ಈ hp ಲ್ಯಾಪಿ ದರ 20 ಸಾವಿರ ರು. ಅಷ್ಟೇ!

ಕಡಿಮೆ ದರದ ಲ್ಯಾಪ್ ಟಾಪೊಂದನ್ನು ಹುಡುಕುತ್ತಿದ್ದವರಿಗೆ ಎಚ್ ಪಿ ಕಂಪನಿಯ HP AMD 2000-239WM ಲ್ಯಾಪ್ ಟಾಪ್ ಸೂಕ್ತವಾಗಬಹುದು.
ಈ ಲ್ಯಾಪ್ ಟಾಪ್ ತೂಕ ಸುಮಾರು 2.49 ಕೆ.ಜಿ. ಇದರ ವಿನ್ಯಾಸ ಆಕರ್ಷಕವಾಗಿದೆ. ಕೀಬೋರ್ಡ್ ವಿನ್ಯಾಸ ಕೂಡ ಇಷ್ಟವಾಗುತ್ತದೆ. ಇದರಲ್ಲಿರುವ ಹತ್ತು ಹಲವು ಫೀಚರುಗಳ ಪಟ್ಟಿ ಕೆಳಗೆ ನೀಡಲಾಗಿದೆ. ನಿಮಗೆ ಇಷ್ಟವಾಗಬಹುದು.
ಫೀಚರುಗಳು
* ಡಿಸ್ ಪ್ಲೇ ಗಾತ್ರ 15.6 ಇಂಚು, ಹೈಡೆಫಿನೇಷನ್ ಎಲ್ ಇಡಿ
* ಸ್ಕ್ರೀನ್ ರೆಸಲ್ಯೂಷನ್: 1366 x 768 ಪಿಕ್ಸೆಲ್
* ಪ್ರೊಸೆಸರ್: ಇಂಟೆಲ್ ಸೆಲೆರೊನ್ ಪ್ರೊಸೆಸರ್ ಟಿ3500, 2.1 ಗಿಗಾಹರ್ಟ್ಸ್ ವೇಗ
* RAM: ಡಿಡಿಆರ್3, 3ಜಿ
* ಸಿಸ್ಟಮ್ ಮೆಮೊರಿ: 8ಜಿಬಿ
* ಹಾರ್ಡ್ ಡಿಸ್ಕ್ ಸಂಗ್ರಹ ಸಾಮರ್ಥ್ಯ 320 ಜಿಬಿ
* ಇಂಟೆಲ್ ಗ್ರಾಫಿಕ್ಸ್ ಮೀಡಿಯಾ ಆಕ್ಸಿಲರೇಟರ್ 4500MHD, ವಿಡಿಯೋ ಮೆಮೊರಿ 1,308 ಎಂಬಿ
* ಮೂರು ಯುಎಸ್ ಬಿ 2.0 ಪೋರ್ಟ್, ಒಂದು ಡಿಜಿಟಲ್ ಮೀಡಿಯಾ ಕಾರ್ಡ್ ರೀಡರ್
* 802.11b/g/n WLAN ವೇರ್ ಲೆಸ್ ಕನೆಕ್ಟಿವಿಟಿ
* ಆರು ಸೆಲ್ ಲೀಥಿಯಂ ಬ್ಯಾಟರಿ
* ವಿಂಡೋಸ್ 7 ಹೋಮ್ ಪ್ರೀಮಿಯಂ ಜೆನ್ಯುನ್
ಈ ಲ್ಯಾಪ್ ಟಾಪ್ ನಲ್ಲಿ ಭದ್ರತೆಯ ಫೀಚರುಗಳು ಇವೆ. ಕೆನಿಗ್ ಸ್ಟೋನ್ ಮೈಕ್ರೊಪವರ್ ಲಾಕ್ ಸ್ಲಾಟ್, ಪವರ್ ಆನ್ ಪಾಸ್ ವರ್ಡ್ ಮತ್ತು ಕಳ್ಳರಿಂದ ರಕ್ಷಿಸಲು ಲೊಜಾಕ್ ಫೀಚರು ಇದೆ. ಹೀಗೆ ಹತ್ತುಹಲವು ಫೀಚರುಗಳ ಈ ಲ್ಯಾಪ್ ಟಾಪ್ ದರ ಸುಮಾರು 20 ಸಾವಿರ ರು. ಆಸುಪಾಸಿನಲ್ಲಿದೆ.


Click it and Unblock the Notifications








