ಎಚ್ ಟಿಸಿ ಕ್ಯೂಟ್ರೊ ಮತ್ತು ಮೊಟೊರೊಲಾ ಝೂಮ್ 2

Posted By: Staff
ಎಚ್ ಟಿಸಿ ಕ್ಯೂಟ್ರೊ ಮತ್ತು ಮೊಟೊರೊಲಾ ಝೂಮ್ 2
ಎಚ್ ಟಿಸಿ ಕಂಪನಿಯು ಮಾರುಕಟ್ಟೆಗೆ ಹಲವು ಆಕರ್ಷಕ ಟ್ಯಾಬ್ಲೆಟ್ ಕಂಪ್ಯೂಟರ್ ಪರಿಚಯಿಸಿದೆ. ಎಚ್ ಟಿಸಿ ಶಿಫ್ಟ್ ಮತ್ತು ಎಚ್ ಟಿಸಿ ಪ್ಲೈಯರ್ ಇದರಲ್ಲಿ ಪ್ರಮುಖ. ಕಂಪನಿಯ ಗ್ಯಾಡ್ಜೆಟ್ ಗಳು ಕಟ್ಟಿಂಗ್ ಎಡ್ಜ್ ತಂತ್ರಜ್ಞಾನದ ಮೂಲಕ ಹೆಚ್ಚು ಆಪ್ತವಾಗುತ್ತವೆ.

ಮೊಟೊರೊಲಾ ಕಂಪನಿ ಕೂಡ ಟ್ಯಾಬ್ಲೆಟ್ ಕಂಪ್ಯೂಟರ್ ಲೋಕದಲ್ಲಿ ಹಿಂದೆ ಬಿದ್ದಿಲ್ಲ. ಮೊಟೊರೊಲಾ ಝೂಮ್ ಟ್ಯಾಬ್ಲೆಟ್ ಇದರಲ್ಲಿ ಹೆಚ್ಚು ಜನಪ್ರಿಯ. ಕಂಪನಿಯು ಝೂಮ್ ನ ಪರಿಷ್ಕೃತ ಆವೃತ್ತಿ ಮೊಟೊರೊಲಾ ಝೂಮ್ 2. ಸದ್ಯ ಎಚ್ ಟಿಸಿ ಕ್ಯೂಟ್ರೊ ಮತ್ತು ಮತ್ತು ಮೊಟೊರೊಲಾ ಝೂಮ್ 2 ಟ್ಯಾಬ್ಲೆಟ್ ನಡುವಿನ ವ್ಯತ್ಯಾಸ, ಭಿನ್ನತೆ ಮತ್ತು ಸಾಮ್ಯತೆಗಳನ್ನು ನೋಡೋಣ.

* HTC Quattro ಮತ್ತು Motorola XOOM 2 ಕ್ಯಾಂಡಿ ಬಾರ್ ತಂತ್ರಜ್ಞಾನ ಹೊಂದಿದೆ. ಇವೆರಡು ಅತ್ಯುತ್ತಮ ದಕ್ಷತೆಯನ್ನು ಹೊಂದಿವೆ. ಇದರಲ್ಲಿ ಝೂಮ್ 2 ಟ್ಯಾಬ್ಲೆಟ್ 599 ಗ್ರಾಂ ತೂಕವಿದೆ. ಕ್ಯೂಟ್ರೊ ಕೂಡ ಹಗುರ ಟ್ಯಾಬ್ಲೆಟ್. ಇದು 9 ಮಿ.ಮಿ. ದಪ್ಪವಿದೆ ಅಷ್ಟೇ.

* ಎರಡು ಟ್ಯಾಬ್ಲೆಟ್ ಗಳು 10.10 ಇಂಚಿನ ಡಿಸ್ ಪ್ಲೇ ಹೊಂದಿವೆ. ಇವೆರಡೂ ಮಲ್ಟಿ ಟಚ್ ಸಾಮರ್ಥ್ಯ ಹೊಂದಿವೆ. ಝೂಮ್2 1280 x 720 ಫಿಕ್ಸೆಲ್ ರೆಸಲ್ಯೂಷನ್ ಮತ್ತು HTC ಫ್ಲೈಯರ್ 1280 x 768 ಫಿಕ್ಸೆಲ್ ರೆಸಲ್ಯೂಷನ್ ಹೊಂದಿವೆ.

* ಇವೆರಡು ಟ್ಯಾಬ್ಲೆಟ್ ಲೈಟ್ ಸೆನ್ಸಾರ್ ಗಳನ್ನು ಮುಂಭಾಗದಲ್ಲಿ ಹೊಂದಿವೆ. ಇದು ಬೆಳಕು ಕಂಡಿಷನ್ ಮತ್ತು ಸ್ಕ್ರೀನ್ ಬ್ರೈಟ್ ನೆಸ್ ಹೊಂದಾಣಿಕೆ ಮಾಡಲು ನೆರವಾಗುತ್ತದೆ. ಇದು ಕರೆಂಟ್ ಉಳಿಸಲು ಸಹಕಾರಿ.

* ಎರಡೂ ಟ್ಯಾಬ್ಲೆಟ್ ಗಳು ಡ್ಯೂಯಲ್ ಕ್ಯಾಮರಾ ಹೊಂದಿವೆ. ಝೂಮ್ 2 ಟ್ಯಾಬ್ಲೆಟ್ 5 ಮೆಗಾಫಿಕ್ಸೆಲ್ ಕ್ಯಾಮರಾ ಹೊಂದಿದ್ದು, ಆಟೋಫೋಕಸ್ ಫೀಚರ್ ಹೊಂದಿದೆ. ಇದರಲ್ಲಿ ಎಲ್ ಇಡಿ ಫ್ಲಾಷ್ ಕೂಡ ಇದೆ. ಎಚ್ ಟಿಸಿ ಕ್ಯೂಟ್ರೊ ಪ್ರಮುಖ ಕ್ಯಾಮರಾ 2 ಮೆಗಾಫಿಕ್ಸೆಲ್ ಆಗಿದೆ. ಎರಡೂ ಟ್ಯಾಬ್ಲೆಟ್ ನಲ್ಲಿಯೂ ವಿಡಿಯೋ ಕಾಲಿಂಗ್ ಗೆ ಸಹಕರಿಸುವ 1.3 ಮೆಗಾಫಿಕ್ಸೆಲ್ ಕ್ಯಾಮರಾಗಳಿವೆ.

* ಮೊಟೊರೊಲಾ ಝೂಮ್ 2 ಡ್ಯೂಯಲ್ ಕೋರ್ ಪ್ರೊಸೆಸರ್ ಹೊಂದಿದ್ದು, 1200 ಮೆಗಾಹರ್ಟ್ಸ್ ವೇಗ ಹೊಂದಿದೆ. ಇದರ ಸಂಪೂರ್ಣ ಸಂಗ್ರಹ ಸಾಮರ್ಥ್ಯ 16 ಜಿಬಿ. ಎಚ್ ಟಿಸಿ ಕ್ಯೂಟ್ರೊ ಟ್ಯಾಬ್ಲೆಟ್ ಕ್ವಾಡ್ ಕೋರ್ ಟೆಗ್ರಾ 3 ಪ್ರೊಸೆಸರ್ ಹೊಂದಿದ್ದು, 1 ಜಿಬಿಯ RAM ಹೊಂದಿದೆ. ಇದರಲ್ಲಿ ಮೊಟೊರೊಲಾ ಪ್ರೊಸೆಸರಿಗಿಂತ ಕೊಂಚ ವೇಗವಾಗಿ ಆಕ್ಸೆಸ್ ಮಾಡಬಹುದಾಗಿದೆ.

* ಎರಡೂ ಟ್ಯಾಬ್ಲೆಟ್ ಗಳೂ ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಹೊಂದಿವೆ. ಕ್ಯೂಟ್ರೊ ಆಂಡ್ರಾಯ್ಡ್ 4.0 ಆವೃತ್ತಿ ಹೊಂದಿದ್ದು, ಝೂಮ್ 2 ಆಂಡ್ರಾಯ್ಡ್ 3.2 ಆವೃತ್ತಿಯನ್ನು ಹೊಂದಿದೆ.

* ಎರಡೂ ಟ್ಯಾಬ್ಲೆಟ್ ನಲ್ಲೂ ಬ್ಲೂಟೂಥ್, ಯುಎಸ್ ಬಿ ಮತ್ತು ವೈಫೈ ಸೇರಿದಂತೆ ಸಾಕಷ್ಟು ಕನೆಕ್ಟಿವಿಟಿ ಆಯ್ಕೆಗಳಿವೆ. ಇವು ಅತ್ತಯುತ್ತಮ ಮಲ್ಟಿಮೀಡಿಯಾ ಸಪೋರ್ಟ್ ಹೊಂದಿದ್ದು, ಹೆಚ್ಚಿನ ಆಡಿಯೋ ಮತ್ತು ವಿಡಿಯೋಗಳನ್ನು ಯಾವುದೇ ತೊಂದರೆಯಿಲ್ಲದೇ ಪ್ಲೇ ಮಾಡಬಹುದಾಗಿದೆ.

* ಮೋಟೊರೊಲಾ ಝೂಮ್ 2 ದರ ಸುಮಾರು 27,500 ರು. ಇದೆ. ಆಂತರಿಕ ಸಂಗ್ರಹ ಸಾಮರ್ಥ್ಯಕ್ಕೆ ಅನುಗುಣವಾಗಿ ದರ ಹೆಚ್ಚಾಗಬಹುದು. ದೇಶದಲ್ಲಿ ಎಚ್ ಟಿಸಿ ಕ್ಯೂಟ್ರೊ ದರ ಎಷ್ಟಿದೆ ಎಂದು ಕಂಪನಿ ಪ್ರಕಟಿಸಿಲ್ಲ.

Please Wait while comments are loading...
Opinion Poll

Social Counting