Subscribe to Gizbot

ಹೊಸ ಎಚ್ ಪಿ ಪೆವಿಲಿಯನ್ ಕಂಪ್ಯೂಟರ್ ಹೀಗಿದೆ ನೋಡಿ

Posted By:
ಹೊಸ ಎಚ್ ಪಿ ಪೆವಿಲಿಯನ್ ಕಂಪ್ಯೂಟರ್ ಹೀಗಿದೆ ನೋಡಿ
ಎಚ್ ಪಿ ಕಂಪನಿಯು ನೂತನ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳನ್ನು ಪರಿಚಯಿಸುತ್ತಿದೆ. ಪ್ರತಿ ಸಾರಿಯೂ ಕಂಪನಿಯು ಗುಣಮಟ್ಟ ಮತ್ತು ಫೀಚರುಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ಕಂಪನಿಯು ಮಾರುಕಟ್ಟೆಯಲ್ಲಿ ಯಶಸ್ಸು ಪಡೆದುಕೊಳ್ಳುತ್ತಿದೆ.

ಇದೀಗ ಕಂಪನಿ ಹೊರತಂದ HP Pavilion p7-1126 ಡೆಸ್ಕ್ ಟಾಪ್ ಕಂಪ್ಯೂಟರ್ ಆಕರ್ಷಕವಾಗಿದೆ. ಕಪ್ಪು ಮತ್ತು ಅಲ್ಯುಮಿನಿಯಂ ಬಾಡಿ ಮೂಲಕ ಮಿನುಗುವ ಇದರ ವಿನ್ಯಾಸ ಇಷ್ಟವಾಗುತ್ತದೆ. ಇದರಲ್ಲಿರುವ ಎಲ್ ಇಡಿ ಲೈಟ್ ಕಣ್ಣಿಗೆ ಹಿತವನ್ನುಂಟು ಮಾಡುತ್ತದೆ.

ಎರಡು ಯುಎಸ್ ಬಿ ಪೋರ್ಟ್, ಡಿವಿಡಿ ಆರ್ ಡಬ್ಲ್ಯು ಡ್ರೈವ್, ಕಾರ್ಡ್ ಸ್ಲಾಟ್ ಇದರಲ್ಲಿದೆ. ಡೆಸ್ಕ್ ಟಾಪ್ ಹಿಂಭಾಗದಲ್ಲಿ ನಾಲ್ಕು ಯುಎಸ್ ಬಿ 2.0 ಮತ್ತು ಎರಡು ಯುಎಸ್ ಬಿ 3.0 ಪೋರ್ಟ್ ಇವೆ. ಮೈಕ್ರೊಫೋನ್ ಜಾಕ್, ಆಡಿಯೊ ಇನ್ ಮತ್ತು ಔಟ್, ಎಥರ್ನೆಟ್ ಪೊರ್ಟ್ ಜೊತೆಗಿದೆ. 802.11n ವೈಪೈ ಸಂಪರ್ಕ ಇವೆ.

ಎಚ್ ಪಿ ಪೆವಿಲಿಯನ್ ಪಿ7 ಡೆಸ್ಕ್ ಟಾಪ್ ನಲ್ಲಿ ಎಎಂಡಿ ಕ್ವಾಡ್ ಕೋರ್ A8-3800 ಪ್ರೊಸೆಸರ್ ಇದೆ. ಇದರ ವೇಗ 2.4 ಗಿಗಾ ಹರ್ಟ್ಸ್. ಇದು ಒಂದು ಟಿಬಿ ಹಾರ್ಡ್ ಡಿಸ್ಕ್ ಮತ್ತು 6 ಜಿಬಿ RAM ಹೊಂದಿದೆ. ಇದರಲ್ಲಿ ಸಾಕಷ್ಟು ಮ್ಯೂಸಿಕ್ ಮತ್ತು ವಿಡಿಯೋ ಸಂಗ್ರಹಿಸಿಡಬಹುದಾಗಿದೆ.

ಈ ಕಂಪ್ಯೂಟರಿನಲ್ಲಿ ಎಎಂಡಿ ರೇಡಿಯನ್ ಟಿಎಂ HD 6550D ಗ್ರಾಫಿಕ್ಸ್ ಕಾರ್ಡ್ ಇದೆ. ಇದು ಕಂಪ್ಯೂಟರ್ ಗೇಮ್ ಅನುಭವ ಹೆಚ್ಚಿಸಲಿದೆ. ಹೀಗೆ ಹತ್ತುಹಲವು ಆಕರ್ಷಕ ಫೀಚರುಗಳಿರುವ HP Pavilion p7 1126 ದರ ಸುಮಾರು 30 ಸಾವಿರ ರುಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot