Subscribe to Gizbot

ಎಚ್ ಪಿ ಪ್ರೊಬುಕ್: ಇದು ಬಿಸಿನೆಸ್ ಲ್ಯಾಪ್ ಟಾಪ್

Posted By: Super
ಎಚ್ ಪಿ ಪ್ರೊಬುಕ್: ಇದು ಬಿಸಿನೆಸ್ ಲ್ಯಾಪ್ ಟಾಪ್
ಬಿಸಿನೆಸ್ ಲ್ಯಾಪ್ ಟಾಪ್ ದರ ಯಾವತ್ತಿಗೂ ಅತ್ಯಧಿಕವಾಗಿರುತ್ತವೆ. ಯಾಕೆಂದರೆ ಅದರಲ್ಲಿ ಅತ್ಯಧಿಕ ವಿಶೇಷತೆಗಳು ಮತ್ತು ಫೀಚರುಗಳಿರುತ್ತವೆ. ಆದರೂ ಹೆಚ್ಚಿನ ಉದ್ದಿಮೆದಾರರು ಇಂತಹ ಲ್ಯಾಪ್ ಟಾಪ್ ಖರೀದಿಗೆ ಆಸಕ್ತಿ ವಹಿಸುವುದಿಲ್ಲ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಲ್ಯಾಪ್ ಟಾಪ್ ಗಳಿಗೆ ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ.

ಇಂತಹ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಎಚ್ ಪಿ ಕಂಪ್ಯೂಟರ್ HP ProBook 4430s ಎಂಬ ಲ್ಯಾಪ್ ಟಾಪ್ ಹೊರತಂದಿದೆ. ಇದರಲ್ಲಿ ಉದ್ದಿಮೆದಾರರು, ವೃತ್ತಿಪರರಿಗೆ ಅಗತ್ಯವಾದ ಹತ್ತು ಹಲವು ಫೀಚರುಗಳಿವೆ. ಪ್ರಮುಖ ಫೀಚರುಗಳ ಪಟ್ಟಿ ಇಲ್ಲಿದೆ.

ಫೀಚರುಗಳು

* 14 ಇಂಚಿನ ಸ್ಕ್ರೀನ್

* ಯುಎಸ್ ಬಿ 2.0 ಮತ್ತು ಯುಎಸ್ ಬಿ 3.0 ಪೋರ್ಟ್ಸ್

* 802.11ಎನ್ ವೈ-ಫೈ

* ಬ್ಲೂಟೂಥ್ 3.0

* ಆಪ್ಟಿಕಲ್ ಡ್ರೈವ್

* 320 ಜಿಬಿ ಹಾರ್ಡ್ ಡ್ರೈವ್

* ಇಂಟೆಲ್ ಎರಡನೇ ತಲೆಮಾರಿನ ಪ್ರೊಸೆಸರ್

* ಇಂಟಿಗ್ರೇಟೆಡ್ ಗ್ರಾಫಿಕ್ಸ್

* ತೂಕ: 2.2 ಕೆಜಿ

ಈ ಲ್ಯಾಪ್ ಟಾಪ್ ವಿನ್ಯಾಸ ಮತ್ತು ಡ್ಯೂಯಲ್ ಟೋನ್ ಲುಕ್ ಆಕರ್ಷಕವಾಗಿದೆ. 14 ಇಂಚಿನ ಸ್ಕ್ರೀನ್ 1366 x 768 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಇದೇ ಮಾದರಿಯ ಡಿಸ್ ಪ್ಲೇ ಹೆಚ್ಚಿನ ಬಿಸಿನೆಸ್ ಲ್ಯಾಪ್ ಟಾಪ್ ಗಳಲ್ಲಿ ಇರುತ್ತದೆ. ಎಸ್ ಆರ್ಎಸ್ ಸೌಂಡ್ ಫೀಚರುಗಳು ಇಷ್ಟವಾಗುತ್ತವೆ.

ಆಡಿಯೊ ಗುಣಮಟ್ಟ ಪ್ರೀಮಿಯಂ ಗುಣಮಟ್ಟದಾಗಿದೆ. ಸ್ಕ್ರೀನ್ ಮೇಲ್ಬಾಗದಲ್ಲಿ ಹೈಡೆಫಿನೇಷನ್ ವೆಬ್ ಕ್ಯಾಮ್ ಇದೆ. ಇದರಿಂದ ವಿಡಿಯೋ ಚಾಟಿಂಗ್ ಗಾಗಿ ಪ್ರತ್ಯೇಕ ವೆಬ್ ಕ್ಯಾಮ್ ಜೋಡಿಸಬೇಕಾದ ಅಗತ್ಯವಿಲ್ಲ. ಕೀಬೋರ್ಡ್ ನೋಡಲು ಆಕರ್ಷಕವಾಗಿದೆ.

ಈ ಲ್ಯಾಪ್ ಟಾಪ್ ನಲ್ಲಿ ವಿಜಿಎ ಮತ್ತು ಎಚ್ ಡಿಎಂಐ ಕನೆಕ್ಟಿವಿಟಿ ಪೋರ್ಟ್ಸ್ ಗಳಿವೆ. ಮಲ್ಟಿ ಫಾರ್ಮೆಟ್ ಕಾರ್ಡ್ ರೀಡರ್ ಇದರಲ್ಲಿದ್ದು, ಹೆಚ್ಚಿನ ಮೆಮೊರಿ ಕಾರ್ಡ್ ಗೆ ಬೆಂಬಲ ನೀಡುತ್ತದೆ. ಐ3, ಐ5 ಮ್ತು ಐ7 ಪ್ರೊಸೆಸರ್ ಆಯ್ಕೆಯಲ್ಲಿ ಈ ಲ್ಯಾಪ್ ಟಾಪ್ ದೊರಕುತ್ತದೆ. HP ProBook 4430s ಲ್ಯಾಪ್ ಟಾಪ್ ದರ ಸುಮಾರು 30 ಸಾವಿರ ರು. ಆಸುಪಾಸಿನಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot