ಎಚ್‌ಪಿಯಿಂದ ಹೊಸ ವೈಶಿಷ್ಟ್ಯತೆಯುಳ್ಳ ಎರಡು ಹೊಸ ಗೇಮಿಂಗ್ ನೋಟ್ ಬುಕ್ ಬಿಡುಗಡೆ

By: Shwetha PS

ಗೇಮಿಂಗ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುವುದಕ್ಕಾಗಿ ಎಚ್‌ಪಿ ತನ್ನ ಓಮನ್ ಗೇಮಿಂಗ್ ನೋಟ್‌ಬುಕ್‌ಗಳ ಮಾರುಕಟ್ಟೆಯನ್ನು ವೃದ್ಧಿಸಿದೆ. ಎರಡು ಹೊಸ ಮಾಡೆಲ್‌ಗಳನ್ನು ಕಂಪನಿ ಬಿಡುಗಡೆ ಮಾಡಿದ್ದು ಓಮನ್ 15 ಮತ್ತು ಓಮನ್ 17 ಎಂಬುದಾಗಿ ಈ ಎರಡು ಹೊಸ ಮಾಡೆಲ್‌ಗಳನ್ನು ಕರೆದಿದೆ.

ಎಚ್‌ಪಿಯಿಂದ ಹೊಸ ವೈಶಿಷ್ಟ್ಯತೆಯುಳ್ಳ ಎರಡು ಹೊಸ ಗೇಮಿಂಗ್ ನೋಟ್ ಬುಕ್ ಬಿಡುಗಡೆ

ಇತ್ತೀಚಿನ 10 ಸಿರೀಸ್ ಜಿಟಿಎಕ್ಸ್ ಗ್ರಾಫಿಕ್ಸ್ ಅನ್ನು ಇದು ಒಳಗೊಂಡಿದ್ದು, ಹೆಚ್ಚು ರೆಸಲ್ಯೂಶನ್ ಡಿಸ್‌ಪ್ಲೇಗಳನ್ನು ಹೊಂದಿದೆ. ಜಿ-ಸಿಂಕ್ ತಂತ್ರಜ್ಞಾನವನ್ನು ನೋಟ್‌ಬುಕ್ ಹೊಂದಿದೆ. ಇದರಲ್ಲಿರುವ RAM ಮತ್ತು ಸಂಗ್ರಹಣೆಯನ್ನು ವೃದ್ಧಿಸಿಕೊಳ್ಳಬಹುದಾದ ಫೀಚರ್ ಅನ್ನು ನೋಟ್‌ಬುಕ್ ಹೊಂದಿದೆ.

ಎಚ್‌ಪಿಯ ಓಮನ್ ನೋಟ್‌ಬುಕ್ ಇಂದು ಮಾರುಕಟ್ಟೆಯಲ್ಲಿ ಕ್ಷಿಪ್ರವಾಗಿ ಮಾರಾಟವಾಗುತ್ತಿರುವ ಉತ್ಪನ್ನವಾಗಿದೆ ಎಂಬುದು ಎಚ್‌ಪಿ ಇಂಕ್ ಇಂಡಿಯಾದ ಕನ್ಸ್ಯೂಮರ್ ಪರ್ಸನಲ್ ಸಿಸ್ಟಮ್ ಮುಖ್ಯಸ್ಥ ಅನುರಾಗ್ ಅರೋರಾ ಮಾತಾಗಿದೆ. ಗೇಮ್‌ ಬಗ್ಗೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕ್ರೇಜ್ ಇದ್ದು ಇದರ ಜೊತೆಗೆ ಆಕರ್ಷಕ ವಿನ್ಯಾಸ ಕೂಡ ಗ್ರಾಹಕರ ಮನವನ್ನು ಕದಿಯುತ್ತಿದೆ.

ನೋಟ್‌ಬುಕ್‌ನ ಪ್ರತಿಯೊಂದು ಅಂಶಕ್ಕೂ ನಾವು ಹೆಚ್ಚು ಗಮನವನ್ನು ಹರಿಸುತ್ತಿದ್ದು ಮಾರುಕಟ್ಟೆಯಲ್ಲಿರುವ ಸ್ಪರ್ಧೆಗೆ ಇದನ್ನು ಉತ್ತಮವಾಗಿ ಸಜ್ಜುಗೊಳಿಸುತ್ತಿದ್ದೇವೆ ಎಂಬುದು ಮುಖ್ಯಸ್ಥರ ಮಾತಾಗಿದೆ.

ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್ ಹೊಂದಿರುವ ಖಾತೆಗಳಿಗೂ ಬಂತು ಕುತ್ತು.!!

ಹೊಸ ಸಿರೀಸ್ 7 ನೇ ಜನರೇಶನ್ ಕೋರ್ ಕ್ವಾಡ್ ಕೋರ್ ಸಿಪಿಯುವನ್ನು ಹೊಂದಿದ್ದು ಹೆಚ್ಚಿನ ಗೇಮ್‌ಗಳನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಮಲ್ಟಿ ಫ್ಯಾನ್/ಮಲ್ಟಿ ಹೀಟ್ ಪೈಪ್/ಮಲ್ಟಿ ಎಕ್ಸಾಸ್ಟ್ ಥರ್ಮಲ್ ಸಲ್ಯೂಶನ್ ಅನ್ನು ಲ್ಯಾಪ್‌ಟಾಪ್ ಪಡೆದಿದೆ. ಇದರಿಂದ ಲ್ಯಾಪ್‌ಟಾಪ್ ಹೆಚ್ಚು ಬಿಸಿಯಾಗುವುದನ್ನು ತಡೆಗಟ್ಟಬಹುದಾಗಿದೆ.

ಹೆಚ್ಚಿನ ಗೇಮಿಂಗ್ ಸೆಶನ್‌ಗಳಿಗಾಗಿ ಡ್ರ್ಯಾಗನ್ ರೆಡ್ ಬ್ಯಾಕ್‌ಲೈಟ್ ಕೀಬೋರ್ಡ್ ಅನ್ನು ಇದು ಹೊಂದಿದ್ದು ಬಿಳಿ ಬ್ಯಾಕ್‌ಲೈಟ್ ಅನ್ನು ಸುಲಭ ಗುರುತಿಸುವಿಕೆಗಾಗಿ ಪಡೆದಿದೆ. ಅಪ್ಪಿ ತಪ್ಪಿ ಕೂಡ ಕೀ ಪ್ರೆಸ್ ಆಗುವುದನ್ನು ತಡೆಗಟ್ಟಲು ಪೂರ್ಣ ಗಾತ್ರದ ಬಾಣದ ಗುರುತುಳ್ಳ ಕೀಗಳನ್ನು ನೀಡಲಾಗಿದೆ.

4 ಕೆ ಡಿಸ್‌ಪ್ಲೇ, ಹೆಚ್ಚು ರೆಸಲ್ಯೂಶನ್ ಕಂಟೆಂಟ್ ಪ್ಲೇಬ್ಯಾಕ್, 120HZ 1080 ಪಿ ಡಿಸ್‌ಪ್ಲೇ ಆಪ್ಶನ್ ಅನ್ನು ನೋಟ್‌ಬುಕ್ ಹೊಂದಿದೆ.Read more about:
English summary
It comes with 4K display1 option for high-resolution content playback, or a 120Hz 1080p display option for fast refresh-rates2 with NVIDIA G-Sync™ options
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot