Home
ಕಂಪ್ಯೂಟರ್‌‌

ಒಮೆನ್ 15 ಲ್ಯಾಪ್‌ಟಾಪ್‌, ಪೆಲಿವಿಯನ್ ಗೇಮಿಂಗ್ ಪಿಸಿ ಭಾರತದಲ್ಲಿ ಬಿಡುಗಡೆ

By Gizbot Bureau

ಹೆಚ್ ಪಿ ಯ ಮತ್ತೆರಡು ಲ್ಯಾಪ್ ಟಾಪ್ ಗಳು ಮಾರುಕಟ್ಟೆಗೆ ಎಂಟ್ರಿ ಆಗಿದೆ. ಹೌದು , ಮಾರ್ಚ್ ನಲ್ಲಿ ಒಮೆನ್ ಎಕ್ಸ್ ಸಿರೀಸ್ ನ ಗೇಮಿಂಗ್ ಡಿವೈಸ್ ನ್ನು ಭಾರತದಲ್ಲಿ ಹೆಚ್ ಪಿ ಬಿಡುಗಡೆಗೊಳಿಸಿದ ನಂತರ, ಹೊಸ ಪೆವಿಲಿಯನ್ ಗೇಮಿಂಗ್ ಪಿಸಿ ರೇಂಜ್ ಮತ್ತು ಹೆಚ್ ಪಿ ಒಮೆನ್ 15 ಲ್ಯಾಪ್ ಟಾಪ್ ನ್ನು ಹೆಚ್ ಪಿ ಬಿಡುಗಡೆಗೊಳಿಸಿದೆ.

ಒಮೆನ್ 15 ಲ್ಯಾಪ್‌ಟಾಪ್‌, ಪೆಲಿವಿಯನ್ ಗೇಮಿಂಗ್ ಪಿಸಿ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಮೊದಲ ಬಾರಿಗೆ ನಾವು ಪೆವಿಲಿಯನ್ ಗೇಮಿಂಗ್ ಲ್ಯಾಪ್ ಟಾಪ್ ನ್ನು ಬಿಡುಗಡೆಗೊಳಿಸುತ್ತಿದ್ದೇವೆ ಎಂದು ಎಚ್ ಪಿ ಸಂಸ್ಥೆಯ ಪರ್ಸನಲ್ ಸಿಸ್ಟಮ್ಸ್ ನ ಹಿರಿಯ ನಿರ್ದೇಶಕರಾಗಿರುವ ವಿಕ್ರಮ್ ಬೇಡಿ GizBot ಗೆ ತಿಳಿಸಿದ್ದಾರೆ.

ಗರಿಷ್ಟ ಗೇಮಿಂಗ್ ಅನುಭವ

ಗರಿಷ್ಟ ಗೇಮಿಂಗ್ ಅನುಭವ

ಹೆಚ್ ಪಿ ಪೆವಿಲಿಯನ್ ಗೇಮಿಂಗ್ ಗರಿಷ್ಟ ಗೇಮಿಂಗ್ ಅನುಭವವನ್ನು , ಮೌಲ್ಯ ಮತ್ತು ಬುದ್ಧಿಶಕ್ತಿಗಳ ಸಂಯೋಜನೆಯನ್ನು ಪ್ರತಿದಿನವೂ ಬಳಕೆದಾರನಿಗೆ ಒದಗಿಸುತ್ತಿದೆ. ಹೆಚ್ ಪಿ ಒಮೆನ್ ಸೀರಿಸ್ ಸಾಕಷ್ಟು ಪವರ್ಫುಲ್ ಆಗಿರುವ ಲ್ಯಾಪ್ ಟಾಪ್ ಆಗಿದ್ದು, ಹೊಸ ಹೊಸ ಗೇಮಿಂಗ್ ಆಕ್ಸಿಸರೀಸ್ ಗಳನ್ನು ಕೂಡ ಇದು ಒಳಗೊಂಡಿದೆ. ಅದರಲ್ಲೂ ಪ್ರಮುಖವಾಗಿ ಇದರಲ್ಲಿ ಇಯರ್ ಕಪ್ ಕೂಲಿಂಗ್ ತಂತ್ರಜ್ಞಾನದ ಹೆಡ್ ಸೆಟ್ ಇದೆ. ಇದು ವಿಶ್ವದಲ್ಲೇ ಈ ತಂತ್ರಜ್ಞಾನವಿರುವ ಮೊದಲ ಹೆಡ್ ಸೆಟ್ ಆಗಿದೆ.

ಶೇಕಡಾ 62 ರಷ್ಟು ಗೇಮಿಂಗ್ ಮಾರುಕಟ್ಟೆ

ಶೇಕಡಾ 62 ರಷ್ಟು ಗೇಮಿಂಗ್ ಮಾರುಕಟ್ಟೆ

ಕಂಪೆನಿಯ ಪ್ರಕಾರ ಗೇಮಿಂಗ್ ಅನ್ನುವುದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಿಸಿ ಕೆಟಗರಿಯಾಗಿದೆ ಮತ್ತು ಹೆಚ್ ಪಿ ಗೆ ಬಿಲಿಯನ್ ಡಾಲರ್ ವ್ಯವಹಾರವನ್ನು ಕರುಣಿಸುತ್ತಿದೆ. ವಿಶ್ವದಾದ್ಯಂತ ಒಂದು ಬಿಲಿಯನ್ ಗೇಮರ್ ಗಳಿಗಾಗಿ ಮುಖ್ಯವಾಹಿನಿಯ ಗೇಮರ್ ಗಳು ಶೇಕಡಾ 62 ರಷ್ಟು ಬೆಳೆಯುತ್ತಿರುವ ಮಾರುಕಟ್ಟೆಯನ್ನು ಪ್ರತಿನಿಧಿಸುತ್ತಿದ್ದಾರೆ.

ರಾಕ್-ಸಾಲಿಡ್ ಹಾರ್ಡ್ ವೇರ್

ರಾಕ್-ಸಾಲಿಡ್ ಹಾರ್ಡ್ ವೇರ್

ಹೆಚ್ ಪಿ ಪೆವಿಲಿಯನ್ ಗೇಮಿಂಗ್ 15 ಲ್ಯಾಪ್ ಟಾಪ್ ಆಟಕ್ಕಾಗಿ ಅತ್ಯುತ್ತಮ ರಾಕ್-ಸಾಲಿಡ್ ಹಾರ್ಡ್ ವೇರ್ ಮತ್ತು ಪೋರ್ಟೆಬ್ಲಿಟಿಯನ್ನು ಹೊಂದಿದೆ. ಈ ಹೊಸ ಡಿವೈಸ್ ವೈ-ಫೈ, ಅತ್ಯುತ್ತಮ ಸೌಂಡ್ ಸಿಸ್ಟಮ್, ಎರಡು ಫ್ಯಾನ್ ಗಳಿಂದಾಗಿ ಕೂಲಿಂಗ್ ಸಲ್ಯೂಷನ್ ನ್ನು ಕೂಡ ಹೊಂದಿದೆ. ಹಾಗಾಗಿ ಲ್ಯಾಪ್ ಟಾಪ್ ಬಿಸಿಯಾಗುವ ಸಮಸ್ಯೆಯನ್ನು ಗ್ರಾಹಕರು ಎದುರಿಸುವುದಿಲ್ಲ.

7 ಮಿಲಿಸೆಕೆಂಡ್ ನ ಪ್ರತಿಕ್ರಿಯೆ

7 ಮಿಲಿಸೆಕೆಂಡ್ ನ ಪ್ರತಿಕ್ರಿಯೆ

ಇನ್ನೊಂದೆಡೆ ಒಮೆನ್ 15 ಲ್ಯಾಪ್ ಟಾಪ್, 7 ಮಿಲಿಸೆಕೆಂಡ್ ನ ಪ್ರತಿಕ್ರಿಯೆ ಸಮಯ ಮತ್ತು 144HZ ರಿಫ್ರೆಶ್ ರೇಟ್ ನ್ನು ಹೊಂದಿದೆ. ಓಮೆನ್ ಗೇಮ್ ಸ್ಟ್ರೀಮ್ 5 ನೊಂದಿಗೆ ಓಮೆನ್ ಕಮಾಂಡ್ ಸೆಂಟರ್ ಸಾಫ್ಟ್ವೇರ್ ನ ವಿಸ್ತರಿತ ಕಾರ್ಯಕ್ಷಮತೆಯನ್ನು ಕೂಡ ಇದು ಹೊಂದಿದೆ.

ಆರಂಭಿಕ ಬೆಲೆ 74,990 ರುಪಾಯಿ

ಆರಂಭಿಕ ಬೆಲೆ 74,990 ರುಪಾಯಿ

ಹೆಚ್ ಪಿ ಪೆವಿಲಿಯನ್ ಗೇಮಿಂಗ್ 15 ಲ್ಯಾಪ್ ಟಾಪ್ ನ ಆರಂಭಿಕ ಬೆಲೆ 74,990 ರುಪಾಯಿ ಮತ್ತು ಒಮೆನ್ 15 ಲ್ಯಾಪ್ ಟಾಪ್ 1,05,990 ರುಪಾಯಿಯ ಆರಂಭಿಕ ಬೆಲೆಯಲ್ಲಿ ಸಿಗಲಿದೆ. ಓಮೆನ್ ನ ಹೆಚ್ ಪಿ ಸೀಕ್ವೆನ್ಸ ಕೀಬೋರ್ಡ್ ಅಗಸ್ಟ್ ನಿಂದ ಲಭ್ಯವಾಗಲಿದ್ದು 10,999 ರುಪಾಯಿಗೆ ಲಭ್ಯವಾಗಲಿದೆ.

Best Mobiles in India

English summary
HP launches Omen 15 laptop and Pavilion Gaming PC in India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+