HP ಹೊರತರಲಿದೆ ವಿಂಡೋಸ್ 8 ಟ್ಯಾಬ್ಲೆಟ್

By Varun
|

HP ಹೊರತರಲಿದೆ ವಿಂಡೋಸ್ 8 ಟ್ಯಾಬ್ಲೆಟ್
ಕಂಪ್ಯೂಟರುಗಳ ಉತ್ಪಾದನೆಯಲ್ಲಿ ಹೆಸರುವಾಸಿ ಕಂಪನಿಯಾದ ಎಚ್.ಪಿ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ. ಅದೇನೆಂದರೆ ಜಗತ್ತಿನಾದ್ಯಂತ ಕಾತರದಿಂದ ನಿರೀಕ್ಷಿಸುತ್ತಿರುವ ಮೈಕ್ರೋಸಾಫ್ಟ್ ತಂತ್ರಾಂಶ-ವಿಂಡೋಸ್ 8 ಇರುವ ಬಿಸ್ನೆಸ್ ಟ್ಯಾಬ್ಲೆಟ್ ಒಂದನ್ನು ಎಚ್.ಪಿ ಹೊರತರಲಿದೆ ಎಂಬ ಸುದ್ದಿ ಬಂದಿದೆ.

HP ಸ್ಲೇಟ್ 8 ಎಂದು ಈ ಟ್ಯಾಬ್ಲೆಟ್ ಗೆ ಹೆಸರಿಡಲಾಗಿದ್ದು, ಕಂಪನಿಯು ಈ ಟ್ಯಾಬ್ಲೆಟ್ ಅನ್ನು ವಿಶೇಷವಾಗಿ ವ್ಯಾಪಾರ ಮಾಡುವವರಿಗಾಗಿಯೇ ಸಿದ್ಧಪಡಿಸಲಾಗುವುದಂತೆ. ಐಪ್ಯಾಡ್ ಗಿಂತಲೂ ಸಣ್ಣದಾಗಿ ಇರಲಿರುವ ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇರಲಿವೆ:

  • 10.1 ಇಂಚಿನ ಡಿಸ್ಪ್ಲೇ

  • ವಿಂಡೋಸ್ 8 ವೃತ್ತಿಪರ O.S

  • ಡಿಜಿಟಲ್ ಪಿನ್ ಇನ್ ಪುಟ್

  • 0.68 ಕೆಜಿ ತೂಕ

  • 8 ರಿಂದ 10 ಗಂಟೆಗಳ ಉತ್ತಮ ಬ್ಯಾಟರಿ

  • ಡಾಕಿಂಗ್

  • ಪ್ರೊಟೆಕ್ಟ್ ಟೂಲ್ಸ್ ತಂತ್ರಾಂಶ

ಇದಷ್ಟೇ ಅಲ್ಲದೆ ಈ ಟ್ಯಾಬ್ಲೆಟ್ ಅನ್ನು ಹೊರಾಂಗಣದಲ್ಲೂ ನೋಡಬಹುದಾದ ಫೀಚರ್ ಹೊಂದಿದೆ. ವಿಂಡೋಸ್ 8 ತಂತ್ರಾಂಶವು ಅಕ್ಟೊಬರ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಈ ಟ್ಯಾಬ್ಲೆಟ್ ವರ್ಷದ ಕೊನೆಗೆ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X