HP ಯಿಂದ ಹೊಸ ಮಾದರಿಯ ನೋಟ್ ಪ್ಯಾಡ್ ಬಿಡುಗಡೆ
HP ನೋಟ್ ಪ್ಯಾಡ್ ಪವರ್ ಫುಲ್ ಆಗಿ ಕಾರ್ಯನಿರ್ವಹಿಸಲಿದ್ದು ಮತ್ತು ಗುಣಮಟ್ಟದ ಡಿಸ್ ಪ್ಲೇಯನ್ನು ಒಳಗೊಂಡಿವೆ. ಪ್ರೀಮಿಯಂ ಡಿಸೈನ್ ನಿಂದ ಕೂಡಿದೆ.
HP ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ನೋಟ್ ಪ್ಯಾಡ್ ಗಳನ್ನು ಬಿಡುಗಡೆ ಮಾಡಿದ್ದು, ಇದು ವಿದ್ಯಾರ್ಥಿಗಳ ಬಳಕೆಗೆ, ಪ್ರೋಫೆಷನಲ್ ಕಾರ್ಯಗಳಿಗೆ ಬಳಕೆ ಮಾಡಲು ಸರಿ ಹೋಗುವಂತೆ ವಿನ್ಯಾಸ ಮಾಡಲಾಗಿದ್ದು, ಈ ನೋಟ್ ಪ್ಯಾಡ್ ಗಳಿಗೆ HP ಪೆವಿಲಿಯನ್ x360 ಮತ್ತು HP ಸ್ಪೆಕ್ಟರ್ x360 ಎಂದು ನಾಮಕರಣ ಮಾಡಲಾಗಿದೆ.

HP ಮಾರುಕಟ್ಟೆಯಲ್ಲಿ ಬೆಸ್ಟ್ ಕ್ಲಾಸ್ ನೋಟ್ ಪ್ಯಾಡ್ ಗಳನ್ನು ತಯಾರಿಸುತ್ತಿದ್ದು, ಸದ್ಯ ಬಿಡುಗಡೆಯಾಗಿರುವ ನೋಟ್ ಪ್ಯಾಡ್ ಗಳು ಇದೇ ಸಾಲಿಗೆ ಸೇರಲಿದ್ದು, ಇವುಗಳು ಪವರ್ ಫುಲ್ ಆಗಿ ಕಾರ್ಯನಿರ್ವಹಿಸಲಿದ್ದು ಮತ್ತು ಗುಣಮಟ್ಟದ ಡಿಸ್ ಪ್ಲೇಯನ್ನು ಒಳಗೊಂಡಿವೆ. ಪ್ರೀಮಿಯಂ ಡಿಸೈನ್ ನಿಂದ ಕೂಡಿದೆ.
HP ಪೆವಿಲಿಯನ್ x360:
HP ಪೆವಿಲಿಯನ್ x360 ಸರಣಿಯ ನೋಟ್ ಪ್ಯಾಡ್ ಗಳು ಮೆಟಲ್ ಫಿನಿಷಿಂಗ್ ಹೊಂದಿದ್ದು, 11 ಮತ್ತು 14 ಇಂಚಿನಲ್ಲಿ ದೊರೆಯಲಿದೆ. FHD ಡಿಸ್ ಪ್ಲೇ ಅಳವಡಿಸಲಾಗಿದ್ದು, ಮಲ್ಟಿ ಟಚ್ ಡಿಸ್ ಪ್ಲೇ ಇದಾಗಿದೆ. ಫುಲ್ ಸೈಜ್ ಐಎಸ್ ಲ್ಯಾಂಡ್ ಸ್ಟೈಲ್ ಕೀಬೋರ್ಡ್ ಮತ್ತು HP ಇಮೇಜ್ ಪ್ಯಾಡ್ ಇದರಲ್ಲಿದೆ. ಅಲ್ಲದೇ 7ನೇ ತಲೆಮಾರಿನ ಇಂಟೆಲ್ ಪ್ರೊಸೆಸರ್ ಇದ್ದು, ನವಿಡಾ ಜಿಫೋರ್ಸ್ ಗ್ರಾಫಿಕ್ಸ್ ಕಾರ್ಡ್ ಮತ್ತು 2GB ವಿಡಿಯೋ RAM ಇದರಲ್ಲಿದೆ.

ಇದರಲ್ಲಿ ಹೈಬ್ರಿಡ್ ಸ್ಟೋರೆಜ್ 1 TB SSD ಮತ್ತು 8GB SSD ಅಳವಡಿಸಲಾಗಿದ್ದು, ಇದರಲ್ಲಿರುವ ಬ್ಯಾಟರಿ ಸುಮಾರು 10 ಗಂಟೆಗಳ ಕಾಲ ಬಾಳಿಕೆ ಬರಲಿದೆ. ಇರದಲ್ಲಿ ಉತ್ತಮ ಆಡಿಯೋ ಬೋಸ್ಟ್ ನೀಡಲಾಗಿದೆ. ಇದರೊಂದಿಗೆ HP ಆಕ್ಟಿವ್ ಪೆನ್ ಸಹ ದೊರೆಯಲಿದೆ. ಇದು ಚಿತ್ರಗಳನ್ನು ಬರೆಯಲು ಉಪಯುಕ್ತವಾಗಿದೆ.
11.6 ಇಂಚಿನ HP ಪೆವಿಲಿಯನ್ x360 ಬೆಲೆ ರೂ. 40,290 ಆಗಿದ್ದು, 14 ಇಂಚಿನ HP ಪೆವಿಲಿಯನ್ x360 ಬೆಲೆ ರೂ.55,290 ಆಗಲಿದೆ. ಈ ನೋಟ್ ಪ್ಯಾಡ್ ವಿಶ್ವದಾದ್ಯಂತ ಲಭ್ಯವಿದ್ದು, ಆನ್ ಲೈನ್ ಮತ್ತು ಆಫ್ ಲೈನ್ ಸ್ಟೋರ್ ಗಳಲ್ಲಿ ದೊರೆಯಲಿದೆ.
HP ಸ್ಪೆಕ್ಟರ್ x360:
HP ಸ್ಪೆಕ್ಟರ್ x360 ನೋಟ್ ಪ್ಯಾಡ್ ನಲ್ಲಿ 13.3 ಇಂಚಿನ FHD ಡಿಸ್ ಪ್ಲೇ ಅಳವಡಿಲಾಗಿದ್ದು, ಇಂಟೆಲ್ 7 ನೇ ತಲೆಮಾರಿನ ಪ್ರೋಸೆಸರ್ ಹೊಂದಿದೆ. 16GB RAM ಮತ್ತು 512 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಇದು 1.3 ಕೆಜಿ ತೂಕವಿದೆ. ಈ ನೋಟ್ ಪ್ಯಾಡ್ ಬೆಲೆ ರೂ.1,15,290 ನಿಂದ ಆರಂಭವಾಗಲಿದೆ.


Click it and Unblock the Notifications