ಐಬಾಲ್ ಕಾಂಪ್ ಬುಕ್ ಮಾರ್ವಲ್ 6: ಕಡಿಮೆ ಬೆಲೆ, ಪವರ್ ಫುಲ್ ಲಾಪ್ ಟಾಪ್

By: Precilla Dias

ಐಬಾಲ್ ಹೊಸದಾಗಿ ಕಾಂಪ್ ಬುಕ್ ಲ್ಯಾಪ್ ಟಾಪ್ ಗಳ ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಸರಣಿಯಲ್ಲಿ 'ಐಬಾಲ್ ಕಾಂಪ್ ಬುಕ್ ಮಾರ್ವಲ್ 6’ ಲಾಪ್ ಟಾಪ್ ಅತ್ಯುತ್ತಮವಾಗಿದ್ದು ಎಂಟ್ರಿ, ಮಿಡ್ ರೇಜ್ ಲಾಪ್ ಟಾಪ್ ಗಳಲ್ಲಿ ಇದು ಮೊದಲ ಸ್ಥಾನವನ್ನು ಅಲಂಕರಿಸಲಿದೆ ಎಂಬ ಮಾತು ಕೇಳಿಬಂದಿದ್ದು. ನೋಡಲು ಉತ್ತಮ ವಿನ್ಯಾಸವನ್ನು ಹೊಂದಿದೆ.

ಐಬಾಲ್ ಕಾಂಪ್ ಬುಕ್ ಮಾರ್ವಲ್ 6: ಕಡಿಮೆ ಬೆಲೆ, ಪವರ್ ಫುಲ್ ಲಾಪ್ ಟಾಪ್

ಈ ಲಾಪ್ ಟಾಪ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಐಬಾಲ್ ಸಿಇಓ, ಭಾರತೀಯ ಮಾರುಕಟ್ಟಯಲ್ಲಿ ಸದ್ಯ ಎಂಟ್ರಿ ಲೆವೆಲ್ ಮತ್ತು ಮಧ್ಯಮ ಸರಣಿಯ ಲಾಪ್ ಟಾಪ್ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಐಬಾಲ್ ಕಾಂಪ್ ಬುಕ್ ಸರಣಿಯನ್ನು ಪರಿಚಯಿಸುತ್ತಿದೆ ಎಂದಿದ್ದಾರೆ.

ಐಬಾಲ್ ಕಾಂಪ್ ಬುಕ್ ಮಾರ್ವಲ್ 6 ಲಾಪ್ ಟಾಪ್ ನಲ್ಲಿ 14 ಇಂಚಿನ HD ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಇದು 1.41 ಕೆಜಿ ತೂಕವನ್ನು ಹೊಂದಿದೆ. ಇದು ಇಂಟೆಲ್ ಸೆಲ್ ಕಾರ್ನ್ ಎನ್ 3350 ಪ್ರೋಸೆಸರ್ ಹೊಂದಿದ್ದು, ಇದು 2.4 GHz ವೇಗವನ್ನು ಹೊಂದಿದೆ ಎನ್ನಲಾಗಿದೆ. ಇದು ವೇಗವಾಗಿ ಕಾರ್ಯ ನಿರ್ವಹಿಸಲಿದ್ದು, ಒಂದೇ ಸಮಯದಲ್ಲಿ ಹಲವು ಟಾಸ್ಕ್ ಗಳನ್ನು ಮಾಡಲು ಇದು ಶಕ್ತವಾಗಿದೆ.

ಐಬಾಲ್ ಕಾಂಪ್ ಬುಕ್ ಮಾರ್ವಲ್ 6: ಕಡಿಮೆ ಬೆಲೆ, ಪವರ್ ಫುಲ್ ಲಾಪ್ ಟಾಪ್

ಇದಲ್ಲದೇ ಈ ಲ್ಯಾಟ್ ಟಾಪ್ ನಲ್ಲಿ 3GB RAM ಕಾಣಬಹುದಾಗಿದೆ, ಇದು ವಿಂಡೋಸ್ 10 ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಇದರಲ್ಲಿ 32 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೇ 128 GB ಇಂಟರ್ನಲ್ ಮೆಮೊರಿಯನ್ನು ಹಾಕಿಕೊಳ್ಳುವ ಅವಕಾಶವನ್ನು ನೀಡಿದೆ. 1 TB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವಿದ್ದು, ಇದರಲ್ಲಿ ಹಾರ್ಡ್ ಡಿಸ್ಕ್ ಹಾಕಿಕೊಳ್ಳಲುವ ಅವಕಾಶ ಮಾಡಿಕೊಟ್ಟಿದೆ.

ಇದರಲ್ಲಿ 5000mAh ಬ್ಯಾಟರಿಯನ್ನು ಕಾಣಬಹುದಾಗಿದ್ದು, ಹೊಸ ಮಾದರಿಯ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚಿನ ಬ್ಯಾಟರಿ ಬ್ಯಾಕಪ್ ನೀಡಲಿದೆ ಎನ್ನಲಾಗಿದೆ. ಇದಲ್ಲದೇ ಡ್ಯುಯಲ್ ಬ್ಯಾಂಡ್ ವೈಫೈ, ಬ್ಲೂಟೂತ್, ಮಿನಿ HDMI, USB 3.0 ಫೋರ್ಟ್ ನೀಡಲಾಗಿದೆ.

ಐಬಾಲ್ ಕಾಂಪ್ ಬುಕ್ ಮಾರ್ವಲ್ 6 ಲಾಪ್ ಟಾಪ್ ಈಗಾಗಲೇ ಎಲ್ಲಾ ರಿಟೇಲ್ ಶಾಪ್ ಗಳಲ್ಲಿ ದೊರೆಯುತ್ತಿದ್ದು, ಇದರ ಬೆಲೆ ಬಂದು ರೂ.14,299 ಆಗಿದ್ದು, ಒಂದು ವರ್ಷಗಳ ವ್ಯಾರೆಂಟಿಯನ್ನು ಹೊಂದಿದೆ ಎನ್ನಲಾಗಿದೆ. ವಿಂಡೋಸ್ 10 ಪ್ರೋ ನೊಂದಿಗೆ ಬೇಕು ಎನ್ನುವವರಿಗೆ ರೂ.17,799ಕ್ಕೇ ದೊರೆಯುತ್ತಿದೆ.

English summary
iball has just introduced a new addition to its range of CompBook laptops.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot