ನಿರೀಕ್ಷಿಸಿ ಎಚ್ ಟಿಸಿ ಟ್ಯಾಬ್ಲೆಟ್ ಕಂಪ್ಯೂಟರ್

By Super
|

ನಿರೀಕ್ಷಿಸಿ ಎಚ್ ಟಿಸಿ ಟ್ಯಾಬ್ಲೆಟ್ ಕಂಪ್ಯೂಟರ್
ಜಗತ್ತಿನ ಸ್ಮಾರ್ಟ್ ಫೋನ್ ಲೋಕದಲ್ಲಿ ಎಚ್ ಟಿಸಿಗೆ ಐದನೇ ಸ್ಥಾನ. ಕಂಪನಿಯು ಜಗತ್ತಿನ ಮೊತ್ತ ಮೊದಲ ಕೋರ್ ಪ್ರೊಸೆಸರ್ ಫೋನನ್ನು ಹೊರತಂದಿತ್ತು. ಕಂಪನಿಯು ಹೊಸ ಟ್ಯಾಬ್ಲೆಟ್ ಕಂಪ್ಯೂಟರನ್ನು ಕಂಪನಿಯು 2012ರೊಳಗೆ ತರಲು ನಿರ್ಧರಿಸಿದೆ.

ಇಲ್ಲಿವರೆಗೆ ಕಂಪನಿಯು ಎರಡು ಟ್ಯಾಬ್ಲೆಟ್ ಕಂಪ್ಯೂಟರನ್ನು ಪರಿಚಯಿಸಿದೆ. ಅದರ ಹೆಸರು ಎಚ್ ಟಿಸಿ ಜೆಟ್ ಸ್ಟ್ರೀಮ್ ಮತ್ತು ಎಚ್ ಟಿಸಿ ಪ್ಲೇಯರ್. ಇದರಲ್ಲಿ ಎಚ್ ಟಿಸಿ ಪ್ಲೇಯರ್ ಕಂಪನಿಯ ಮೊದಲ ಟ್ಯಾಬ್ಲೆಟ್ ಆಗಿದ್ದು, ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ಅನಾವರಣಗೊಂಡಿತ್ತು. ಜೆಟ್ ಸ್ಟ್ರೀಮ್ ಮೊದಲ ಆಂಡ್ರಾಯ್ಡ್ ಆಧರಿತ ಟ್ಯಾಬ್ಲೆಟ್.

ಇದೀಗ ಟ್ಯಾಬ್ಲೆಟ್ ಮಾರುಕಟ್ಟೆಯು ಹೊಸ ಆವಿಷ್ಕಾರಗಳಿಗೆ ಕಾದಿದ್ದು, ಎಚ್ ಟಿಸಿ ವಿನೂತನ ಟ್ಯಾಬ್ಲೆಟ್ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ನೂತನ ಟ್ಯಾಬ್ಲೆಟ್ ಟೆಕ್ ಮಾಹಿತಿ ಬಹಿರಂಗಪಡಿಸಿಲ್ಲ.

ಕಂಪನಿಯ ಹಳೆಯ ಟ್ಯಾಬ್ಲೆಟ್ ಕಂಪ್ಯೂಟರ್ ಗಳು ಕೂಡ ಗ್ಯಾಡ್ಜೆಟ್ ಪ್ರೀಯರಿಗೆ ಮೆಚ್ಚುಗೆಯಾಗಿದೆ. ಆದರೆ ಇವು ಕೊಂಚ ದುಬಾರಿ ಕೂಡ ಹೌದು. 16 ಜಿಬಿ ಎಚ್ ಟಿಸಿ ಪ್ಲೇಯರ್ ದರ ಐಪಾಡ್ 2 ದರಷ್ಟಿದೆ. ಈ ಟ್ಯಾಬ್ಲೆಟ್ ಕಂಪ್ಯೂಟರಿಗೆ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿ ಉತ್ಪನ್ನಗಳೂ ಇಲ್ಲ. ಎಚ್ ಟಿಸಿ ಜೆಟ್ ಸ್ಟ್ರೀಮ್ ಕೂಡ ದುಬಾರಿ ಟ್ಯಾಬ್ಲೆಟ್. ಇದು 4ಜಿ ಎಲ್ ಟಿಇ ತಂತ್ರಜ್ಞಾನ ಹೊಂದಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಇವೆರಡು ಉತ್ಪನ್ನಕ್ಕಿಂತ ಮಿಗಿಲಾಗಿ ಕೊಟ್ಟ ಕಾಸಿಗೆ ಮೋಸವಿಲ್ಲದಂತಹ ಉತ್ಪನ್ನ ಹೊರಬರಲಿ ಎನ್ನುವುದು ಗ್ಯಾಡ್ಜೆಟ್ ಪ್ರಿಯರ ಬಯಕೆ. ಕಂಪನಿಯ ನೂತನ ಟ್ಯಾಬ್ಲೆಟ್ ಕಂಪ್ಯೂಟರ್ ಹೆಚ್ಚು ಫೀಚರುಗಳಿಂದ ವಿನೂತನವಾಗಿರಲಿ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X