HP: ಬಹುನಿರೀಕ್ಷಿತ ಲ್ಯಾಪ್‌ಟಾಪ್ ಬಿಡುಗಡೆ; ಇದೇ ಮೊದಲು.. ಏನದು? ಬೆಲೆ ಎಷ್ಟು?
ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಹೆಚ್‌ಪಿ (HP) ಭಾರೀ ಬೇಡಿಕೆ ಹೊಂದಿದೆ. ಕಂಪನಿಯ ಲ್ಯಾಪ್ಟಾಪ್ಗಳು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿವೆ. ಹೆಚ್‌ಪಿ ಬಹಳ ಹಿಂದಿನಿಂದ ತನ್ನ ಬ್ರಾಂಡ್ನ ಅಡಿಯಲ್ಲಿ ಹೊಸ ಮಾದರಿಯ ಲ್ಯಾಪ್ಟಾಪ್ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ. ಇದೀಗ, ಕಂಪನಿಯು ಭಾರತದಲ್ಲಿ ಹೊಸದಾಗಿ ಹೆಚ್‌ಪಿ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 (HP OmniBook Ultra Flip 14) ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು, ಹೆಚ್ಪಿಯಿಂದ ಈ ಬಾರಿಯ ಹೊಸ ಲ್ಯಾಪ್‌ಟಾಪ್ ಲೋಕಾರ್ಪಣೆಗೊಂಡಿದೆ. ಇದು ಮೊದಲ 2-ಇನ್-1 ಎಐ ಪಿಸಿ (AI PC) ಲ್ಯಾಪ್‌ಟಾಪ್ ಆಗಿದೆ. ಇದು ಇಂಟೆಲ್ ಕೋರ್ ಅಲ್ಟ್ರಾ (ಸರಣಿ 2) ಪ್ರೊಸೆಸರ್‌ಗಳಿಂದ ಚಾಲಿತವಾಗಿರುವ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದು ಕೃತಕ ಬುದ್ಧಿಮತ್ತೆ (ಎಐ) ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು, ಈ ಲ್ಯಾಪ್‌ಟಾಪ್ 14 ಇಂಚಿನ 2.8K ಓಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದೆ. 65W ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಕರ್ಷಕ ಫೀಚರ್ಸ್ಗಳನ್ನು ಹೊಂದಿದೆ.

ಹೆಚ್‌ಪಿ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹೆಚ್‌ಪಿ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಅಲ್ಟ್ರಾ 7 ಆರಂಭಿಕ ಬೆಲೆ 1,81,999 ರೂ. ಆಗಿದೆ. ಪ್ರಸ್ತುತ ಲ್ಯಾಪ್‌ಟಾಪ್ ಅಮೆಜಾನ್, ಫ್ಲಿಪ್‌ಕಾರ್ಟ್, ಹೆಚ್‌ಪಿಯ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟವಾಗಲಿದೆ. ನೀವು, ಅಟ್ಮಾಸ್ಫಿರಿಕ್ ಬ್ಲೂ ಮತ್ತು ಎಕ್ಲಿಪ್ಸ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು.
ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಅಲ್ಟ್ರಾ 9 ಅನ್ನು 1,91,999 ರೂ. ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ನೀವು, ಈ ಲ್ಯಾಪ್‌ಟಾಪ್ ಅನ್ನು ನೀಲಿ ಬಣ್ಣದಲ್ಲಿ ಖರೀದಿಸಬಹುದು. ನವೆಂಬರ್ ತಿಂಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಹೆಚ್‌ಪಿ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹೆಚ್‌ಪಿ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಲ್ಯಾಪ್‌ಟಾಪ್‌ನ ಎರಡೂ ರೂಪಾಂತರಗಳು 14 ಇಂಚಿನ 2.8K ಓಎಲ್ಇಡಿ ಟಚ್ ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2,880 x 1,800 ಪಿಕ್ಸೆಲ್ ರೆಸಲ್ಯೂಶನ್, 48Hz ಮತ್ತು 120Hz ರಿಫ್ರೆಶ್ ದರ, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು GOR 5 ರಕ್ಷಣೆ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಇಂಟೆಲ್ ಕೋರ್ ಅಲ್ಟ್ರಾ 7 ಲ್ಯಾಪ್‌ಟಾಪ್ 256V ಪ್ರೊಸೆಸರ್ ಹೊಂದಿದೆ. ಇದು 16GB LPDDR5X RAM ಅನ್ನು ಹೊಂದಿದೆ. ಆದರೆ, ದುಬಾರಿ ರೂಪಾಂತರವು ಕೋರ್ ಅಲ್ಟ್ರಾ 258V ಪ್ರೊಸೆಸರ್ ಜೊತೆಗೆ 32GB LPDDR5X RAM ಅನ್ನು ಹೊಂದಿದೆ. ಹೆಚ್‌ಪಿ 1TB M.2 SSD ಸ್ಟೋರೇಜ್‌ನೊಂದಿಗೆ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಅನ್ನು ಬಿಡುಗಡೆ ಮಾಡಿದೆ. ಇದು ವಿಂಡೋಸ್ 11 ನಲ್ಲಿ (Windows 11) ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ ಸೆಟಪ್
ಹೆಚ್‌ಪಿ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಅಲ್ಟ್ರಾ 7 ಮತ್ತು ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಅಲ್ಟ್ರಾ 9 ಒಂದೇ ರೀತಿಯ ಕ್ಯಾಮೆರಾ ಹೊಂದಿವೆ. ಎರಡೂ ರೂಪಾಂತರಗಳಲ್ಲಿ 9 ಮೆಗಾಪಿಕ್ಸೆಲ್ ಐಆರ್ (IR) ಕ್ಯಾಮೆರಾ ಲಭ್ಯವಿದೆ.
ಬ್ಯಾಟರಿ ಬ್ಯಾಕಪ್
ಹೆಚ್‌ಪಿ ಓಮ್ನಿಬುಕ್ ಅಲ್ಟ್ರಾ ಫ್ಲಿಪ್ 14 ಲ್ಯಾಪ್‌ಟಾಪ್ 6 ಸೆಲ್ 64WHr Li-Po ಬ್ಯಾಟರಿಯನ್ನು ಹೊಂದಿದೆ. ಇದನ್ನು ಚಾರ್ಜ್ ಮಾಡಲು, 65W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಲ್ಯಾಪ್‌ಟಾಪ್ ಒಂದೇ ಚಾರ್ಜ್‌ನಲ್ಲಿ 21 ಗಂಟೆಗಳವರೆಗೆ ಸ್ಥಳೀಯ ವಿಡಿಯೋ ಪ್ಲೇಬ್ಯಾಕ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
ಇತರೆ ವೈಶಿಷ್ಟ್ಯಗಳು
ನೂತನ ಲ್ಯಾಪ್‌ಟಾಪ್ (ಎರಡೂ ರೂಪಾಂತರಗಳು) 31.37 x 21.62 x 1.49 ಸೆಂ.ಮೀ ಅಳತೆ ಮತ್ತು 1.34 ಕಿಲೋ ತೂಕ ಹೊಂದಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ ಫೈ 7 ಮತ್ತು ಬ್ಲೂಟೂತ್ 5.4 ಒಳಗೊಂಡಿದೆ. ಇದರೊಂದಿಗೆ, ಲ್ಯಾಪ್‌ಟಾಪ್ ಎರಡು ಥಂಡರ್‌ಬೋಲ್ಟ್ 4 ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳು, ಒಂದು ಯುಎಸ್‌ಬಿ ಟೈಪ್ ಸಿ ಪೋರ್ಟ್ ಮತ್ತು 3.5 ಎಂಎಂ ಕಾಂಬೊ ಆಡಿಯೋ ಪೋರ್ಟ್ ಹೊಂದಿದೆ.


Click it and Unblock the Notifications








