ತನ್ನ ಲ್ಯಾಪ್ ಟ್ಯಾಪ್ ಬ್ಯಾಟರಿ ಬದಲಾಯಿಸಿಕೊಡಲಿದೆ HP: ಯಾಕೆ..?

By Lekhaka
|

ಜಾಗತೀಕ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಹೆಚ್ ಪಿ ಕಂಪನಿಯೂ ವಿಶ್ವದಲ್ಲಿ ಮಾರಾಟ ಮಾಡಿರುವ ಸುಮಾರು 50000 ಲ್ಯಾಪ್ ಟಾಪ್ ಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದ್ದು, ಅವುಗಳಲ್ಲಿರುವ ಬ್ಯಾಟರಿ ದೋಷ ಪೂರಿತವಾಗಿದ್ದು, ಅದನ್ನು ಬದಲಾಯಿಸಿಕೊಡಲಿದೆ ಎನ್ನಲಾಗಿದೆ. ಇದರಲ್ಲಿ ವಿವಿಧ ಸರಣಿಯ ಲ್ಯಾಪ್ ಟಾಪ್ ಗಳನ್ನು ಕಾಣಬಹುದಾಗಿದೆ ಎನ್ನಲಾಗಿದೆ.

ತನ್ನ ಲ್ಯಾಪ್ ಟ್ಯಾಪ್ ಬ್ಯಾಟರಿ ಬದಲಾಯಿಸಿಕೊಡಲಿದೆ HP: ಯಾಕೆ..?

ಗುಣಮಟ್ಟ ಹಾಗೂ ಸುಕ್ಷತೆಯ ವಿಚಾರದಲ್ಲಿ ಹೆಚ್ ಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿರುವ ಕಂಪನಿಯೂ ಇತ್ತೀಚಿಗೆ ಲಾಂಚ್ ಮಾಡಿರುವ ನೋಟ್ ಬುಕ್ ಕಂಪ್ಯೂಟರ್ ಮತ್ತು ಮೊಬೈಲ್ ವರ್ಕ್ ಸ್ಟೇಷನ್ ಗಳ ಬ್ಯಾಟರಿಯಲ್ಲಿ ದೋಷ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಮಂದಿ ಈ ಲ್ಯಾಪ್ ಟಾಪ್ ಗಳನ್ನು ಖರೀದಿ ಮಾಡಿದ್ದಾರೆ. ಅವರಿಂದ ಲ್ಯಾಪ್ ಟಾಪ್ ಗಳನ್ನು ಹಿಂಪಡೆದು ಹೊಸ ಬ್ಯಾಟರಿಯನ್ನು ಅಳವಡಿಸಿಕೊಡುವುದಾಗಿ ಹೆಚ್ ಪಿ ಹೇಳಿಕೆಯನ್ನು ನೀಡಿದೆ ಎನ್ನಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮಾರಾಟವಾದ ಲ್ಯಾಪ್ ಟಾಪ್ ಗಳು ಈ ಸರಣಿಯಲ್ಲಿದೆ.

ಡಿಸೆಂಬರ್ 2015 ರಿಂದ ಡಿಸೆಂಬರ್ 2017ರ ಒಳಗೆ ಜಾಗತಿಕವಾಗಿ ಮಾರಾಟವಾಗಿರುವ HP Probook 64x (G2 ಮತ್ತು G3), HP ProBook 65x (G2 ಮತ್ತು G3), HP x360 310 G2, HP ENVY m6, HP Pavilion x360, HP 11 ನೋಟ್ ಬುಕ್ ಕಂಪ್ಯೂಟರ್ ಮತ್ತು HP ZBook (17 G3, 17 G4, and Studio G3) ಮೊಬೈಲ್ ವರ್ಕ್ ಸ್ಟೆಷನ್ ಗಳ ಬ್ಯಾಟರಿಯನ್ನು ಕಂಪನಿಯೂ ಬದಲಾಯಿಸಿಕೊಡಲಿದೆ.

ಓಲಾ, ಊಬರ್ ದರಗಳನ್ನು ಫಿಕ್ಸ್ ಮಾಡಲು ಹೊರಟಿದೆ ಕರ್ನಾಟಕ ಸರ್ಕಾರ!!..ಉತ್ತಮ ನಿರ್ಧಾರವೇ?

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?

ಈಗಾಗಲೇ ಸ್ಮಾರ್ಟ್ ಫೋನ್ ಬ್ಯಾಟರಿಗಳು ಸ್ಪೋಟಗೊಂಡಿರುವ ಪ್ರಕರಣಗಳು ವರದಿಯಾಗುತ್ತಿರುವ ಕಾರಣ, ಗ್ರಾಹಕರಿಗರ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಹೆಚ್ ಪಿ ತನ್ನ ದೋಷಪೂರಿತ ಲ್ಯಾಪ್ ಟಾಪ್ ಗಳ ಬ್ಯಾಟರಿಯನ್ನು ಬದಲಾವಣೆ ಮಾಡಿಕೊಡಲಿದೆ ಎನ್ನಲಾಗಿದೆ.

Most Read Articles
Best Mobiles in India

Read more about:
English summary
Global PC and printer giant HP Inc in cooperation with various government regulatory agencies has now issued a worldwide voluntary safety recall and replacement program for certain notebook computer and mobile workstation batteries.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more