ನಿರೀಕ್ಷಿಸಿ: HTC ಕ್ಯೂಟ್ರೊ ಟ್ಯಾಬ್ಲೆಟ್ ಕಂಪ್ಯೂಟರ್

By Super
|

ನಿರೀಕ್ಷಿಸಿ: HTC ಕ್ಯೂಟ್ರೊ ಟ್ಯಾಬ್ಲೆಟ್ ಕಂಪ್ಯೂಟರ್
ಎಚ್ ಟಿಸಿ ಕಂಪನಿಯು ಪರಿಚಯಿಸಲಿರುವ ಹೊಸ ಟ್ಯಾಬ್ಲೆಟ್ ಕಂಪ್ಯೂಟರ್ ಕುರಿತು ಗ್ಯಾಡ್ಜೆಟ್ ಲೋಕದಲ್ಲಿ ಆಗಾಗ ಬ್ರೇಕಿಂಗ್ ನ್ಯೂಸ್ ಗಳು ಹರಿದಾಡುತ್ತಿವೆ. ಎಚ್ ಟಿಸಿ ಕಂಪನಿಯು ನೂತನ ಟ್ಯಾಬ್ಲೆಟ್ ಕಂಪ್ಯೂಟರ್ ಹೆಸರು ಎಚ್ ಟಿಸಿ ಕ್ಯೂಟ್ರೊ.

HTC Quattro ಟ್ಯಾಬ್ಲೆಟ್ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. 2012ರ ಫೆಬ್ರವರಿ ತಿಂಗಳಲ್ಲಿ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸಿನಲ್ಲಿ ಈ ಟ್ಯಾಬ್ಲೆಟ್ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಎಚ್ ಟಿಸಿ ಮತ್ತು ಎನ್ ವಿಡಿಯಾ(NVIDIA) ಮೈತ್ರಿಯಾಗಿರುವುದರಿಂದ ಹಲವು ಆಕರ್ಷಕ ಸಾಧನಗಳು ಮಾರುಕಟ್ಟೆಗೆ ಬಂದಾಗಿವೆ. ನೂತನ ಟ್ಯಾಬ್ಲೆಟಿನಲ್ಲೂ ಎನ್ ವಿಡಿಯಾ ಕಮಾಲ್ ಜೋರಾಗಿಯೇ ಇರಲಿದೆ.

ಎಚ್ ಟಿಸಿ ಕ್ಯೂಟ್ರೊ ಟ್ಯಾಬ್ಲೆಟ್ 10.1 ಇಂಚಿನ ಡಿಸ್ ಪ್ಲೇ ಹೊಂದಿರಲಿದೆ. ಇದರ ಸ್ಕ್ರೀನ್ 1280 x 768 ಪಿಕ್ಸೆಲ್ ರೆಸಲ್ಯೂಷನ್ ಹೊಂದಿರಲಿದೆ. ಇದರಿಂದಾಗಿ ಇದರಲ್ಲಿ ಅತ್ಯಧಿಕ ಗುಣಮಟ್ಟದ ವಿಡಿಯೋ ಮತ್ತು ಹೈ ಗ್ರಾಫಿಕ್ಸ್ ಗೇಮ್ಸ್ ಆಡಬಹುದಾಗಿದೆ.

ಅಂದ ಹಾಗೆ ಈ ಟ್ಯಾಬ್ಲೆಟಿನಲ್ಲಿ ಎರಡು ಕ್ಯಾಮರಾಗಳಿರಲಿವೆ. ಟ್ಯಾಬ್ಲೆಟ್ ಹಿಂಭಾಗದಲ್ಲಿ 2 ಮೆಗಾ ಪಿಕ್ಸೆಲಿನ ಪ್ರಮುಖ ಕ್ಯಾಮರಾವಿದೆ. ಇದರಲ್ಲಿ ಫುಲ್ ಹೈಡೆಫಿನೇಷನ್ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಎರಡನೆ ಕ್ಯಾಮರಾ 1.3 ಮೆಗಾ ಫಿಕ್ಸೆಲ್ ನದ್ದಾಗಿದ್ದು ಟ್ಯಾಬ್ಲೆಟ್ ಮುಂಭಾಗದಲ್ಲಿರಲಿದೆ.

ವಿಡಿಯೋ ಕರೆಗಳನ್ನು ಮಾಡಲು ಕೂಡ ಈ ಕ್ಯಾಮರಾಗಳನ್ನು ಬಳಸಬಹುದು. ಮುಂಭಾಗದಲ್ಲಿರುವ ಕ್ಯಾಮರಾದಲ್ಲಿ 720 ಪಿ ರಿಸಲ್ಯೂಷನಿನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳಬಹುದಾಗಿದೆ.

ಎಚ್ ಟಿಸಿ ಕ್ಯೂಟ್ರೊ ಟ್ಯಾಬ್ಲೆಟ್ NVIDIA ಪ್ರೊಸೆಸರ್ ಹೊಂದಿರಲಿದೆ. ಈ ಟ್ಯಾಬ್ಲೆಟ್ AP30 Tegra 3 ಪ್ರೊಸೆಸರಿನಲ್ಲೂ ಕಾರ್ಯನಿರ್ವಹಿಸಲಿದೆ. ಈ ಟ್ಯಾಬ್ಲೆಟ್ ಕಂಪ್ಯೂಟರ್ 1 ಜಿಬಿ RAM ಹೊಂದಿರಲಿದ್ದು, 16 ಜಿಬಿ ಸಂಗ್ರಹ ಸಾಮರ್ಥ್ಯವನ್ನೂ ಹೊಂದಿರಲಿದೆ. ಮೆಮೊರಿ ಕಾರ್ಡ್ ಬಳಕೆ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಕನೆಕ್ಟಿವಿಟಿ ವಿಷಯಕ್ಕೆ ಬಂದರೆ ಇದರಲ್ಲಿ ಬ್ಲೂಟೂಥ್ ಆವೃತ್ತಿ 4.0 ಇರಲಿದೆ. ವೈಫೈ ಮುಂತಾದ ಫೀಚರುಗಳೂ ಇದರಲ್ಲಿರಲಿವೆ. ಬೀಟ್ಸ್ ಆಡಿಯೋ ಫೀಚರ್ ಇರೋದ್ರಿಂದ ಅತ್ಯುತ್ತಮ ಗುಣಮಟ್ಟದ ಸೌಂಡ್ ಕೇಳಬಹುದಾಗಿದೆ.

ಎಚ್ ಟಿಸಿ ಕ್ಯೂಟ್ರೊ ಟ್ಯಾಬ್ಲೆಟ್ ಇತ್ತೀಚಿನ ಆಂಡ್ರಾಯ್ಡ್ 4.0 ವರ್ಷನ್ ಹೊಂದಿರುವ ನಿರೀಕ್ಷೆಯಿದೆ. ಇದರ ದರದ ಕುರಿತು ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಪ್ರಾಮೀಸ್ ಗೊತ್ತಾದ ಕೂಡಲೇ ಹೇಳ್ತಿವಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X