Subscribe to Gizbot

ಹುವಾವೆಯಿಂದ ಹೊಸ ಮ್ಯಾಟ್ ಬುಕ್ ಲಾಂಚ್ ಶೀಘ್ರವೇ

Posted By: Tejaswini P G

ಹುವಾವೆ ಈ ವರ್ಷ ಮ್ಯಾಟ್ ಬುಕ್ D, ಮ್ಯಾಟ್ ಬುಕ್ E ಮತ್ತು ಮ್ಯಾಟ್ ಬುಕ್ X ಎಂಬ ಮೂರು ವಿಭಿನ್ನ ಲ್ಯಾಪ್ ಟಾಪ್ಗಳನ್ನು ಬಿಡುಗಡೆ ಮಾಡಿತ್ತು. ಈಗ ಮತ್ತೆ ಹುವಾವೆ ಸಂಸ್ಥೆಯು ಮ್ಯಾಟ್ ಬುಕ್ D ಯ ಹೊಸ ಆವೃತ್ತಿಯೊಂದನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಹುವಾವೆಯಿಂದ ಹೊಸ ಮ್ಯಾಟ್ ಬುಕ್ ಲಾಂಚ್ ಶೀಘ್ರವೇ

ಮ್ಯಾಟ್ ಬುಕ್ D(2018) ಎಂದು ಕರೆಯಲಾಗುವ ಈ ಹೊಸ ಆವೃತ್ತಿ ನೋಡಲು ತನ್ನ ಪೂರ್ವವರ್ತಿಯನ್ನೇ ಹೋಲುತ್ತಿದ್ದು ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಆದರೆ ಹೊಸ ಆವೃತ್ತಿಯಲ್ಲಿ ಅದರ ಸಿಪಿಯು ಮತ್ತು ಗ್ರಾಫಿಕ್ಸ್ ಕಾರ್ಡ್ ಅನ್ನು ಅಪ್ಗ್ರೇಡ್ ಮಾಡಲಾಗಿದೆ. ಹುವಾವೆ ಮ್ಯಾಟ್ ಬುಕ್ D(2018) ಮೆಟಲ್ ಯುನಿಬಾಡಿ ವಿನ್ಯಾಸವನ್ನು ಹೊಂದಿದ್ದು ಕೇವಲ 16.9mm ದಪ್ಪವಾಗಿದೆ. 15.6 ಇಂಚ್ ಡಿಸ್ಪ್ಲೇ ಹೊಂದಿರುವ ಹುವಾವೆ ಮ್ಯಾಟ್ ಬುಕ್ D(2018) 83% ನಷ್ಟು ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದ್ದು ತನ್ನ ಪೂರ್ವವರ್ತಿಯನ್ನೇ ಹೋಲುತ್ತಿದೆ.

1920X1080 ಪಿಕ್ಸೆಲ್ಗಳ ಫುಲ್ HD ರೆಸೊಲ್ಯೂಶನ್ ನ ಇದರ ಡಿಸ್ಪ್ಲೇ 173-ಡಿಗ್ರೀ ವ್ಯೂವಿಂಗ್ ಆಂಗಲ್, 45% ನಷ್ಟು NTSC ಬಣ್ಣಗಳ ಶ್ರೇಣಿಯ ವ್ಯಾಪ್ತಿ ಮತ್ತು 350 ನಿಟ್ಸ್ ಬ್ರೈಟ್ನೆಸ್ ಹೊಂದಿದೆ.

How to Sharing a Mobile Data Connection with Your PC (KANNADA)

ಇನ್ನು ಇದರ ಬಿಡಿಭಾಗಗಳ ಕುರಿತು ಹೇಳುವುದಾದರೆ ಹುವಾವೆ ಮ್ಯಾಟ್ ಬುಕ್ D(2018) ನಲ್ಲಿದೆ ಇಂಟೆಲ್ ನ 8th-ಜನರೇಶನ್ ಕೋರ್ i5-8250U ಪ್ರೊಸೆಸರ್ 8GB RAM ಜೊತೆಗೆ.ಇದರ ಮೂಲ ಆವೃತ್ತಿಯಲ್ಲಿ ಇಂಟೆಲ್ ಕೋರ್ i5 ಪ್ರೊಸೆಸರ್ ಇದ್ದು ಸ್ಟೋರೇಜ್ ಆಧಾರದ ಮೇಲೆ ಎರಡು ಭಿನ್ನ ಆವೃತ್ತಿಗಳಲ್ಲಿ ಲಭ್ಯವಿದೆ. ಒಂದು 256GB SSD ಸ್ಟೋರೇಜ್ ಹೊಂದಿದ್ದರೆ ಎರಡನೆಯದು 128GB SSD + 1TB HDD ಸ್ಟೋರೇಜ್.

ಮೊಬೈಲ್ ಡೇಟಾ ಮೂಲಕ ಕಂಪ್ಯೂಟರ್‌ಗೆ ಇಂಟರ್ನೆಟ್ ಕನೆಷನ್ ಪಡೆಯುವುದು ಹೇಗೆ..?

ಇನ್ನು ಹುವಾವೆ ಮ್ಯಾಟ್ ಬುಕ್ D(2018) ಯ ಉನ್ನತ ಆವೃತ್ತಿಯಲ್ಲಿ ಇಂಟೆಲ್ ಕೋರ್ i7-8550U ಸಿಪಿಯು ಇದ್ದು, 8GB RAM ಮತ್ತು 128GB SSD + 1TB HDD ಸ್ಟೋರೇಜ್ ಸಾಮರ್ಥ್ಯವಿದೆ.

ಇನ್ನು ಇದರ ಗ್ರಾಫಿಕ್ಸ್ ಪ್ರಾಸೆಸರ್ ಕುರಿತು ಹೇಳುವುದಾದರೆ ಈ ಹೊಸ ಲ್ಯಾಪ್ಟಾಪ್ ನಲ್ಲಿದೆ Nvidia MX150 ಪ್ರಾಸೆಸರ್. ಹುವಾವೆ ಮ್ಯಾಟ್ ಬುಕ್ D(2018) ನಲ್ಲಿರುವ 43.3Wh ಬ್ಯಾಟರಿ ಲ್ಯಾಪ್ಟಾಪ್ ಗೆ ಸತತ 10 ಘಂಟೆಗಳ ಕಾಲ ಕಾರ್ಯನಿರ್ವಹಿಸುವ ಸಾಮರ್ಥ್ಯ ನೀಡುತ್ತದಲ್ಲದೆ , 8.5 ಘಂಟೆಗಳ ವೀಡಿಯೋ ಪ್ಲೇಬ್ಯಾಕ್ ಸಮಯವನ್ನೂ ನೀಡುತ್ತದೆ.

ಹುವಾವೆ ಮ್ಯಾಟ್ ಬುಕ್ D(2018) ನಲ್ಲಿ ಡಾಲ್ಬಿ ಪ್ಯಾನರೋಮಿಕ್ ಸ್ಪೀಕರ್ ಸಿಸ್ಟಮ್ ಜೊತೆಗೆ ಎರಡು USB 3.0 ಪೋರ್ಟ್ , ಒಂದು USB 2.0 ಪೋರ್ಟ್ ಹಾಗೂ ಒಂದು HDMI ಪೋರ್ಟ್ ಇದೆ. ಅಲ್ಲದೆ ಈ ಲ್ಯಾಪ್ಟಾಪ್ ವೈಫೈ ಗೆ ಡ್ಯುಯಲ್ ಆಂಟೆನಾ ವಿನ್ಯಾಸ ಹೊಂದಿದ್ದು ನೆಟ್ವರ್ಕ್ ವ್ಯಾಪ್ತಿ ಮತ್ತು ಸಿಗ್ನಲ್ ರೇಂಜ್ ಅನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.

ಆಪಲ್ ಐಫೋನ್‌ ಗ್ರಾಹಕರಿಗೆ ಮಾಡಿದ್ಯಾ ಮೋಸ.? ಕ್ಷಮೆ ಕೇಳಿದ್ದು ಯಾಕೆ? ತಪ್ಪಿಗೆ ಪರಿಹಾರ?

ಹುವಾವೆ ಮ್ಯಾಟ್ ಬುಕ್ D(2018) ನ ಮೂರೂ ಆವೃತ್ತಿಗಳು ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಇನ್ನು ಇದರ ಬೆಲೆಗಳ ಕುರಿತು ಹೇಳುವುದಾದರೆ 256GB SSD ಸ್ಟೋರೇಜ್ ಮತ್ತು ಕೋರ್ i5 ಪ್ರಾಸೆಸರ್ ಹೊಂದಿರುವ ಆವೃತ್ತಿಯ ಬೆಲೆ CNY 5,188(ಅಂದಾಜು ರೂ 50,700), 128GB SSD + 1TB HDD ಸ್ಟೋರೇಜ್ ಸಾಮರ್ಥ್ಯ ಮತ್ತು ಕೋರ್ i5 ಪ್ರಾಸೆಸರ್ ಹೊಂದಿರುವ ಆವೃತ್ತಿಯ ಬೆಲೆ CNY 5,488( ಅಂದಾಜು ರೂ 53,640) ಮತ್ತು ಕೋರ್ i7-8550U ಸಿಪಿಯು ಮತ್ತು 128GB SSD + 1TB HDD ಸ್ಟೋರೇಜ್ ಆವೃತ್ತಿಯ ಬೆಲೆ CNY 6,688 (ಅಂದಾಜು ರೂ 65,400) ಆಗಿದೆ.

ಈ ಲ್ಯಾಪ್ಟಾಪ್ಗಳ ಜಾಗತಿಕ ಲಭ್ಯತೆ ಕುರಿತು ಸಧ್ಯ ಯಾವುದೇ ಮಾಹಿತಿ ಲಭ್ಯವಿಲ್ಲ.

English summary
The high-end model of the Huawei MateBook D (2018) features Intel Core i7-8550U CPU along with 8GB RAM.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot