Home
ಕಂಪ್ಯೂಟರ್‌‌

ಆಂಡ್ರಾಯ್ಡ್ ಓರಿಯೋದಲ್ಲಿ ವೈಫೈ ನೆಟ್ವರ್ಕ್ ವೇಗವನ್ನು ತಿಳಿಯುವುದು ಹೇಗೆ?

ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್ನಲ್ಲಿ ತೆರೆದ ವೈಫೈ ನೆಟ್ವರ್ಕ್ಗಳ ವೇಗ ತಿಳಿಸುವ ಲೇಬಲ್ ಗಳನ್ನು ತೋರಿಸುವ ಫೀಚರ್ ನೀಡಲಾಗಿದ್ದು, ಇದರ ಕುರಿತು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

By Tejaswini P G

ಗೂಗಲ್ ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್ ನಲ್ಲಿ ಉತ್ತಮವಾದ ಮತ್ತು ಉಪಯುಕ್ತ ಫೀಚರ್ ಒಂದನ್ನು ನೀಡುತ್ತಿದ್ದು, ಈಗ ಸಮೀಪದಲ್ಲಿ ಲಭ್ಯವಿರುವ ತೆರೆದ ವೈಫೈ ನೆಟ್ವರ್ಕ್ಗಳ ವೇಗವನ್ನು ಅದಕ್ಕೆ ಕನೆಕ್ಟ್ ಮಾಡುವ ಮೊದಲೇ ತಿಳಿಯಬಹುದಾಗಿದೆ. ಈ ಅಪ್ಡೇಟ್ನೊಂದಿಗೆ ವೈಫೈ ಸೆಟ್ಟಿಂಗ್ಸ್ ಈ 4 ಸ್ಪೀಡ್ ಲೇಬಲ್ಗಳನ್ನು ತೋರಿಸಲಿದೆ : ವೆರಿ ಫಾಸ್ಟ್, ಫಾಸ್ಟ್, ಓಕೆ, ಸ್ಲೋ. ಪಾಸ್ವರ್ಡ್ ಕೇಳುವ ಖಾಸಗಿ ವೈಫೈ ಗಳ ನೆಟ್ವರ್ಕ್ಗಳ ವೇಗ ತೋರಿಸದಿದ್ದರೂ ಅದರ ಸಿಗ್ನಲ್ ನ ಬಲ ಅಥವಾ ಶಕ್ತಿ ಎಷ್ಟಿದೆಯೆಂದು ಸೂಚಿಸಲಾಗುತ್ತದೆ.

ಆಂಡ್ರಾಯ್ಡ್ ಓರಿಯೋದಲ್ಲಿ ವೈಫೈ ನೆಟ್ವರ್ಕ್ ವೇಗವನ್ನು ತಿಳಿಯುವುದು ಹೇಗೆ?

ಹತ್ತಿರದಲ್ಲಿ ಲಭ್ಯವಿರುವ ತೆರೆದ ವೈಫೈ ನೆಟ್ವರ್ಕ್ಗಳ ವೇಗ ತಿಳಿಯಲು 'ಯುಸೇಜ್ & ಡಯಾಗ್ನಿಸ್ಟಿಕ್ಸ್ ಶೇರಿಂಗ್' ಫೀಚರ್ ಮೇಲೆ ಅವಲಂಬಿತವಾಗಿದ್ದು ಜನರಿಂದ ಕಲೆಹಾಕಿದ ಮಾಹಿತಿಯಿಂದ ಇದನ್ನು ತಿಳಿಯಲಾಗುತ್ತದೆ. ನೀವು ನಿಮ್ಮ ಫೋನ್ ನಿಂದ ಈ ನೆಟ್ವರ್ಕ್ ಗೆ ಕನೆಕ್ಟ್ ಮಾಡಿದಾಗ , ಈ ನೆಟ್ವರ್ಕ್ ನ ವೇಗ ಎಷ್ಟಿದೆಯೆಂಬ ಮಾಹಿತಿಯನ್ನು ಗೂಗಲ್ ನೊಂದಿಗೆ ಹಂಚಿಕೊಳ್ಳಲಾಗುತ್ತದೆ. ಹಾಗಾಗಿ ಈ ನೆಟ್ವರ್ಕ್ ರೇಟಿಂಗ್ ಫೀಚರ್ ಆ ನೆಟ್ವರ್ಕ್ ನ ವೇಗ ಹೇಗಿದೆಯೆಂಬುದನ್ನು ಬಹುತೇಕ ಖಚಿತವಾಗಿ ತಿಳಿಸಬಲ್ಲದು. ಈ ಲೇಖನದಲ್ಲಿ ಆಂಡ್ರಾಯ್ಡ್ ಓರಿಯೋ ಮೂಲಕ ನಿರ್ದಿಷ್ಟ ವೈಫೈ ನೆಟ್ವರ್ಕ್ ವೇಗವಾಗಿದೆಯೇ ಇಲ್ಲವೇ ಎಂದು ತಿಳಿಯುವ ಬಗೆಯನ್ನು ವಿವರಿಸಿದ್ದೇವೆ.

ಹಂತ 1: ನಿಮ್ಮ ಸಾಧನದ 'ಸೆಟ್ಟಿಂಗ್ಸ್' ಆಪ್ ತೆರೆಯಿರಿ

ಹಂತ 2: 'ನೆಟ್ವರ್ಕ್ & ಇಂಟರ್ನೆಟ್' ಕ್ಲಿಕ್ ಮಾಡಿ-> ವೈಫೈ -> ಟಾಗಲ್ ಬಟನ್ ಅನ್ನು ಆನ್ ಮಾಡಿ

ಹಂತ 3: ಈಗ ಮೆನುವಿನಲ್ಲಿ ಲಭ್ಯವಿರುವ ವೈಫೈ ಗಳ ಪಟ್ಟಿಯನ್ನು ಕಾಣಬಹುದು

ಹಂತ 4: ಪಟ್ಟಿಯಲ್ಲಿರುವ ನೆಟ್ವರ್ಕ್ ಗಳ ಪೈಕಿ ನಿಮ್ಮ ಅಗತ್ಯಗಳಿಗೆ ಸೂಕ್ತವೆನಿಸುವ ವೈಫೈ ನೆಟ್ವರ್ಕ್ ಅನ್ನು ಆಯ್ದುಕೊಳ್ಳಿ

ಹಂತ 5: ಸಾಮಾನ್ಯವಾಗಿ ಸಿಗ್ನಲ್ ನ ಬಲವನ್ನು ಒಂದು ಐಕಾನ್ ನ ಮೂಲಕ ತೋರಿಸಲಾಗುವುದು. ಉದಾಹರಣೆಗೆ, ಐಕಾನ್ ತುಂಬಿದಂತೆ ಇದ್ದರೆ ಸಿಗ್ನಲ್ ನ ಶಕ್ತಿ ಉತ್ತಮವಾಗಿದೆ ಎಂದು ಅರ್ಥ.

ನಾವು ಈಗಾಗಲೇ ತಿಳಿಸಿದಂತೆ ಸಿಗ್ನಲ್ ನ ಶಕ್ತಿಗೆ ಅನುಸಾರವಾಗಿ ವೈಫೈ ವೇಗವನ್ನು ನಾಲ್ಕು ವಿಧವಾಗಿ ತೋರಿಸಲಾಗುವುದು.

ಸ್ಲೋ : ನೀವು ಈ-ಮೇಲ್ ಮತ್ತು ಟೆಕ್ಸ್ಟ್ ಮೆಸೇಜ್ಗಳನ್ನು ಕಳುಹಿಸಬಹುದು. ಇಮೇಜ್ಗಳು ನಿಧಾನವಾಗಿ ಬರುತ್ತದೆ

ಓಕೆ : ನೀವು ವೆಬ್ ಪೇಜ್ಗಳನ್ನು ಓದಬಹುದು, ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು, ಸಂಗೀತವನ್ನು ಸ್ಟ್ರೀಮ್ ಮಾಡಬಹುದು ಮತ್ತು ಸ್ಟ್ಯಾಂಡರ್ಡ್-ಡೆಫಿನೇಶನ್ (SD) ವೀಡಿಯೋಗಳನ್ನು ನೋಡಬಹುದು.

ಫಾಸ್ಟ್: ನೀವು ಹೆಚ್ಚಿನ ಹೈ-ಡೆಫಿನೇಶನ್ (SD) ವೀಡಿಯೋಗಳನ್ನು ಸ್ಟ್ರೀಮ್ ಮಾಡಬಹುದು ಮತ್ತು ವೀಡಿಯೋ ಕಾಲ್ ಗಳನ್ನು ಮಾಡಬಹುದು.

ವೆರಿ ಫಾಸ್ಟ್ :ನೀವು ತುಂಬ ಉತ್ತಮ ಗುಣಮಟ್ಟದ ವೀಡಿಯೋಗಳನ್ನು ಸ್ಟ್ರೀಮ್ ಮಾಡಬಹುದು

ನೀವು ನೆಟ್ವರ್ಕ್ ನ ವೇಗವನ್ನು ನೋಡಲು ಬಯಸುವುದಿಲ್ಲವೆಂದಾದಲ್ಲಿ ನಿಮ್ಮ ಸಾಧನದ ಸೆಟ್ಟಿಂಗ್ಸ್ ತೆರೆಯಿರಿ. ಸೆಟ್ಟಿಂಗ್ಸ್-> ನೆಟ್ವರ್ಕ್ & ಇಂಟರ್ನೆಟ್ -> ವೈಫೈ -> ವೈಫೈ ಪ್ರಿಫರೆನ್ಸಸ್ -> ಎಡ್ವಾನ್ಸ್ಡ್ -> ನೆಟ್ವರ್ಕ್ ರೇಟಿಂಗ್ ಪ್ರೊವೈಡರ್ -> ನನ್

ಆಂಡ್ರಾಯ್ಡ್ 8.1 ಓರಿಯೋ ಅಪ್ಡೇಟ್ ಕೆಲವೇ ಮೊಬೈಲ್ಗಳಿಗೆ ಲಭ್ಯವಾಗಿದ್ದು ಶೀಘ್ರವೇ ಹೊರಬರಲಿದೆ.

Best Mobiles in India

English summary
How to check if a Wi-Fi network is fast or slow with Android 8.1 Oreo. to know more this visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+