HP ಆಮ್ನಿ 120Z ಆಲ್ ಇನ್ ವನ್ ಕಂಪ್ಯೂಟರ್

ಟ್ಯಾಬ್ಲೆಟ್ ಗಳ ಭರಾಟೆಯಲ್ಲಿ, ಲ್ಯಾಪ್ಟಾಪ್ ಗಳೇ ಕಮ್ಮಿಯಾಗುತ್ತಿದ್ದು, ಬಹಳ ದಿನಗಳ ನಂತರ ಡೆಸ್ಕ್ಟಾಪ್ ಗಳ ಬಗ್ಗೆ ಮಾಹಿತಿ ಕೊಡೋಣ ಎಂದೆನಿಸಿ ಹುಡುಕಿದಾಗ ನಮಗೆ ಸಿಕ್ಕಿದ್ದು HP ಬಿಡುಗಡೆ ಮಾಡಿರುವ ಆಮ್ನಿ 120Z ಮಾಡಲ್.
ಈ ಡೆಸ್ಕ್ಟಾಪ್ ಅನ್ನು ನೀವು ಆಲ್ ಇನ್ ವನ್ ಕಂಪ್ಯೂಟರ್ ಅಂತಲೇ ಕರೆಯಬಹುದು. ಹಾಗಿದೆ ಇದರ ಫೀಚರುಗಳು.
ವಿಂಡೋಸ್ 7 ತಂತ್ರಾಂಶ, ಸ್ಟೈಲಿಶ್ ಡಿಸೈನ್ ಹಾಗು ಉತ್ತಮ ತಾಂತ್ರಿಕ ಅಂಶಗಳು ಇರುವ ಈ ಕಂಪ್ಯೂಟರ್ ನ ಇತರೇ ಫೀಚರುಗಳು ಈ ರೀತಿ ಇವೆ:
- ವಿಂಡೋಸ್ 7 ಹೋಂ ಪ್ರೀಮಿಯಂ ಆಪರೇಟಿಂಗ್ ಸಿಸ್ಟಮ್
- AMD E450 ಡ್ಯುಯಲ್ ಕೋರ್ ಪ್ರೊಸೆಸರ್
- 1920X1080 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿರುವ 20 ಇಂಚ್ ನ ಫುಲ್ HD ಸ್ಕ್ರೀನ್
- ಫಾಸ್ಟ್ ವೆಬ್ ಬ್ರೌಸಿಂಗ್
- LEDಬ್ಯಾಕ್ ಲಿಟ್ ಸ್ಕ್ರೀನ್
- ನಿಸ್ತಂತು LAN ಮತ್ತು Wi-Fi ಸಂಪರ್ಕ ಹೊಂದಿಸಲು ಆಂತರಿಕ ಆಂಟೆನಾ
- ಆಂತರಿಕ ಮೈಕ್ ಹಾಗು ವೆಬ್ ಕ್ಯಾಮ್
- 6 ಇನ್ 1 ಡಿಜಿಟಲ್ ಮೀಡಿಯಾ ಕಾರ್ಡ್ ರೀಡರ್
ಇದರ ಬೆಲೆ ಸುಮಾರು 20,000 ರೂಪಾಯಿ.
Comments
Best Mobiles in India


Click it and Unblock the Notifications




