ಸ್ಮಾರ್ಟ್ ಟಚ್ ಮಾಡೋರಿಗೆ ವಿನೂತನ ಎಚ್ಪಿ ಉತ್ಪನ್ನ

Posted By: Staff
ಸ್ಮಾರ್ಟ್ ಟಚ್ ಮಾಡೋರಿಗೆ ವಿನೂತನ ಎಚ್ಪಿ ಉತ್ಪನ್ನ
ಎಚ್ ಪಿ ಕಂಪನಿಯು ಟಚ್ ಸ್ಮಾರ್ಟ್ ಡೆಸ್ಕ್ ಟಾಪ್ ಕಂಪ್ಯೂಟರಿನ ನೂತನ ಆವೃತ್ತಿ HP TouchSmart 9300 Elite ಹೊರತಂದಿದೆ. ಇದು ಟಚ್ ಸ್ಕ್ರೀನ್ ಅಪ್ಲಿಕೇಷನ್ ಹೊಂದಿರುವುದರಿಂದ ಹೆಚ್ಚು ಆಕರ್ಷಕವಾಗಿದೆ.

ಟೆಕ್ ಮಾಹಿತಿ ಮತ್ತು ವಿಶೇಷತೆ

* 23 ಇಂಚಿನ ಸ್ಕ್ರೀನ್

* ಮಲ್ಟಿ ಟಚ್ ಸ್ಕ್ರೀನ್

*  1920 x 1080 ಪಿಕ್ಸೆಲ್ ಡಿಸ್ ಪ್ಲೇ ರೆಸಲ್ಯೂಷನ್

* ವೇರ್ ಲೆಸ್ ಕೀಬೋರ್ಡ್

* ವೈರ್ ಲೆಸ್ ಮೌಸ್

* ಯುಎಸ್ ಬಿ 2.0 ಪೋರ್ಟ್ಸ್

* ಆಡಿಯೋ ಪೋರ್ಟ್ಸ್

* ಎಥರ್ನೆಟ್

* ಮೆಮೊರಿ ಕಾರ್ಡ್ ರೀಡರ್

* ಬ್ಲೂರೇ/ಡಿವಿಡಿ ಡ್ರೈವ್

* ವೈಫೈ

* ಒಂದು ಟಿಬಿ ಹಾರ್ಡ್ ಡಿಸ್ಕ್

* ಇಂಟೆಲ್ ಸೆಕೆಂಡ್ ಜನರೇಷನ್ ಪ್ರೊಸೆಸರ್

*ಎನ್ವಿಡಿಯಾ ಜಿಫೋರಸ್ ಜಿಟಿ 425 ಗ್ರಾಫಿಕ್ಸ್

ಒಟ್ಟಾರೆಯಾಗಿ ನೋಡಿದಾಗ ಈ ಕಂಪ್ಯೂಟರ್ ಎಚ್ ಪಿಯ ಹಳೆಯ ಆವೃತ್ತಿಯಂತೆ ಕಾಣುತ್ತದೆ. ಆದರೆ ಇದರಲ್ಲಿ ಕೆಲವು ಪರಿಷ್ಕೃತ ಫೀಚರುಗಳು ಇಷ್ಟವಾಗುತ್ತದೆ. ವೈರ್ ಲೆಸ್ ಕೀಬೋರ್ಡ್ ಮತ್ತು ಮೌಸ್ ಇದರ ಮೌಲ್ಯ ಹೆಚ್ಚಿಸಿದೆ.

ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಇದರಲ್ಲಿ ಎರಡು ಉಚಿತ So-DIMM ಸ್ಲಾಟುಗಳಿವೆ. ಒಟ್ಟು 7 ಯುಎಸ್ ಬಿ ಪೋರ್ಟ್ ಗಳಿವೆ.  ಡಿವಿಡಿ ಅಥವಾ ಬ್ಲೂರೇ ಡ್ರೂವ್ ಆಯ್ಕೆಮಾಡಿಕೊಳ್ಳುವ ಅವಕಾಶ ಬಳಕೆದಾರರಿಗಿದೆ. ಈ ಡೆಸ್ಕ್ ಟಾಪ್ ಕಂಪ್ಯೂಟರಿನಲ್ಲಿರೋದು ವಿಂಡೋಸ್ 7 ಪ್ರೊಫೆಷನಲ್ ಅಪರೇಟಿಂಗ್ ಸಿಸ್ಟಮ್.

HP TouchSmart 9300 Elite ದರ ಸುಮಾರು 40 ಸಾವಿರ ರು. ಆಸುಪಾಸಿನಲ್ಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot