ಆಫೀಸಲ್ಲಿ ಬ್ಲಾಕ್ ಆದ್ರೂ ಚಾಟಿಂಗ್ ಮಾಡಲು ಟ್ರಿಕ್

Posted By: Varun
ಆಫೀಸಲ್ಲಿ ಬ್ಲಾಕ್ ಆದ್ರೂ ಚಾಟಿಂಗ್ ಮಾಡಲು ಟ್ರಿಕ್
Image Courtesy:Microsoft

ನಾವೆಲ್ಲ ಪ್ರತಿನಿತ್ಯ ಆಫೀಸಿಗೆ ಹೋಗುತ್ತೇವೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡಿಕೊಡುತ್ತವೆ, ಈಟಿಂಗ್ ಹಾಗು ಸ್ಲೀಪಿಂಗ್ ಕೂಡ ಮಾಡುತ್ತೇವೆ, ಆದರೆ ಗೂಗಲ್ ಚಾಟ್, ಯಾಹೂ, MSN, ಫೇಸ್ ಬುಕ್ ಎಲ್ಲಾ ಬ್ಲಾಕ್ ಮಾಡಿರೋದಿರಿಂದ ವರ್ಕಿಂಗ್ ಟೈಮಿನಲ್ಲಿ ಚಾಟಿಂಗ್ ಮಾಡಲು ಮಾತ್ರ ಆಗುವುದಿಲ್ಲ ಎಂಬ ಬೇಸರ ನಿಮಗಿದ್ದರೆ ಇಲ್ಲಿದೆ ಒಂದು ಸೂಪರ್ ಆದ ಐಡಿಯಾ.

ಅವರು ರಂಗೋಲಿ ಕೆಳಗಡೆ ತೂರಿದರೆ ನೀವು ಭೂಮಿಯೊಳಗೆ ತೂರಿ, ನೆಟ್ವರ್ಕ್ ಅಡ್ಮಿನ್ ಗೆಗೊತ್ತಾಗದ ಹಾಗೆ ಯಾವುದೇ ಭಯವಿಲ್ಲದೆ ಚಾಟ್ ಮಾಡಲು ನಿಮ್ಮ ಹತ್ತಿರ ಒಂದು ಪೆನ್ ಡ್ರೈವ್ ಇದ್ದರೆ ಸಾಕು. ಸಾಮಾನ್ಯವಾಗಿ ಯಾವುದೇ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮಗೆ ನಿರ್ಬಂಧ ಇರುತ್ತದೆ. ಹಾಗಾಗಿ ನೀವು ಚಾಟ್ ಮಾಡುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲಾಗುವುದಿಲ್ಲ. ಆದರೆ ಈಗ ಹಲವಾರು ಕಂಪನಿಗಳು, ಎಲ್ಲೆಂದರಲ್ಲಿ ಪೆನ್ ಡ್ರೈವ್ ಗೆ ಹಾಕಿಕೊಂಡು ಕೊಂಡೊಯ್ಯಬಹುದಾದ ಪೋರ್ಟಬಲ್ ಆಪ್ ಗಳನ್ನು ಬಿಡುಗಡೆ ಮಾಡಿವೆ. ಇವುಗಳನ್ನು ನೀವು ಪೆನ್ ಡ್ರೈವ್ ಗೆ ಹಾಕಿಕೊಂಡು ಯಾವುದೇ ಕಂಪೂಟರ್ ಗೆ USB ಪೋರ್ಟ್ ಗೆ ಕನೆಕ್ಟ್ ಮಾಡಿ ತಲೆ ನೋವಿಲ್ಲದೆ ಉಪಯೋಗಿಸಬಹುದು.

ಈಗ ಚಾಟಿಂಗ್ ಗೆ ಎಂತಲೇ ಇರುವ Pidgin ಎಂಬ ಉಚಿತ ಪೋರ್ಟಬಲ್ ಆಪ್ ಅನ್ನು ನಿಮ್ಮ ಪೆನ್ ಡ್ರೈವ್ ಗೆ ಡೌನ್ಲೋಡ್ ಮಾಡಿಕೊಂಡು, ಯಾವಾಗ ಆಫೀಸಿನಲ್ಲಿ ಚಾಟ್ ಮಾಡಬೇಕು ಅನ್ಸುತ್ತೋ ಆಗ ಪೆನ್ ಡ್ರೈವ್ ಕನೆಕ್ಟ್ ಮಾಡಿ ಚಾಟ್ ಮಾಡಬಹುದು. ಪೆನ್ ಡ್ರೈವ್ ನಿಂದಲೇ Run ಆಗುವುದರಿಂದ ಆಫೀಸಿನ ಕಂಪ್ಯೂಟರ್ನಲ್ಲಿ ಇದರ ಯಾವುದೇ ಚಟುವಟಿಕೆ ದಾಖಲಾಗುವುದಿಲ್ಲ.

AOL, ಯಾಹೂ ಚಾಟ್, msn, ಗೂಗಲ್ ಟಾಕ್, ಮೈ ಸ್ಪೇಸ್ ನಂಥ ಖಾತೆಗಳ ಚಾಟ್ ಅನ್ನು ಸಪೋರ್ಟ್ ಮಾಡುತ್ತದೆ. ಈ Pidgin ಪೋರ್ಟಬಲ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಆಫೀಸಿನಲ್ಲಿ ಮಜವಾಗಿ ಚಾಟ್ ಮಾಡಿ :)

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot