Subscribe to Gizbot

ಕಂಪ್ಯೂಟರ್ ಉಪಯೋಗಿಸದೆ ಬದುಕುವುದು ಹೇಗೆ ?

Posted By: Varun
ಕಂಪ್ಯೂಟರ್ ಉಪಯೋಗಿಸದೆ ಬದುಕುವುದು ಹೇಗೆ ?

ಇದ್ಯಾಕೋ ಅತೀ ಆಯ್ತು, ದಿನಕ್ಕೊಂದು ಹೊಸ ಟ್ಯಾಬ್ಲೆಟ್, ಲ್ಯಾಪ್ಟಾಪ್, ಸಾಮಾಜಿಕ ಜಾಲ ತಾಣಗಳ ಬಗ್ಗೆ ಬರೀತೀರಾ, ಕಂಪ್ಯೂಟರ್ ಇಲ್ಲದೆ ಕೆಲಸಾನೇ ನಡ್ಯಲ್ಲ, ಈಗ ನೋಡಿದ್ರೆ ಕಂಪ್ಯೂಟರ್ ಇಲ್ಲದೆ ಬದುಕೋದು ಹೇಗೆ ಅಂತ ಟಿಪ್ಸ್ ಬೇರೆ ಕೊಡೊ ಐಡಿಯಾ ಮಾಡಿದ್ದೀರ ಅಂತ ಮೂಗು ಮುರೀಬೇಡಿ.

ನಾವೆಲ್ಲಾ ಪ್ರತಿನಿತ್ಯ ಮನೇಲಿ, ಆಫೀಸಲ್ಲಿ ಎಲ್ಲ ಕಡೆ ಕಂಪ್ಯೂಟರ್ ಉಪಯೋಗಿಸ್ತೀವಿ. ಲ್ಯಾಪ್ ಟಾಪ್, ಟ್ಯಾಬ್ಲೆಟ್ ಬಂದ ಮೇಲಂತೂ PC ನ ಶೌಚಾಲಯಕ್ಕೆ ತಗೊಂಡು ಹೋಗೋ ಕಾರ್ಯಕ್ರಮವನ್ನೂ ಹಾಕಿಕೊಂಡಿರುತ್ತಾರೆ ಕೆಲವರು. ಆದರೆ ಕಂಪ್ಯೂಟರಿನ ಮೇಲೆ ಅತಿಯಾಗಿ ಅವಲಂಬಿತವಾಗಿರುವ ನಾವು, ಕೆಲವೊಮ್ಮೆ ಇದು ಅತಿಯಾಯ್ತು ಅಂತ ಒಂದು ಸಲ ಆದರೂ ಅಂದುಕೊಂಡಿರ್ತೀವಿ ತಾನೇ. ಹಾಗೆ ಅಂದುಕೊಂಡಿದ್ದರೆ, ಕಂಪ್ಯೂಟರ್ ನಲ್ಲಿ ಚಾಟಿಂಗ್, ಬ್ರೌಸಿಂಗ್, ಗೇಮ್ಸ್ ಆಡುವುದು ಬಿಟ್ಟು ಬೇರೆ ಏನೆಲ್ಲ ಮಾಡಬಹುದು ಅಂತ ಒಂದು ಸರಿ ಟ್ರೈ ಮಾಡಿ ನೋಡಿ, ನಿಮಗೇ ಆಶ್ಚರ್ಯವಾಗುತ್ತದೆ.

ಇಲ್ಲಿದೆ ನೋಡಿ ಕಂಪೂಟರ್ ಇಲ್ಲದೆ ಸಮಯ ಕಳೆಯಲು ಒಳ್ಳೆ ಟಿಪ್ಸ್

1) ಮೊದಲಿಗೆ ನೀವು ಒಂದು ಪುಸ್ತಕ ತೆಗೆದುಕೊಂಡು, ಇಂಟರ್ನೆಟ್ ನಲ್ಲಿ ನೀವು ಸಾಮಾನ್ಯವಾಗಿ ಯಾವುದರ ಬಗ್ಗೆ ಹುಡುಕುತ್ತೀರ ಎಂಬುದನ್ನು ಬರೆಯಿರಿ. ನಂತರ ನೀವು ಜಾಸ್ತಿ ಮೆಸೇಜ್ ಮಾಡುವ ಹಾಗು ಮಾತಾಡುವ ಜನರ ಹೆಸರು, ಫೋನ್ ನಂಬರ್ ಅನ್ನು ಬರೆಯಿರಿ. ಅದಾದ ನಂತರ ನಿಮ್ಮ ಫೆವರಿಟ್ ಎಫ್.ಎಂ ಚಾನಲ್ , ನಿಮಗಿಷ್ಟವಾದ ಟಾಪ್ 20 ಹಾಡುಗಳು ಯಾವುವು ಎಂದು ಬರೆಯಿರಿ.

2) ನೀವು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಟ್ ಮಾಡುವ ಜನರ ಫೋನ್ ನಂಬರ್ ಇದ್ದರೆ ಅವರ ಜೊತೆ ಫೋನಿನಲ್ಲಿ ಮಾತಾಡಿ ಇಲ್ಲವೆ sms ಮಾಡಿ.

3) ನಿಮ್ಮ ಫೆವರಿಟ್ ರೇಡಿಯೋ ಚಾನೆಲ್ ಗೆ ಟ್ಯೂನ್ ಮಾಡಿ, ತರ್ಲೆ ಮಾಡುವ RJ ಗಳ ಮಾತನ್ನು ಕೇಳಿಸಿಕೊಳ್ಳುತ್ತ ಮನಃಪೂರ್ವಕವಾಗಿ ನಕ್ಕುಬಿಡಿ. ಹಾಗೇ ಹಾಡನ್ನು ಕೇಳಿಸಿಕೊಳ್ಳುತ್ತಾ, ಹಾಡಿನ ಸಾಲುಗಳನ್ನು ಗುನುಗಿ ರೊಮ್ಯಾಂಟಿಕ್ ಆಗಿ.

4) ನಿಮಗಿಷ್ಟವಿರುವ ವಿಷಯಗಳ ಬಗ್ಗೆ ಪುಸ್ತಕಗಳನ್ನು ಒಂದು ಸೆಕೆಂಡ್ ಹ್ಯಾಂಡ್ ಪುಸ್ತಕ ದೊರೆಯುವ ಅಂಗಡಿಗೆ ಹೋಗಿ ಖರೀದಿ ಮಾಡಿ. ಅದು ಒಳ್ಳೆ ಕಾದಂಬರಿ ಇರಬಹುದು, ಕಾಮಿಕ್ ಇರಬಹುದು ಅಥವಾ ಸಾಮಾನ್ಯ ಜ್ಞಾನ ಹೆಚ್ಚಿಸುವ ಪುಸ್ತಕಗಳೇ ಆಗಿರಬಹುದು. ಓದು ಮನಸ್ಸನ್ನು ರಿಲಾಕ್ಸ್ ಮಾಡುವುದರ ಜೊತೆಗೆ, ನಿಮ್ಮನ್ನು ಚಿಂತೆಗೆ ಹಚ್ಚುತ್ತದೆ.

5) ಕಂಪ್ಯೂಟರಿನಲ್ಲಿ ಗೇಮ್ಸ್ ಆಡುವ ಬದಲು ಆಟದ ಮೈದಾನಕ್ಕೆ ಹೋಗಿ ಕ್ರಿಕೆಟ್, ಬ್ಯಾಸ್ಕೆಟ್ ಬಾಲ್, ಛೂ ಚೆಂಡು, ಲಗೋರಿ ರೀತಿಯ ಆಟವನ್ನು ನಿಮ್ಮ ಗೆಳೆಯರ ಜೊತೆ ಆಡಿ. ಇದೂ ಆಗದಿದ್ದರೆ ಮನೆಯ ಒಳಗೆ ಆಡಬಹುದಾದ ಕೇರಮ್, ಚೆಸ್, ಹಾವು ಏಣಿ ಆಟ, ಬಿಸಿನೆಸ್ ಆಟ, ಚೌಕ ಬಾರ ರೀತಿಯ ಆಟಆಡಿ.ಈ ರೀತಿಯ ಆಟಗಳು ನಿಮ್ಮ ಬಾಲ್ಯವನ್ನು ನೆನಪಿಸುತ್ತದೆ.

6) ಹತ್ತಿರದಲ್ಲೇ ಇರುವ ಒಂದು ಒಳ್ಳೆ ಥಿಯೇಟರಿಗೆ ಹೋಗಿ ಸಿನಿಮಾ ನೋಡಿಕೊಂಡು ಬನ್ನಿ. ನಿಮಗೆ ಸಿನಿಮಾ ಇಷ್ಟವಿಲ್ಲದಿದ್ದರೆ ಯಾವುದಾದರೂ ರಂಗಮಂದಿರಕ್ಕೆ ಭೇಟಿಕೊಟ್ಟು ನಾಟಕವನ್ನು ನೋಡಿಕೊಂಡು ಬನ್ನಿ.

7) ಕೆಲಸದಲ್ಲಿ ಬಿಡುವಿರುವಾಗ ನಮ್ಮ ಸ್ನೇಹಿತರನ್ನು ಫೇಸ್ ಟು ಫೇಸ್ ನೋಡಲಾಗುವುದಿಲ್ಲ. ಹಾಗಾಗಿಒಂದು ಸಣ್ಣ ಬ್ರೇಕ್ ತೆಗೆದುಕೊಂಡು ನಿಮ್ಮ ಆಪ್ತ ಗೆಳೆಯರನ್ನು ಭೇಟಿಮಾಡಿ. ಮನಸ್ಸು ಬಿಚ್ಚಿ ಮಾತನಾಡಿ.

ಇವಿಷ್ಟೂ ಐಡಿಯಾಗಳು ನಿಮಗೆ ಇಷ್ಟವಿಲ್ಲದಿದ್ದರೆ ನಿಮ್ಮ ತಂದೆ, ತಾಯಿ ಕಂಪ್ಯೂಟರ್ ಇಲ್ಲದ ಕಾಲದಲ್ಲಿ ಹೇಗೆ ತಮ್ಮ ಸಮಯವನ್ನು ಉಪಯೋಗಿಸಿಕೊಂಡರು ಎಂದು ಕೇಳಿ. ಅವರಿಗಿಂತಾ ಒಳ್ಳೆ ಸಲಹೆ ಇನ್ಯಾರು ಕೊಡಲು ಸಾಧ್ಯ :)

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot