Subscribe to Gizbot

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ಅನ್‌ಫ್ರೆಂಡ್ ಮಾಡಿದವರು ಯಾರು?

Written By:

ಫೇಸ್‌ಬುಕ್‌ನಲ್ಲಿ ಯಾರಾದರೂ ನಿಮ್ಮನ್ನು ಅನ್‌ಫ್ರೆಂಡ್ ಮಾಡಿದ್ದಾರೆ ಎಂಬುದನ್ನು ನೋಡಬಯಸುತ್ತೀರಾ? ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಅವರಿಗಾಗಿ ಹುಡುಕಿದಾಗ ಕೂಡ ಅವರು ನಿಮಗೆ ಸಿಗಲಾರರು. ಯಾರು ಕಾಣೆಯಾಗಿದ್ದಾರೆ ಎಂಬುದನ್ನು ಹುಡುಕುವುದು ತುಸು ಕಷ್ಟದ ಕೆಲಸವಾಗಿದೆ.

ಫೈರ್‌ಫಾಕ್ಸ್, ಗೂಗಲ್ ಕ್ರೋಮ್, ಒಪೇರಾ ಮತ್ತು ಸಫಾರಿಯಲ್ಲಿ ಕಾರ್ಯಗತವಾಗುವ ಸರಳ ಸಲಹೆಗಳೊಂದಿಗೆ ನಾವು ಇಂದಿನ ಲೇಖನದಲ್ಲಿ ಬಂದಿದ್ದೇವೆ. ಫೇಸ್‌ಬುಕ್‌ನಲ್ಲಿ ಯಾರಾದರೂ ನಿಮ್ಮನ್ನು ಅನ್‌ಫ್ರೆಂಡ್ ಮಾಡಿದ್ದಾರೆ ಎಂಬುದನ್ನು ನೋಡಲು ಇದು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮನ್ನು ಆಪ್ತರು ಎಂದು ಯಾರು ಪರಿಗಣಿಸಿದ್ದಾರೆ, ನೀವು ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಅನ್ನು ಕಳುಹಿಸಿ ಕೂಡ ಅವರು ನಿಮ್ಮನ್ನು ಸ್ವೀಕರಿಸಿಲ್ಲದಿದ್ದಲ್ಲಿ ಇದು ನಿಮಗೆ ಮಾಹಿತಿಯನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅನ್‌ಫ್ರೆಂಡ್ ಫೈಂಡರ್

#1

ಅನ್‌ಫ್ರೆಂಡ್ ಫೈಂಡರ್ ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಅನ್‌ಫ್ರೆಂಡ್ ಮಾಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಕ್ರೋಮ್ ಆವೃತ್ತಿಯನ್ನು ನಾವಿಲ್ಲಿ ಬಳಸುತ್ತಿದ್ದು, ಇತರ ಬ್ರೌಸರ್‌ಗಳಿಗೂ ಇದು ಲಭ್ಯವಾಗಿದೆ.

ಸೆಟ್ಟಿಂಗ್ಸ್

#2

ಒಮ್ಮೆ ಈ ಟೂಲ್ ಅನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡ ನಂತರ, ಯಾವ ರೀತಿಯ ಎಚ್ಚರಿಕೆಗಳನ್ನು ನೋಡಲು ನೀವು ಬಯಸುತ್ತೀರಿ ಎಂಬುದನ್ನು ಸೆಟ್ಟಿಂಗ್ಸ್‌ನಲ್ಲಿ ಬದಲಾಯಿಸುವ ಆಯ್ಕೆ ನಿಮಗಿರುತ್ತದೆ.

ಮೆನು

#3

ನಿಮ್ಮ ಹೋಮ್‌ಪೇಜ್‌ನಲ್ಲಿ "ಫೇವರೇಟ್ಸ್" ಅಡಿಯಲ್ಲಿ ನೀವು ಹೊಸ ಐಟಮ್ ಅನ್ನು ಕಾಣಬಹುದು. "ಅನ್‌ಫ್ರೆಂಡ್ಸ್" ಇಲ್ಲಿ ನೀವು ಪರಿಕರವನ್ನು ಪ್ರವೇಶಿಸಬಹುದು.

ಎಚ್ಚರಿಕೆಗಳು (ಅಲರ್ಟ್ಸ್)

#4

ಫೇಸ್‌ಬುಕ್‌ನಲ್ಲಿ ಯಾರಾದರೂ ನಿಮ್ಮನ್ನು ಅನ್‌ಫ್ರೆಂಡ್ ಮಾಡಿದ್ದಾರೆ ಎಂದಾದಲ್ಲಿ, ನಿಮಗೆ ಎಚ್ಚರಿಕೆಯನ್ನು ಕಳುಹಿಸಲಾಗುತ್ತದೆ. ನಿಮ್ಮ ಹೋಮ್‌ಪೇಜ್‌ನಲ್ಲಿ "ಅನ್‌ಫ್ರೆಂಡ್ಸ್" ಟ್ಯಾಬ್ ಮೂಲಕ ಮಾಹಿತಿಯನ್ನು ನಿಮಗೆ ಪ್ರವೇಶಿಸಬಹುದು.

ಪೆಂಡಿಂಗ್ ರಿಕ್ವೆಸ್ಟ್ಸ್

#5

ಜನರು ನಿಮ್ಮನ್ನು ಅನ್‌ಫ್ರೆಂಡ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸುತ್ತಾ, ಅಪ್ಲಿಕೇಶನ್ ಬಾಕಿಯಾಗಿರುವ ಸ್ನೇಹಿತರ ಕೋರಿಕೆಯ ಮೇಲೆ ನಿಗಾ ಇರಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How to See When Someone Unfriends You on Facebook... Using one tool we can easily find out who is unfriend us. And it is sending notifications also.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot