ಭಾರತದಲ್ಲಿ HP ಕಂಪೆನಿಯ AI-ಚಾಲಿತ EliteBook ಲ್ಯಾಪ್‌ಟಾಪ್‌ಗಳು ಬಿಡುಗಡೆ!
ಜನಪ್ರಿಯ ಟೆಕ್ ಬ್ರ್ಯಾಂಡ್ ಆಗಿರುವ HP ಕಂಪನಿಯು ಭಾರತದ ಮಾರುಕಟ್ಟೆಗೆ ವೃತ್ತಿಪರರು ಮತ್ತು ವ್ಯಾಪಾರ ಬಳಕೆದಾರರಿಗಾಗಿ ವಿನ್ಯಾಸಗೊಳಿಸಿದ ಹೊಸ AI-ಚಾಲಿತ ಪ್ರೀಮಿಯಂ ಫ್ಲಾಗ್‌ಶಿಪ್ EliteBook ಲ್ಯಾಪ್‌ಟಾಪ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ HP EliteBook Ultra G1i, HP EliteBook X G1i, HP EliteBook X G1i Flip, and HP EliteBook X G1a ಲ್ಯಾಪ್‌ಟಾಪ್‌ಗಳು ಸೇರಿವೆ. ಈ ಲ್ಯಾಪ್‌ಟಾಪ್‌ಗಳು ಇಂಟೆಲ್ ಮತ್ತು AMD ಪ್ರೊಸೆಸರ್‌ಗಳನ್ನು ಒಳಗೊಂಡಿದ್ದು, ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಅಂತರ್ನಿರ್ಮಿತ AI ಸಾಮರ್ಥ್ಯಗಳನ್ನು ಹೊಂದಿವೆ. ಹಾಗಾದರೆ, ಪ್ರೀಮಿಯಂ ಫ್ಲಾಗ್‌ಶಿಪ್ EliteBook ಲ್ಯಾಪ್‌ಟಾಪ್‌ಗಳ ಪ್ರಮುಖ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆಗಳು ಎಷ್ಟು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
HP EliteBook ಲ್ಯಾಪ್‌ಟಾಪ್‌ಗಳ ವೈಶಿಷ್ಟ್ಯಗಳು ಹೀಗಿವೆ,
HP EliteBook Ultra G1i 14-inch
ಈ ಹೊಸ HP EliteBook Ultra G1i 14-inch ಲ್ಯಾಪ್‌ಟಾಪ್ 1.19 ಕೆಜಿ ತೂಕದ ಹಗುರವಾದ ವಿನ್ಯಾಸವನ್ನು ಹೊಂದಿದ್ದು, ಇಂಟೆಲ್ ಕೋರ್ ಅಲ್ಟ್ರಾ 5 ಮತ್ತು 7 (ಸರಣಿ 2) ಪ್ರೊಸೆಸರ್‌ಗಳಿಂದ ಚಾಲಿತವಾಗುತ್ತದೆ. ಇದು ಸೆಕೆಂಡಿಗೆ 48 ಟ್ರಿಲಿಯನ್ ಕಾರ್ಯಾಚರಣೆಗಳನ್ನು (TOPS) AI ಸಂಸ್ಕರಣಾ ಶಕ್ತಿಯಾಗಿ ಒದಗಿಸುತ್ತದೆ. ಈ ಲ್ಯಾಪ್‌ಟಾಪ್ 9MP AI-ಚಾಲಿತ ಕ್ಯಾಮೆರಾ, ಡ್ಯುಯಲ್ ಮೈಕ್ರೊಫೋನ್‌ಗಳು ಮತ್ತು 120Hz 3K OLED ಡಿಸ್ಪ್ಲೇಯನ್ನು ಹೊಂದಿದೆ.
HP EliteBook X G1i 14-inch ಮತ್ತು HP EliteBook X Flip G1i 14-inch
HP EliteBook X G1i 14-inch ಮತ್ತು HP EliteBook X Flip G1i 14-inch ಲ್ಯಾಪ್‌ಟಾಪ್‌ಗಳು ಇಂಟೆಲ್ ಕೋರ್ ಅಲ್ಟ್ರಾ 5 ಮತ್ತು 7 ಪ್ರೊಸೆಸರ್‌ಗಳಿಂದ ಚಾಲಿತವಾಗಿವೆ. ಇವು ಮೀಟಿಂಗ್ ಟ್ರಾನ್ಸ್‌ಕ್ರಿಪ್ಷನ್ ಮತ್ತು ಸ್ವಯಂಚಾಲಿತ ವಿಷಯ ರಚನೆ ಸೇರಿದಂತೆ AI ವೈಶಿಷ್ಟ್ಯಗಳನ್ನು ಒಳಗೊಂಡಿವೆ. 1.4 ಕೆಜಿ ತೂಕದ ಫ್ಲಿಪ್ ಮಾದರಿಯು ಟ್ಯಾಬ್ಲೆಟ್ ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು HP ಪುನರ್ಭರ್ತಿ ಮಾಡಬಹುದಾದ ಆಕ್ಟಿವ್ ಪೆನ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್, ಪಾಲಿ ಕ್ಯಾಮೆರಾ ಪ್ರೊ ಮತ್ತು ನಾಲ್ಕು ಪಾಲಿ ಸ್ಟುಡಿಯೋ-ಟ್ಯೂನ್ಡ್ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ.

HP EliteBook X G1a 14-inch
ಈ HP EliteBook X G1a 14-inch ಲ್ಯಾಪ್‌ಟಾಪ್ AMD ರೈಜೆನ್ 7 PRO ಮತ್ತು 9 PRO ಪ್ರೊಸೆಸರ್‌ಗಳನ್ನು ಹೊಂದಿದ್ದು, 55 TOPS AI ಸಂಸ್ಕರಣಾ ಶಕ್ತಿಯನ್ನು ಒದಗಿಸುತ್ತದೆ. 64GB LPDDR5x RAM, ಅಡಾಪ್ಟಿವ್ ಡಿಮ್ಮಿಂಗ್ ಮತ್ತು ಪಾಲಿ ಸ್ಟುಡಿಯೋ ಆಡಿಯೊ ಟ್ಯೂನಿಂಗ್‌ನೊಂದಿಗೆ AI-ಚಾಲಿತ ವೆಬ್‌ಕ್ಯಾಮ್ ಅನ್ನು ಹೊಂದಿದೆ. ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಈ ಲ್ಯಾಪ್‌ಟಾಪ್ 30 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ ಮತ್ತು HP ಎಂಡ್‌ಪಾಯಿಂಟ್ ಸೆಕ್ಯುರಿಟಿಯೊಂದಿಗೆ ಡೇಟಾ ರಕ್ಷಣೆಯನ್ನು ಒದಗಿಸುತ್ತದೆ. ಈ ಲ್ಯಾಪ್‌ಟಾಪ್ 1.49 ಕೆಜಿ ತೂಕದ ಹಗುರವಾದ ವಿನ್ಯಾಸವನ್ನು ಹೊಂದಿದೆ.
HP EliteBook ಲ್ಯಾಪ್‌ಟಾಪ್‌ಗಳ ಬೆಲೆಗಳು.
HP EliteBook Ultra G1i 14-inch ಲ್ಯಾಪ್‌ಟಾಪ್ ರೂ. 2,67,223 ಬೆಲೆಯಲ್ಲಿ ಅಟ್ಮಾಸ್ಫಿಯರ್ ನೀಲಿ ಬಣ್ಣದಲ್ಲಿ ಬಿಡುಗಡೆಯಾಗಿದೆ. HP EliteBook X G1i 14-inch ಲ್ಯಾಪ್‌ಟಾಪ್ ರೂ. 2,23,456 ಬೆಲೆಯಲ್ಲಿ ಅಟ್ಮಾಸ್ಫಿಯರ್ ನೀಲಿ ಮತ್ತು ಗ್ಲೇಸಿಯರ್ ಸಿಲ್ವರ್ ಬಣ್ಣದಲ್ಲಿ ಬಿಡುಗಡೆಯಾಗಿದೆ.HP EliteBook X G1a 14-inch ಲ್ಯಾಪ್‌ಟಾಪ್ ರೂ. 2,58,989 ಬೆಲೆಯಲ್ಲಿ ಅಟ್ಮಾಸ್ಫಿಯರ್ ನೀಲಿ ಮತ್ತು ಗ್ಲೇಸಿಯರ್ ಸಿಲ್ವರ್ ಬಣ್ಣದಲ್ಲಿ ಲಭ್ಯವಿದೆ.
ಈ ಹೊಸ ಎಲೈಟ್‌ಬುಕ್ ಸಾಧನಗಳು AI-ಚಾಲಿತ ವೈಶಿಷ್ಟ್ಯಗಳು, ಸ್ಮಾರ್ಟ್ ಸಹಯೋಗ ಪರಿಕರಗಳು, ಭದ್ರತಾ ಸುಧಾರಣೆಗಳು ಮತ್ತು ಸುಸ್ಥಿರ ವಿನ್ಯಾಸಗಳ ಮೇಲೆ ಕೇಂದ್ರೀಕರಿಸುತ್ತವೆ. ವೃತ್ತಿಪರರು ಮತ್ತು ವ್ಯಾಪಾರ ಬಳಕೆದಾರರಿಗೆ ಈ ಲ್ಯಾಪ್‌ಟಾಪ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ ಎಂದು HP ಕಂಪೆನಿ ತಿಳಿಸಿದೆ.


Click it and Unblock the Notifications








