ಲ್ಯಾಪ್ ಟಾಪ್ ಕೊಳ್ಳುವ ಮೊದಲು ಗಮನಿಸಲೆ ಬೇಕಾದ ಅಂಶ

Posted By:
ಲ್ಯಾಪ್ ಟಾಪ್ ಕೊಳ್ಳುವ ಮೊದಲು ಗಮನಿಸಲೆ ಬೇಕಾದ ಅಂಶ

ಡೆಸ್ಕ್ ಟಾಪ್ ಕಂಪ್ಯೂಟರಿಗೆ ಸರಿಸಾಟಿಯಾಗಿ ಅಥವಾ ಅದಕ್ಕಿಂತಲೂ ಹೆಚ್ಚು ಸಾಮರ್ಥ್ಯದ ಲ್ಯಾಪ್ ಟಾಪ್ ಗಳಿಂದು ಮಾರುಕಟ್ಟೆಗೆ ಆಗಮಿಸುತ್ತಿವೆ. ಲ್ಯಾಪ್ ಟಾಪ್ ಸಾಧನವನ್ನು ಜೊತೆಯಲ್ಲಿಯೆಕೊಂಡೊಯ್ಯಬಹುದಾದರಿಂದ ಜನರಿಗೆ ತಮ್ಮ ಕೆಲಸ ಕಾರ್ಯಗಳನ್ನು ಮಾಡಲು, ಮಾಹಿತಿಯನ್ನು ರವಾನಿಸಲು ಮತ್ತಷ್ಟು ಸುಗಮವಾಗಿದೆ. ಆದರೆ ಒಳ್ಳೆಯ ಲ್ಯಾಪ್ ಟಾಪ್ ಕೊಳ್ಳಬೇಕೆಂದು ಬಯಸುವವರು ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕು.

1. ಲ್ಯಾಪ್ ಟಾಪ್ ಕೊಳ್ಳುವ ಮೊದಲು ವಿಂಡೋಸ್, ಲಿನಕ್ಸ್ ಹೀಗೆ ನಿಮಗೆ ಯಾವ ಆಪರೇಟಿಂಗ್ ಸಿಸ್ಟಮ್ ಬೇಕೆಂಬುದನ್ನು ಮೊದಲೆ ನಿರ್ಧರಿಸಿ ಲ್ಯಾಪ್ ಸ್ಟೋರ್ ಗಳಿಗೆ ಹೋಗಬೇಕು.

2. ಗೆಳೆಯರು ಯಾವ ರೀತಿಯ ಲ್ಯಾಪ್ ಟಾಪ್ ಬಳಸುತ್ತಿದ್ದಾರೆ, ಅದರ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮೊದಲೆ ಕೇಳಿ ತಿಳಿದುಕೊಳ್ಳಬೇಕು.

3. ಅಧಿಕ RAM ಸಾಮರ್ಥ್ಯ ಇರುವ 512MB RAM ಇರುವ ಲ್ಯಾಪ್ ಟಾಪ್ ಆಯ್ಕೆ ಒಳ್ಳೆಯದು.

4. ಲ್ಯಾಪ್ ಟಾಪ್ ತೆಗೆಯುವಾಗ ಎರಡು USNB ಕನೆಕ್ಟರ್ ಇರುವ ಹಾಗೆ ನೋಡಿಕೊಳ್ಳಿ. ಪ್ರಿಂಟರ್, ಸ್ಕ್ಯಾನರ್ ಮತ್ತು ಗೇಮ್ ಕಂಟ್ರೋಲ್ ಗೆ ಬಳಸುವ ಫೈರ್ ವೈರ್ ಕನೆಕ್ಷನ್ ಒಳ್ಳೆಯದು.

5. ಹಗುರವಾದ ಲ್ಯಾಪ್ ಟಾಪ್ ಆಯ್ಕೆ ಮಾಡಬೇಕು.

6. ಲ್ಯಾಪ್ ಟಾಪ್ ಟೇಬಲ್ ಅಥವಾ ತೊಡೆಯ ಮೇಲೆ ಇಟ್ಟುಕೊಂಡು ಬಳಸಲು ಸುಲಭವಾಗಿರುವಂತೆ ಇರಬೇಕು.

7. ಪಾಯಿಂಟಿಂಗ್ ಡಿವೈಸ್ , ಟ್ರ್ಯಾಕ್ ಪ್ಯಾಡ್ ಮತ್ತು ಮೌಸ್ ಇವುಗಳನ್ನು ಕೊಳ್ಳುವ ಮೊದಲು ಪರೀಕ್ಷಿಸಿ ಕೊಳ್ಳಬೇಕು.

8. ಲ್ಯಾಪ್ ಟಾಪ್ ಕೆಳ ಬದಿ ತುಂಬಾ ಬೇಗನೆ ಬಿಸಿಯಾಗುವುದಾದರೆ ಕೊಳ್ಳಬಾರದು, ಏಕೆಂದರೆ ತೊಡೆ ಮೇಲೆ ಇಡುವುದರಿಂದ ಇದರಿಂದ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

9. ಲ್ಯಾಪ್ ಟಾಪ್ ಸ್ಕ್ರೀನ್ ಗಾತ್ರ ಮತ್ತು ರೆಸ್ಯೂಲೇಶನ್ ಎಷ್ಟೆಂದು ತಿಳಿದುಕೊಳ್ಳಬೇಕು. ರೆಸ್ಯೂಲೇಶನ್ ಅಧಿಕವಾದಷ್ಟು ಒಳ್ಳೆಯ ಇಮೇಜ್ ನೀಡುತ್ತದೆ.

10. ಲ್ಯಾಪ್ ಟಾಪ್ ನಲ್ಲಿ ಇನ್ ಬಿಲ್ಟ್ ವೈರ್ ಲೆಸ್ ಸಾಮರ್ಥ್ಯ ಮತ್ತು ವೈರ್ ಲೆಸ್ ನೆಟ್ ವರ್ಕ್ ಕಾರ್ಡ್ ಹೊಂದಿರಬೇಕು.

11. ಲ್ಯಾಪ್ ಟಾಪ್ ಡಿವಿಡಿ ಬರ್ನರ್ ಹೊಂದಿರುವಂತೆ ನೋಡಿಕೊಳ್ಳಿ.

12. ಲ್ಯಾಪ್ ಟಾಪ್ ನಲ್ಲಿ ಆಂಟಿ ಥೆಫ್ಟ್ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಇದರಿಂದ ಲ್ಯಾಪ್ ಟಾಪ್ ಕಳಿದು ಹೋದರೆ ಹುಡುಕಲು ಸುಲಭವಾಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot