ಪರ್ಮನೆಂಟ್ File Delete ಹೇಗೆ ಸಾಧ್ಯವಿದೆ ?

By Varun
|
ಪರ್ಮನೆಂಟ್ File Delete ಹೇಗೆ ಸಾಧ್ಯವಿದೆ ?

ನಮ್ಮ ಕಂಪ್ಯೂಟರಿನಲ್ಲಿ ಬೇಡದ ಫೈಲುಗಳನ್ನ ಡಿಲೀಟ್ ಮಾಡಲು ಸಾಮಾನ್ಯವಾಗಿ Delete ಬಟನ್ ಅನ್ನು ಉಪಯೋಗಿಸುತ್ತೇವೆ. ಆ ಡಿಲೀಟ್ ಆದ ಫೈಲ್, Recycle Bin ಗೆ ಹೋಗಿ ಕೂರುತ್ತದೆ. ನಿಮಗೆ ಬೇಕಿದ್ದರೆ ಮತ್ತೆ ಅದನ್ನು ರಿಕವರ್ ಮಾಡಬಹುದು. ಆದರೆ ನೀವು Shift ಬಟನ್ ಹಿಡಿದುಕೊಂಡು Delete ಒತ್ತಿದರೆ ನೇರವಾಗಿ ರೀಸೈಕಲ್ ಬಿನ್ ಗೂ ಹೋಗದೆ ಡಿಲೀಟ್ ಆಗುತ್ತದೆ. ಈ ರೀತಿ ಮಾಡಿದರೆ ನೀವು ಮತ್ತೆ ಫೈಲ್ ಅನ್ನು ಸಾಮಾನ್ಯವಾಗಿ ರಿಕವರಿ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಕೆಲವೊಂದು ಡೇಟಾ ರಿಕವರಿ ತಂತ್ರಾಂಶಗಳ ಮೂಲಕ ಪಡೆಯಬಹುದು.

ಈಗ EraseDrop ಎಂಬ ಸಾಧನದ ಮೂಲಕ ನೀವು Shift + Delete ಉಪಯೋಗಿಸದೆ, ಡೇಟಾ ರಿಕವರಿ ತಂತ್ರಾಂಶ ಉಪಯೋಗಿಸಿದರೂ ರಿಕವರಿ ಆಗದ ಹಾಗೆ ಡಿಲೀಟ್ ಮಾಡಲು ಸಾಧ್ಯವಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಪಾಲಿಸಿ:

  • ಮೊದಲಿಗೆ EraseDrop ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ.

  • ನಂತರ ಸೇವ್ ಮಾಡಿಕೊಂಡು ರನ್ ಮಾಡಿ

  • ನಿಮ್ಮ Desktop ಗೆ ಈ Icon ನ shortcut ಬರುತ್ತದೆ.

  • ನಂತರ ನೀವು ಯಾವ ಫೈಲ್ ಅನ್ನು ಶಾಶ್ವತವಾಗಿ ಡಿಲೀಟ್ ಮಾಡಬೇಕೋ ಅದನ್ನು drag ಮಾಡಿ ಈ Erase Drop ಮೇಲೆ ಹಾಕಿದರೆ ಸಾಕು, Wipe All selected File(s) and Folder(s) ? ಎಂದು ಕೇಳುತ್ತದೆ.

  • ನೀವು yes ಎಂದು ಕೊಟ್ಟರೆ ಸಾಕು ಶಾಶ್ವತವಾಗಿ ಯಾವುದೇ ಸುಳಿವನ್ನೂ ಉಳಿಸದೆ ಆ ಫೈಲ್ ಡಿಲೀಟ್ ಆಗುತ್ತದೆ.

ಈ ತಂತ್ರಾಂಶ ವಿಂಡೋಸ್ ಕಂಪ್ಯೂಟರಿನಲ್ಲಿ ಮಾತ್ರ ಕೆಲಸ ಮಾಡುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X