೈಡ್ ಮಾಡಿ

ಡಿಸ್ಕ್ ಮ್ಯಾನೇಜ್ಮೆಂಟ್ ಯುಟಿಲಿಟಿ ಬಳಸಿ ಫೈಲ್ ಹೈಡ್ ಮಾಡಿ

ಹಂತ 1: ಮೊದಲಿಗೆ ವಿಂಡೋಸ್ ಕೀ + R ಒತ್ತಿ ರನ್ ಡೈಲಾಗ್ ಬಾಕ್ಸ್ ತೆರೆಯಿರಿ. ನಂತರ ಓಪನ್ ಬಾಕ್ಸ್ ನಲ್ಲಿ diskmgmt.msc ಎಂದು ಟೈಪ್ ಮಾಡಿ ಓಕೆ ಎಂದು ಕ್ಲಿಕ್ ಮಾಡಿ

ಹಂತ 2: ಈಗ ನೀವು ಅಡಗಿಸಲು ಬಯಸುವ ಡ್ರೈವ್ ಮೇಲೆ ರೈಟ್ ಕ್ಲಿಕ್ ಮಾಡಿ, "ಚೇಂಜ್ ಡ್ರೈವ್ ಲೆಟರ್ ಆಂಡ್ ಪಾತ್ಸ್" ಆಯ್ಕೆ ಮಾಡಿ

ಹಂತ 3: ಈಗ ಡ್ರೈವ್ ಲೆಟರ್ ಅನ್ನು ಆಯ್ಕೆ ಮಾಡಿ, ರಿಮೂವ್ ಮೇಲೆ ಕ್ಲಿಕ್ ಮಾಡಿ ಓಕೆ ಒತ್ತಿರಿ

ಹಂತ 4: ವಾರ್ನಿಂಗ್ ಡೈಲಾಗ್ ಬಾಕ್ಸ್ ಬಂದರೆ, ಡ್ರೈವ್ ಲೆಟರ್ ಅನ್ನು ತೆಗೆಯಲು "ಯೆಸ್" ಕ್ಲಿಕ್ ಮಾಡಿ

 ಥರ್ಡ್ ಪಾರ್ಟಿ ಸಾಫ್ಟ್ವೇರ್ ಬಳಸಿ ಫೈಲ್ ಹೈಡ್ ಮಾಡಿ

ಥರ್ಡ್ ಪಾರ್ಟಿ ಸಾಫ್ಟ್ವೇರ್ ಬಳಸಿ ಫೈಲ್ ಹೈಡ್ ಮಾಡಿ

ಈ ಮೇಲಿನ ರೀತಿಗಳು ನಿಮಗೆ ಸಮಾಧಾನಕರವಾಗಿಲ್ಲ ಎಂದಾದರೆ ಫೈಲ್ ಹೈಡ್ ಮಾಡಲು ಥರ್ಡ್ ಪಾರ್ಟಿ ಸಾಫ್ಟ್ವೇರ್ ಬಳಸಬಹುದು. ಫೈಲ್ಫ್ರೆಂಡ್, ಸೀಕ್ರೆಟ್ ಡಿಸ್ಕ್, ಈಸಿ ಫೈಲ್ ಲಾಕರ್ ಮೊದಲಾದ ಹಲವು ಸಾಫ್ಟ್ವೇರ್ ಗಳು ಇದೇ ಕಾರಣಕ್ಕಾಗಿ ಲಭ್ಯವಿದ್ದು ನಿಮಗಿಷ್ಟವಾದ ಸಾಫ್ಟ್ವೇರ್ ಅನ್ನು ಆಯ್ಕೆ ಮಾಡಬಹುದು.

Best Mobiles in India

Read more about:
English summary
We all need privacy even in the family! If we are sharing a desktop, we may have some personal files that we want to hide from others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X