ಈ ಟೆಕ್ ಕಂಪನಿಗಳ ಹೆಸರಿನ ಹಿಂದಿನ ರಹಸ್ಯವೇನು ?

By Varun
|
ಈ ಟೆಕ್ ಕಂಪನಿಗಳ ಹೆಸರಿನ ಹಿಂದಿನ ರಹಸ್ಯವೇನು ?

ನಮ್ಮಲ್ಲಿ ಮಗುವಿಗೆ ಹೆಸರಿಡುವ ಮುಂಚೆ ಪುರೋಹಿತರನ್ನು ಕೇಳಿ, ಜನ್ಮ ನಕ್ಷತ್ರ, ತಿಥಿ, ಮಾಸ, ಪಕ್ಷ, ಇದನ್ನೆಲ್ಲಾ ಲೆಕ್ಕಕ್ಕೆ ಇಟ್ಟುಕೊಂಡು ಡಿಸೈಡ್ ಮಾಡುತ್ತಾರೆ.

ಆದರೆ ಕಂಪನಿಗಳಿಗೆ ಹೆಸರಿಡುವ ವಿಷಯಕ್ಕೆ ಬಂದರೆ ಕಂಪನಿಯನ್ನು ಯಾರು ಶುರು ಮಾಡುತ್ತಾನೋ/ರೋ, ಅವರು ತಮ್ಮ ಹೆಸರೋ ಇಲ್ಲವೆ ಮಗಳ/ಮಗನ ಹೆಸರು, ಹೆಂಡತಿ ಹೆಸರು, ದೇವರ ಹೆಸರು ಇಡುತ್ತಾರೆ. ಈ ರೀತಿ ಪ್ರತಿಯೊಂದು ಕಂಪನಿಯ ಹೆಸರಿನ ಹಿಂದೆ ಒಂದು ಅರ್ಥ ಇಲ್ಲವೆ ಕಥೆ ಇರುತ್ತದೆ.

ಜಗತ್ತಿನ ಪ್ರಮುಖ ಕಂಪನಿಗಳ ಹೆಸರುಗಳು ಹೇಗೆ ಹುಟ್ಟಿಕೊಂಡವು ಎಂದು ತಿಳಿದರೆ ನಿಮಗೇ ಆಶ್ಚರ್ಯವಾಗುತ್ತದೆ. ಹಾಗಿದೆ ಒಂದೊಂದು ಕಂಪನಿಯ ಹೆಸರಿನ ಹಿಂದಿನ ಕಥೆ.

1) ಆಪಲ್ - ಜಗತ್ತಿನ ನಂ.1 ಕಂಪನಿ ಎಂದು ಖ್ಯಾತಿ ಪಡೆದಿರುವ ಆಪಲ್ ಕಂಪ್ಯೂಟರ್ಸ್ ಹೆಸರು ಹೇಗೆ ಬಂತು ಗೊತ್ತಾ? ಆಪಲ್ ನ ಸ್ಥಾಪಕ ಸ್ಟೀವ್ ಜಾಬ್ಸ್ ಕಂಪನಿ ಶುರುಮಾಡಿದ ಮೇಲೆ ಹೆಸರನ್ನು ನೋಂದಾಯಿಸಲು 3 ತಿಂಗಳು ತಡವಾಯಿತಂತೆ. ಹಾಗಾಗಿ ತನ್ನ ನೌಕರರನ್ನು ಒಂದು ದಿನ ಕರೆದು ತಮ್ಮ ಕಂಪನಿಗೆ ಆ ದಿನ 5 ಗಂಟೆಯೊಳಗೆ ಹೆಸರು ಸೂಚಿಸದಿದ್ದರೆ ತನಗೆ ಇಷ್ಟವಾದ ಹಣ್ಣಾದ ಸೇಬಿನ ಹೆಸರನ್ನೇ ಇಡುವುದಾಗಿ ಎಚ್ಚರಿಸಿದನಂತೆ. ಮುಂದೆ ಏನಾಯಿತು ಎಂದು ನಿಮಗೆ ಗೊತ್ತೇ ಇದೆ.

2) ಸಿಸ್ಕೋ ಸಿಸ್ಟೆಮ್ಸ್ (CISCO) - ತುಂಬಾ ಜನರು ಅಂದುಕೊಂಡಿರುವಂತೆ CISCO ಯಾವುದೋ ಹೆಸರಿನ ಸಂಕ್ಷಿಪ್ತ ರೂಪ ಅಲ್ಲ. ಆ ಕಂಪನಿ ಶುರುವಾಗಿದ್ದು ಸ್ಯಾನ್ ಫ್ಯಾನ್ಸಿಸ್ಕೋ ದಲ್ಲಿ. ಹಾಗಾಗಿ ಅದರ ಪದಗಳನ್ನ ಸೇರಿಸಿ CISCO ಎಂದು ಹೆಸರಿಡಲಾಯಿತಂತೆ.

3) ಸೋನಿ - ಸೋನಿ ಎಂದರೆ ಲಾಟಿನ್ ಭಾಷೆಯಲ್ಲಿ ಸೌಂಡ್ ಎಂದರ್ಥ.ಸೋನಿ ಕಂಪನಿಗೆ ಹಾಗಾಗಿ ಈ ಹೆಸರು ಬಂತಂತೆ.

4) ಒರಾಕಲ್ (ORACLE) - ಒರಾಕಲ್ ಕಂಪನಿಯ ಸ್ಥಾಪಕ ಲ್ಯಾರಿ ಎಲಿಸನ್ ಹಾಗು ಬಾಬ್ ಓಟ್ಸ್, ಐಬಿಎಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಮೆರಿಕಾದ CIA ದ ರಹಸ್ಯ ಪ್ರಾಜೆಕ್ಟ್ ಗೆ ಕೋಡ್ ಬರೆಯಬೇಕಾಗಿ ಬಂತಂತೆ. ಆ ಪ್ರಾಜೆಕ್ಟ್ ನ ಸಂಕೇತ ನಾಮ oracle ಆಗಿದ್ದು, ಅದಕ್ಕೆ ಕೆಲಸ ಮಾಡಿದ್ದರಿಂದ oracle ಹೆಸರನ್ನೇ ಮುಂದೆ ತಾವು ಶುರು ಮಾಡಿದ ಕಂಪನಿಗೆ ಇಟ್ಟರಂತೆ.

5) ಮೋಟೊರೋಲಾ - ಈ ಕಂಪನಿಯ ಸ್ಥಾಪಕ ಇದನ್ನು ಮೊದಲು ಶುರು ಮಾಡಿದ್ದು ಕಾರುಗಳಿಗೆ ರೇಡಿಯೋ ಉತ್ಪಾದನೆ ಮಾಡಲಂತೆ. ಆ ಕಾಲದಲ್ಲಿ ಖ್ಯಾತವಾಗಿದ್ದ ರೇಡಿಯೋ ಕಂಪನಿ ವಿಕ್ಟೋರೋಲಾ ಹೆಸರಿಂದ ಸ್ಪೂರ್ತಿ ಪಡೆದು ಮೋಟೊರೋಲಾ ಎಂದು ಹೆಸರಿಟ್ಟನಂತೆ.

6) ಯಾಹೂ (YAHOO) - "ಗಲೀವರನ ಸಾಹಸಗಳು" ಪುಸ್ತಕದಲ್ಲಿ ಬರುವ ಈ ಪದದ ಅರ್ಥ- ಅತಿ ಮಾನವ ಅಂತೆ. ತಮ್ಮನ್ನು ತಾವು ಅದೇ ರೀತಿ ಅಂದುಕೊಂಡಿದ್ದರಿಂದ ಯಾಹೂ ಸ್ಥಾಪಕರಾದ ಜೆರಿ ಯಂಗ್ ಹಾಗು ಡೇವಿಡ್ ಫೈಲೋ, ತಮ್ಮ ಕಂಪನಿಗೆ ಇದೇ ಹೆಸರು ಸೂಕ್ತ ಎಂದು ನಿರ್ಧರಿಸಿ ಈ ರೀತಿ ಇಟ್ಟರಂತೆ.

7) ಮೈಕ್ರೋ ಸಾಫ್ಟ್- ಬಿಲ್ ಗೇಟ್ಸ್ ತನ್ನ ಕಂಪನಿ ಮೈಕ್ರೋ ಕಂಪ್ಯೂಟರ್ ಹಾಗು ಸಾಫ್ಟ್ವೇರ್ ಗಳ ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ಈ ಹೆಸರು ಇಟ್ಟರಂತೆ.

8 ) ಇಂಟೆಲ್ - ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ಸ್ ಎಂಬ ಪದವನ್ನು ಚುಟುಕುಗೊಳಿಸಿ ಈ ಹೆಸರನ್ನು ಇಡಲಾಯ್ತಂತೆ.

9) Hewlett Packard (HP) - ಇದರ ಸ್ಥಾಪಕರಾದ ಬಿಲ್ ಹೆವ್ಲೆಟ್ ಹಾಗು ಡೇವ್ ಪಕರ್ಡ್ ನಾಣ್ಯ ಚಿಮ್ಮಿಸುವುದರ ಮೂಲಕ ಈ ಹೆಸರನ್ನು ಅಂತಿಮ ಗೊಳಿಸಿದರಂತೆ.

10) ಗೂಗಲ್ (google) - ಮೊದಲಿಗೆ ಈ ಸರ್ಚ್ ಎಂಜಿನ್ ನ ಹೆಸರನ್ನು googol ಎಂದು ಇಡಲಾಗಿತ್ತಂತೆ. ಆದರೆ ಇವರಿಗೆ ಮೊದಲು ಹಣ ಹೂಡಿದ ಕಂಪನಿ, googol ಎನ್ನುವ ಹೆಸರಿಗೆ ಚೆಕ್ ಬರೆಯುವ ಬದಲು google ಎಂಬ ಹೆಸರಿಗೆ ಕೊಟ್ಟಿದ್ದರಿಂದ ಆ ಹೆಸರನ್ನೇ ಇಟ್ಟರಂತೆ.

ನಿಮಗೂ ಈ ರೀತಿ ಬೇರೆ ಕಂಪನಿಗಳ ಹೆಸರಿನ ಮಾಹಿತಿ ಇದ್ದರೆ ದಯವಿಟ್ಟು ನಮಗೆ ತಿಳಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X