Home
ಕಂಪ್ಯೂಟರ್‌‌

ಎಚ್ ಪಿ ಪೆವಿಲಿಯನ್ ಡಿವಿ6ಟಿ ಲ್ಯಾಪ್ ಟಾಪ್ ವಿಮರ್ಶೆ

By Super
ಎಚ್ ಪಿ ಪೆವಿಲಿಯನ್ ಡಿವಿ6ಟಿ ಲ್ಯಾಪ್ ಟಾಪ್ ವಿಮರ್ಶೆ
ಗ್ರಾಹಕರ ಬೇಡಿಕೆ, ನಿರೀಕ್ಷೆ ಹೆಚ್ಚಾಗುತ್ತಿರುವುದರಿಂದ ಇದೀಗ ಲ್ಯಾಪ್ ಟಾಪ್ ಗಳು ಆಕರ್ಷಕ ಫೀಚರುಗಳಿಂದ ಮಾರುಕಟ್ಟೆಗೆ ಆಗಮಿಸುತ್ತಿವೆ. ಗೇಮಿಂಗ್ ಮತ್ತು ಅತ್ಯಧಿಕ ದಕ್ಷತೆಯ ಗ್ಯಾಜೆಟ್ ಗಳು ಪ್ರತಿನಿತ್ಯ ಅನಾವರಣಗೊಳ್ಳುತ್ತಿವೆ. ಪರಂತು, ಇತ್ತೀಚೆಗೆ ಮಾರುಕಟ್ಟೆಗೆ ಬಂದ ಎಚ್ ಪಿ ಪೆವಿಲಿಯನ್ ಡಿವಿ6ಟಿ ಲ್ಯಾಪ್ ಟಾಪ್ ಕೂಡ ಈ ಸಾಲಿಗೆ ಸೇರುತ್ತದೆ. ಇದರಲ್ಲಿ ಸಾಕಷ್ಟು ಅನನ್ಯ ಫೀಚರುಗಳು ಗಮನ ಸೆಳೆಯುತ್ತವೆ.

ಗ್ಯಾಜೆಟ್ ಪ್ರಿಯರಿಗೆ ಇಷ್ಟವಾಗುವಂತೆ ಇದರಲ್ಲಿ ಸಾಕಷ್ಟು ಅಪ್ಲಿಕೇಷನ್ ಗಳು, ಫೀಚರುಗಳು, ಟೂಲ್ ಗಳು ಸಿಗುತ್ತವೆ. ಮೆಟಾಲಿಕ್ ಕಪ್ಪು ಬಣ್ಣದಲ್ಲಿ ಅಲ್ಯುಮಿನಿಯಂ ಚಾಸೀ ವಿನ್ಯಾಸದಿಂದ ಮೊದಲ ನೋಟಕ್ಕೆ ಪೆವಿಲಿಯನ್ ಇಷ್ಟವಾಗುತ್ತದೆ.

ಇದು ವಿಂಡೋಸ್ 7 ಹೋಂ ಪ್ರೀಮಿಯಂ 64 ಬಿಟ್ ಅಪರೇಟಿಂಗ್ ಸಿಸ್ಟಮ್ ಹೊಂದಿದೆ. ಇದರಲ್ಲಿರುವುದು ಎರಡನೇ ತಲೆಮಾರಿನ ಇಂಟೆಲ್ ಕೋರ್ ಐ5 ಪ್ರೊಸೆಸರ್. ನೂತನ ಎಚ್ ಪಿ ಪೆವಿಲಿಯನ್ ದರ ಸುಮಾರು 34,552 ರುಪಾಯಿ ಆಗಿದೆ.

ವಿಶೇಷತೆಗಳು
* ವಿಂಡೋಸ್ 7 ಹೋಂ ಪ್ರೀಮಿಯಂ ಅಪರೇಟಿಂಗ್ ಸಿಸ್ಟಮ್
* ಇಂಟೆಲ್ ಕೋರ್ ಐ5 ಪ್ರೊಸೆಸರ್
* ಇಂಟೆಲ್ ಗ್ರಾಫಿಕ್ಸ್ 3000
* ಡೇಟಾ ಸಂಗ್ರಹ ಸಾಮರ್ಥ್ಯ 8ಜಿಬಿ(2ಡಿಐಎಂಎಂ ಸ್ಲಾಟ್ ಮೂಲಕ)
* ಹಾರ್ಡ್ ಡ್ರೈವ್ ಸಾಮರ್ಥ್ಯ 640ಜಿಬಿ, 5400 ಆರ್ ಪಿಎಂ
* 3.0 ವರ್ಷನ್ ಸೂಪರ್ ಸ್ಪೀಡ್ ಯುಎಸ್ ಬಿ ಪೋರ್ಟ್, ಮಲ್ಟಿ ಮೆಮೊರಿ ಕಾರ್ಡ್ ಸ್ಲಾಟ್
* ಎಚ್ ಪಿ ಕೂಲ್ ಸೆನ್ಸ್ ತಂತ್ರಜ್ಞಾನ
* ಸುರಕ್ಷಿತ ಫೀಚರುಗಳು(ಫಿಂಗರ್ ಪ್ರಿಂಟರ್ ರೀಡರ್ ಇತ್ಯಾದಿ)
* ಬ್ಯಾಟರಿ ಬಾಳಿಕೆ 5.5 ಗಂಟೆ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+